MS Dhoni – Suresh Raina: ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಆಪ್ತ ಸುರೇಶ್ ರೈನಾ ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ವೃತ್ತಿ ಬದುಕಿನ ಬಗ್ಗೆ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಅವರು ಉತ್ತಮ ಒಡನಾಟ ಹೊಂದಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಹಲವು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇಬ್ಬರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಬೆನ್ನಲ್ಲೇ ಅದೇ ದಿನ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು.
ಸದ್ಯ ಸುರೇಶ್ ರೈನಾ ಲೆಜೆಂಟ್ಸ್ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳುವ ಸ್ಥಿತಿಯಲ್ಲಿದ್ದಾರೆ. ಎಲ್‌ಎಲ್‌ಸಿಯ ಮೂರನೇ ಸೀಸನ್‌ಗಾಗಿ ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಅವರ ಮಾಜಿ ಭಾರತ ಮತ್ತು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ನೋಡಲು ಬಯಸುತ್ತೀರಾ ಎಂದು ಸುರೇಶ್ ರೈನಾ ಅವರನ್ನು ಪ್ರಶ್ನಿಸಲಾಯ್ತು.
ಇದನ್ನೂ ಓದಿ : ಕೆಎಲ್ ರಾಹುಲ್ ನಿವೃತ್ತಿ : ಏನಿದು ಹೊಸ ಸಂಚು ?
ಸುರೇಶ್ ರೈನಾ ಉತ್ತರಿಸುತ್ತಾ, ಹೌದು, ಲೆಜೆಂಡ್ಸ್ ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಅವರು ಎಷ್ಟು ವರ್ಷಗಳ ಕಾಲ ಐಪಿಎಲ್ ಆಡುತ್ತಾರೆ ಅನ್ನೋದನ್ನು ಪ್ರಾಂಚೈಸಿ ಮಾಲೀಕರ ಬಳಿಯಲ್ಲಿ ಕೇಳಬೇಕು ಎಂದು ಅವರು ಹೇಳಿದ್ದಾರೆ.

ಎಂಎಸ್ ಧೋನಿ 2025ರ ಐಪಿಎಲ್ ಮಹಾ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರಾ ಅನ್ನೋದು ಸದ್ಯ ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಪ್ರತೀ ಬಾರಿಯೂ ಐಪಿಎಲ್ ಹರಾಜಿನ ಸಂದರ್ಭದಲ್ಲಿ ಧೋನಿ ಈ ಋತುವಿನಲ್ಲಿ ಆಡಲ್ಲಾ ಅಂತಾನೇ ಚರ್ಚೆ ಆಗುತ್ತಿತ್ತು. ಆದರೆ ಈ ಬಾರಿಯೂ ಕೂಡ ಅದೇ ಚರ್ಚೆ ಮುಂದುವರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲು ನಿರ್ಧಾರ ಮಾಡಿದೆ. ಆದರೆ ಅವರು ಒಂದು ಋತುವನ್ನು ಆಡ್ತಾರಾ ಇಲ್ಲಾ, ಎರಡೂ ಋತುಗಳಲ್ಲಿಯೂ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸುತ್ತಾರಾ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.
ಇದನ್ನೂ ಓದಿ : ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬದಲಾವಣೆ : ಸೆಪ್ಟೆಂಬರ್ 29 ರಂದು ಬಿಸಿಸಿಐ ಚುನಾವಣೆ
ಸದ್ಯ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೆಪ್ಟೆಂಬರ್ 20ರಂದು ಆರಂಭಗೊಳ್ಳಲಿದ್ದು, ಅಕ್ಟೋಬರ್ 16 ರವರೆಗೆ ಪಂದ್ಯಾವಳಿಯು ನಡೆಯಲಿದೆ. ಶಿಖರ್ ಧವನ್ (ಗುಜರಾತ್ ಗ್ರೇಟ್ಸ್), ಸುರೇಶ್ ರೈನಾ (ಅರ್ಬನೈಸರ್ಸ್ ಹೈದರಾಬಾದ್), ಹರ್ಭಜನ್ ಸಿಂಗ್ (ಮಣಿಪಾಲ್ ಟೈಗರ್ಸ್), ಇಯಾನ್ ಬೆಲ್ (ಭಾರತ ಕ್ಯಾಪಿಟಲ್ಸ್) ಮತ್ತು ಇರ್ಫಾನ್ ಪಠಾಣ್ (ಕೊನಾರ್ಕ್ ಸೂರ್ಯಸ್ ಒಡಿಶಾ) ತಂಡದ ನಾಯಕರಾಗಿದ್ದಾರೆ. ಒಂದೊಮ್ಮೆ ಮಹೇಂದ್ರ ಸಿಂಗ್ ಧೋನಿ ಲಜೆಂಡ್ಸ್ ಪರ ಕಾಣಿಸಿಕೊಂಡ್ರೆ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಅನ್ನೋದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್
MS Dhoni retires for IPL? Suresh Raina hinted at Legends League Cricket