MS Dhoni : ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni Issued Notice) ಸೋಮವಾರದಂದು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದರ ಜೊತೆಯಲ್ಲಿ ಧೋನಿ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ ಆರಂಭಿಸಿದ್ದ ಆಮ್ರಪಾಲಿ ಗ್ರೂಪ್ ವಿರುದ್ಧ ಮಧ್ಯಸ್ಥಿಕೆ ಪ್ರಕ್ರಿಯೆಗೆ ತಡೆ ನೀಡಿದೆ. ಆಮ್ರಪಾಲಿ ಗ್ರೂಪ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಎಂ.ಎಸ್ ಧೋನಿ ತನಗೆ ಬರಬೇಕಾದ 40 ಕೋಟಿ ರೂಪಾಯಿಗಳನ್ನು ಕೊಡಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆಮ್ರಪಾಲಿ ಗ್ರೂಪ್ನ ರಾಯಭಾರಿ ಆಗಿದ್ದ ಮಹೇಂದ್ರ ಸಿಂಗ್ ಧೋನಿ 2016ರಲ್ಲಿ ಈ ಗ್ರೂಪ್ನಿಂದ ಹೊರ ಬಂದಿದ್ದರು. ಅಲ್ಲದೇ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಆಮ್ರಪಾಲಿ ಸಂಸ್ಥೆ ನೀಡಬೇಕೆಂದು ಕೋರಿ ಮೊದಲು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಮ್ರಪಾಲಿ ಗ್ರೂಪ್ನಿಂದ ಮನೆ ಖರೀದಿ ಮಾಡಿದವರೂ ಸೇರಿದಂತೆ ಒಟ್ಟು 1800 ಮಂದಿಗೆ ನೋಟಿಸ್ ನೀಡಿದೆ. ಆಮ್ರಪಾಲಿ ಗ್ರೂಪ್ ಧೋನಿಗೆ ಬಾಕಿ ಮೊತ್ತ ಪಾವತಿಸಲು ಮುಂದಾದರೆ ನಮಗೆ ಗ್ರೂಪ್ನಿಂದ ಬರಬೇಕಾದ ಹಣ ಸಿಗುವುದು ಮತ್ತಷ್ಟು ತಡವಾಗುತ್ತದೆ ಎಂಬುದು ಆಮ್ರಪಾಲಿ ಗ್ರೂಪ್ನ ಗ್ರಾಹಕರ ಅಳಲಾಗಿದೆ. ಹೀಗಾಗಿ ಆಮ್ರಪಾಲಿ ಗ್ರೂಪ್ನ ಗ್ರಾಹಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಆಮ್ರಪಾಲಿ ಗ್ರೂಪ್ ಗ್ರಾಹಕರಿಂದ ಹಣ ಪಡೆದು ಫ್ಲ್ಯಾಟ್ ನೀಡಿಲ್ಲ ಎಂಬ ಆರೋಪವನ್ನು ಎದುರಿಸುತ್ತಿದೆ. ಈ ಗ್ರೂಪ್ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಯಾವಾಗ ಆಮ್ರಪಾಲಿ ಗ್ರೂಪ್ನ ಕಳ್ಳಾಟಗಳು ಬಯಲಿಗೆ ಬಂತೋ ಅಂದೇ ಧೋನಿ ಆಮ್ರಪಾಲಿ ಗ್ರೂಪ್ನೊಂದಿಗಿನ ತಮ್ಮ ಒಪ್ಪಂದದಿಂದ ಹಿಂದೆ ಸರಿದಿದ್ದರು. ಆದರೆ ನನಗೆ ಬಾಕಿ ನೀಡಬೇಕಾದ ಮೊತ್ತವನ್ನು ಆಮ್ರಪಾಲಿ ಸಂಸ್ಥೆ ನೀಡಿಲ್ಲ ಎಂಬುದು ಧೋನಿ ವಾದವಾಗಿದೆ .
ಇದನ್ನು ಓದಿ : Nikhil Kumaraswamy : ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಇಲ್ಲ : ಹೆಚ್ಡಿಕೆ ಸ್ಪಷ್ಟನೆ
ಇದನ್ನೂ ಓದಿ : Youth dies : ಕಬಡ್ಡಿ ಆಡುತ್ತಿರುವಾಗಲೇ ಹಾರಿ ಹೋಯ್ತು ವಿದ್ಯಾರ್ಥಿಯ ಪ್ರಾಣ ಪಕ್ಷಿ: ಮನಕಲುಕುತ್ತೆ ಯುವಕನ ಕೊನೆಕ್ಷಣದ ವಿಡಿಯೋ
MS Dhoni Issued Notice By Supreme Court In Arbitration Proceeding Against Amrapali Group