ರಾಂಚಿ: MS Dhoni Birtday : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿ ಮಹೇಂದ್ರ ಸಿಂಗ್ ಧೋನಿ (MS Dhoni) ಎಲ್ಲದರಲ್ಲೂ ಡಿಫ್ರೆಂಟ್. ಆಟದಲ್ಲೂ ಧೋನಿ ಡಿಫ್ರೆಂಟ್, ಓಟದಲ್ಲೂ ಡಿಫ್ರೆಂಟ್, ನಾಯಕತ್ವದಲ್ಲೂ ಡಿಫ್ರೆಂಟ್, ವ್ಯಕ್ತಿತ್ವದಲ್ಲೂ ಡಿಫ್ರೆಂಟ್. ತಾವು ಯಾಕೆ ಡಿಫ್ರೆಂಟ್ ಎಂಬುದನ್ನು ಧೋನಿ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.
ಜುಲೈ 7ರಂದು ಧೋನಿ ಅವರ 42ನೇ ವರ್ಷದ ಹುಟ್ಟುಹಬ್ಬ (Dhoni birthday). ಜನ್ಮದಿನವನ್ನು ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ, ಅತ್ಯಾಪ್ತರೊಂದಿಗೆ ಆಚರಿಸುವುದು ಸಾಮಾನ್ಯ. ಆದರೆ ಧೋನಿ ತಮ್ಮ ನೆಚ್ಚಿನ ನಾಯಿಗಳೊಂದಿಗೆ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಜಾರ್ಖಂಡ್’ನ ರಾಂಚಿಯಲ್ಲಿರುವ ತಮ್ಮ ನಿವಾಸದ ಹೊರಗೆ ತಮ್ಮ ನಾಯಿಗಳೊಂದಿಗೆ ಧೋನಿ ಕೇಕ್ ಕಟ್ ಮಾಡಿದ್ದಾರೆ. ಕಟ್ ಮಾಡಿದ ಕೇಕ್’ಗಳನ್ನು ನಾಯಿಗಳಿಗೆ ತಿನ್ನಿಸಿ ಸಂಭ್ರಮಿಸಿದ್ದಾರೆ. ಆ ಕ್ಯೂಟ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
MS Dhoni celebrating his 42nd birthday.
— Johns. (@CricCrazyJohns) July 8, 2023
What a beautiful video! pic.twitter.com/lXQGg1N3bW
ಎಂ.ಎಸ್ ಧೋನಿ ಶ್ವಾನಪ್ರಿಯ. ರಾಂಚಿಯಲ್ಲಿರುವ ತಮ್ಮ ಮನೆಯಲ್ಲಿ ಹತ್ತಕ್ಕೂ ಹೆಚ್ಚು ನಾಯಿಗಳನ್ನು ಸಾಕಿದ್ದಾರೆ. ಬೇರೆ ಬೇರೆ ತಳಿಯ ನಾಯಿಗಳನ್ನು ಧೋನಿ ಸಾಕುತ್ತಿದ್ದಾರೆ.
ಧೋನಿ ತಮ್ಮ 42ನೇ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಾಖಲೆಯ 5ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ವರ್ಷ ಐಪಿಎಲ್’ನಲ್ಲಿ ಆಡಿದ್ದು 12 ಬಾರಿ ಪ್ಲೇ ಆಫ್ ತಲುಪಿದೆ. 10 ಬಾರಿ ಫೈನಲ್ ತಲುಪಿ 5 ಬಾರಿ ಪ್ರಶಸ್ತಿ ಗೆದ್ದಿದೆ.
2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜಾರ್ಖಂಡ್’ನ ರಾಂಚಿಯ ಎಂ.ಎಸ್ ಧೋನಿ ಭಾರತಕ್ಕೆ 2 ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ಖ್ಯಾತಿ ಧೋನಿ ಅವರದ್ದು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 538 ಪಂದ್ಯಗಳನ್ನಾಡಿರುವ ಎಂ.ಎಸ್ ಧೋನಿ, 16 ಶತಕ ಹಾಗೂ 108 ಅರ್ಧಶತಕಗಳ ಸಹಿತ 17,266 ರನ್ ಕಲೆ ಹಾಕಿದ್ದಾರೆ.
ಇದನ್ನೂ ಓದಿ : BCCI Apex Council meeting : ಇಂಪ್ಯಾಕ್ಟ್ ಆಟಗಾರನ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಬಿಸಿಸಿಐ