Youth dies : ಕಬಡ್ಡಿ ಆಡುತ್ತಿರುವಾಗಲೇ ಹಾರಿ ಹೋಯ್ತು ವಿದ್ಯಾರ್ಥಿಯ ಪ್ರಾಣ ಪಕ್ಷಿ: ಮನಕಲುಕುತ್ತೆ ಯುವಕನ ಕೊನೆಕ್ಷಣದ ವಿಡಿಯೋ

ತಮಿಳುನಾಡು : Youth dies : ಕಬಡ್ಡಿ ಆಟ ಆಡುತ್ತಲೇ ವಿದ್ಯಾರ್ಥಿಯೊಬ್ಬ ಕೋರ್ಟ್​ನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿದ್ಯಾರ್ಥಿಯ ಕೊನೆ ಕ್ಷಣದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಮನಕಲುಕುವಂತಿದೆ. 22 ವರ್ಷದ ವಿದ್ಯಾರ್ಥಿ ಭಾನುವಾರ ರಾತ್ರಿ ಮನಡಿಕುಪ್ಪಂನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾನೆ . ಮೃತ ವಿದ್ಯಾರ್ಥಿಯನ್ನು ತಮಿಳುನಾಡಿನ ಕಡಲೂರು ಜಿಲ್ಲೆಯ ಕಡಂಪುಲಿಯೂರು ಸಮೀಪದ ಪುರಂಗಿಣಿ ​ ಗ್ರಾಮದ ವಿಮಲ್​ರಾಜ್​ ಎಂದು ಗುರುತಿಸಲಾಗಿದೆ. ಈತ ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್​ಸಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಕಬಡ್ಡಿ ಅಂದರೆ ವಿಪರೀತ ಆಸಕ್ತಿಯನ್ನು ಹೊಂದಿದ್ದ ವಿಮಲ್​ರಾಜ್​​ ಮನ್ನಾಡಿಕುಪ್ಪಂನಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳೈ ತಂಡದ ಪರ ಆಡುತ್ತಿದ್ದ ಎನ್ನಲಾಗಿದೆ. ಎದುರಾಳಿ ತಂಡದ ಎದುರು ಕಣಕ್ಕೆ ಇಳಿದಿದ್ದ ಈತನನ್ನು ಎದುರಾಳಿ ತಂಡದವರು ಎಳೆದುಕೊಂಡ ಕೆಲವೇ ಸೆಕಂಡುಗಳಲ್ಲಿ ಈತ ಕುಸಿದು ಬಿದ್ದಿದ್ದಾನೆ.


ಕುಸಿದು ಬಿದ್ದಿದ್ದ ವಿಮಲ್​ರಾಜ್​​ನನ್ನು ಕೂಡಲೇ ಪಸ್ರುತಿ ಜನರಲ್​ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ವೈದ್ಯರು ಈತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಡಂಪುಲಿಯೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.


ತಕ್ಷಣ ಅವರನ್ನು ಪನ್ರುತಿ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಕಡಂಪುಲಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈತ ಕಬಡ್ಡಿ ರೈಡ್​ಗೆ ತೆರಳಿದ್ದ ವೇಳೆಯಲ್ಲಿ ಎದುರಾಳಿ ತಂಡದ ಆಟಗಾರನೊಬ್ಬ ಈತನ ಎದೆಗೆ ಮೊಣಕಾಲು ತಾಗಿಸಿದ್ದ. ಅಲ್ಲದೇ ವಿಮಲ್​ರಾಜ್​ ಎದೆಯ ಮೇಲೆ ಹತ್ತಿ ಕುಳಿತಿದ್ದ. ಇದರಿಂದ ವಿಮಲ್​ರಾಜ್​ ಅಸ್ವಸ್ಥನಾಗಿ ಪ್ರಾಣ ಪಕ್ಷಿ ಹಾರಿ ಹೋಗಿರುವ ಸಾಧ್ಯತೆ ಕೂಡ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನು ಓದಿ : actress bhavana : ಕಾಂಗ್ರೆಸ್​ ಪ್ರತಿಭಟನೆಯಲ್ಲಿ ಭಾವನಾಗೆ ಕಾರ್ಯಕರ್ತರಿಂದ ಕ್ಲಾಸ್​: ಕುರ್ಚಿಗಾಗಿ ಪರದಾಡಿದ ನಟಿ

ಇದನ್ನೂ ಓದಿ : Nikhil Kumaraswamy : ಮುಂದಿನ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಇಲ್ಲ : ಹೆಚ್​ಡಿಕೆ ಸ್ಪಷ್ಟನೆ

Youth dies while playing kabaddi near Panruti

Comments are closed.