IPL 2025 MS Dhoni : ಬೆಂಗಳೂರು: ಭಾರತಕ್ಕೆ ಡಬಲ್ ವಿಶ್ವಕಪ್ ಗೆದ್ದು ಕೊಟ್ಟಿರುವ ದಿಗ್ಗಜ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings – CSK) ಫ್ರಾಂಚೈಸಿಯ ಮುಕುಟಕ್ಕೆ ಐದು ಐಪಿಎಲ್ ಟ್ರೋಫಿಗಳ (IPL 2025) ಕಿರೀಟಗಳನ್ನು ತೊಡಿಸಿರುವ ಲೆಜೆಂಡರಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆಯೇ ?

ಈ ಪ್ರಶ್ನೆ ಎಂ.ಎಸ್ ಧೋನಿಯವರ ಕೋಟ್ಯಂತರ ಅಭಿಮಾನಿಗಳನ್ನು ಕಾಡುತ್ತಿದೆ. ಜುಲೈ 7ರಂದು 43 ವರ್ಷ ಪೂರ್ತಿಗೊಳಿಸಿ 44ನೇ ವರ್ಷಕ್ಕೆ ಕಾಲಿಟ್ಟಿರುವ ಧೋನಿ ಮುಂದಿನ ಐಪಿಎಲ್ ಟೂರ್ನಿಯ ಹೊತ್ತಿಗೆ 45 ವರ್ಷದ ಹೊಸ್ತಿಲಲ್ಲಿರಲಿದ್ದಾರೆ. ಹೀಗಾಗಿ ಐಪಿಎಲ್-2025 ಟೂರ್ನಿಯಲ್ಲಿ ಧೋನಿ ಆಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಹೊರ ಬಿದ್ದಿರುವ ಸುದ್ದಿಯ ಪ್ರಕಾರ ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ಆಡಲಿದ್ದಾರೆ. ಆದರೆ ಷರತ್ತು ಅನ್ವಯ. ಹಾಗಾದರೆ ಏನದು ಷರತ್ತು? ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ನಾಯಕ. 2010ರಲ್ಲಿ ಮೊದಲ ಬಾರಿ ಸಿಎಸ್’ಕೆ ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟಿದ್ ಧೋನಿ, ನಂತರ 2011, 2018, 2021 ಹಾಗೂ 2023ರಲ್ಲಿ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್’ಷಿಪ್ ಗೆದ್ದಿದ್ದರು.
ಇದನ್ನೂ ಓದಿ : ಫೀಲ್ಡರ್ ಬೌಂಡರಿ ತಡೆದರೂ ಐದು ರನ್ ಒಡಿದ ಬ್ಯಾಟ್ಸ್‌ಮನ್, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 2008ರಿಂದಲೂ ಚೆನ್ನೈ ಪರ ಆಡುತ್ತಿರುವ ಧೋನಿ, 2016 ಮತ್ತು 2017ರಲ್ಲಿ ಸಿಎಸ್’ಕೆ ತಂಡ ಐಪಿಎಲ್’ನಿಂದ ಬ್ಯಾನ್ ಆದಾಗ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2018ರಲ್ಲಿ ಮತ್ತೆ ಸಿಎಸ್’ಕೆಗೆ ಮರಳಿದ್ದ ಧೋನಿ, ಕಂಬ್ಯಾಕ್ ವರ್ಷದಲ್ಲೇ ತಂಡವನ್ನು 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇದನ್ನೂ ಓದಿ : Maharaja Trophy 2024 : ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಡಜನ್ ಕರಾವಳಿ, ಕೊಡಗು ಆಟಗಾರರು
ಐಪಿಎಲ್-2025 ಟೂರ್ನಿಯಲ್ಲಿ ಧೋನಿ ಆಡಲಿದ್ದಾರೆಯೇ ಎಂಬುದು ರೀಟೆನ್ಷನ್ ಪಾಲಿಸಿ (IPL Retention Policy) ಮೇಲೆ ಅವಲಂಬಿತವಾಗಿದೆ. ಐಪಿಎಲ್ ಆಡಳಿತ ಮಂಡಳಿ ಪ್ರತೀ ತಂಡಕ್ಕೆ ಕೇವಲ ನಾಲ್ಕು ಆಟಗಾರರನ್ನಷ್ಟೇ ಉಳಿಸಿಕೊಳ್ಳುವ ಅವಕಾಶ ನೀಡಿದರೆ, ಆಗ ಸ್ವತಃ ಧೋನಿಯವರೇ ತಂಡದಿಂದ ಹೊರಗುಳಿಯಲಿದ್ದಾರೆ. ಒಂದು ವೇಳೆ 5ರಿಂದ 6 ಆಟಗಾರರನ್ನು ರೀಟೇನ್ ಮಾಡಿಕೊಳ್ಳುವ ಅವಕಾಶ ಸಿಕ್ಕಿದರೆ ಆಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಧೋನಿ ಅವರನ್ನು ಐದು ಅಥವಾ ಆರನೇ ಆಟಗಾರನನ್ನಾಗಿ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
ಐಪಿಎಲ್ ಮೆಗಾ ಹರಾಜು ಇದೇ ವರ್ಷದ ಕೊನೆಯಲ್ಲಿ ನಡೆಯಲಿದ್ದು, ರೀಟೆನ್ಷನ್ ಪಾಲಿಸಿಯನ್ನು ಐಪಿಎಲ್ ಆಡಳಿತ ಮಂಡಳಿ ಇನ್ನಷ್ಟೇ ಬಿಡುಗಡೆ ಗೊಳಿಸಬೇಕಿದೆ. ಆದರೆ ಅದಕ್ಕೂ ಮೊದಲೇ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿವೆ.
MS Dhoni will play in IPL 2025 But these conditions apply