ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಪುನರ್ಜನ್ಮ ಪಡೆದಿದ್ದಾರೆ. ಮರುಜನ್ಮದ ದಿನಾಂಕವನ್ನು ಸ್ವತಃ ರಿಷಭ್ ಪಂತ್ ಅವರೇ ತಮ್ಮ ಇನ್’ಸ್ಟಾಗ್ರಾಂ ಪೊಫೈಲ್’ನಲ್ಲಿ ಪ್ರಕಟಿಸಿದ್ದಾರೆ. ರಿಷಭ್ ಪಂತ್ ಅವರೇ ಹೇಳಿರುವ ಪ್ರಕಾರ ಅವರ 2ನೇ ಜನ್ಮದಿನದ ದಿನಾಂಕ ಜನವರಿ 5, 2023. 25 ವರ್ಷದ ರಿಷಫ್ ಪಂತ್ ತಮ್ಮ 2ನೇ ಜನ್ಮದಿನಾಂಕವನ್ನು ಪ್ರಕಟಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.
ವಿಕೆಟ್ ಕೀಪರ್ ರಿಷಭ್ ಪಂತ್ ಡಿಸೆಂಬರ್ 31ರಂದು ರಸ್ತೆ ಅಫಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ಅಫಘಾತಕ್ಕೀಡಾಗಿತ್ತು. ಡೆಹ್ರಾಡೂನ್’ನಲ್ಲಿದ್ದ ಗೆಳತಿಯನ್ನು ಭೇಟಿ ಮಾಡಲು ಬೆಳ್ಳಂಬೆಳಗ್ಗೆ ಹೊರಟಿದ್ದ ರಿಷಭ್ ಪಂತ್ ತಾವೇ ಅತ್ಯಂತ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಪಂತ್ ಕಾರು ಬೆಳಗ್ಗೆ 5 ಗಂಟೆಗೆ ರೂರ್ಕಿ ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಪಂತ್ ಅವರ ಮುಖ, ಬೆನ್ನು, ಸೊಂಟ, ಕಾಲು ಸೇರಿದಂತೆ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು. ರಸ್ತೆ ಅಫಘಾತದಲ್ಲಿ ಪಂತ್ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಸ್ಥಳೀಯ ಟ್ರಕ್ ಚಾಲಕರೊಬ್ಬರು ರಿಷಭ್ ಪಂತ್ ಅವರನ್ನು ರಕ್ಷಿಸಿ ಡೆಹ್ರಾಡೂನ್ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಪಂತ್ ಅವರನ್ನು ಬಿಸಿಸಿಐ ಮುಂಬೈನ ಕೋಕಿಲಾ ಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಏರ್’ಲಿಫ್ಟ್ ಮಾಡಿತ್ತು. ಅಲ್ಲಿ ರಿಷಭ್ ಪಂತ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಇದೀಗ ರಿಷಭ್ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ. ರಸ್ತೆ ಅಫಘಾತದ ಕರಾಳ ದಿನಗಳನ್ನು ನೆನಪಿಸಿಕೊಂಡಿರುವ ರಿಷಭ್ ಪಂತ್, ಆ ದುರ್ಘಟನೆಯಲ್ಲಿ ತಾವು ಬದುಕುಳಿದದ್ದೇ ಹೆಚ್ಚು ಎಂದೇ ನಂಬಿದ್ದಾರೆ. ಹೀಗಾಗಿ ಅದು ತಮಗೆ ಪುನರ್ಜನ್ಮ ಎಂದು ಭಾವಿಸಿರುವ ರಿಷಬ್, ಜನವರಿ 5, 2023ನ್ನು ತಮ್ಮ 2ನೇ ಹುಟ್ಟುಹಬ್ಬದ ದಿನವಾಗಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ : KL Rahul Exclusive : ಕೆ.ಎಲ್ ರಾಹುಲ್ ಕಂಬ್ಯಾಕ್‌ಗೆ ಡೆಡ್‌ಲೈನ್ ಫಿಕ್ಸ್ ಮಾಡಿದ ಬಿಸಿಸಿಐ, ವಿಶ್ವಕಪ್‌ಗೆ ಅಯ್ಯರ್ ಡೌಟ್
ಮೊಣಕಾಲಿಗೆ ಶಸ್ತ್ರಚಿಕಿತ್ಸೆ ನಡೆದಿರುವ ಕಾರಣ ರಿಷಭ್ ಪಂತ್ ಕ್ರಿಕೆಟ್ ಮೈದಾನಕ್ಕೆ ಮರಳಲು ಇನ್ನೂ ಐದರಿಂದ ಆರು ತಿಂಗಳು ಹಿಡಿಯಲಿದೆ. ಹೀಗಾಗಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯುವ ಐಸಿಸಿ ವಿಶ್ವಕಪ್ (ICC World Cup 2023) ಟೂರ್ನಿಗೆ ರಿಷಭ್ ಪಂತ್ ಅಲಭ್ಯರಾಗಲಿದ್ದಾರೆ.
New Date of Birth FOR Rishabh Pant : Rebirth of Rishabh Pant.. Is this a surprise? Star wicket keeper who announced the date of rebirth