ಟಿ20 ವಿಶ್ವಕಪ್‌ಗಾಗಿ 106 ದಿನಗಳಲ್ಲಿ ರೆಡಿಯಾಗಿದ್ದ ನ್ಯೂ ಯಾರ್ಕ್ ಮೈದಾನ ಸದ್ಯದಲ್ಲೇ ನೆಲಸಮ !

New York Nassau County International Cricket Stadium: ಅಮೆರಿಕದ ನ್ಯೂ ಯಾರ್ಕ್’ನಲ್ಲಿರುವ ನಾಸೌ ಕೌಂಟಿ ಇಂಟರ್’ನ್ಯಾಷನಲ್ ಸ್ಟೇಡಿಯಂನಲ್ಲಿ (Nassau County International Cricket Stadium, New York) 8 ಪಂದ್ಯಗಳು ನಡೆದಿದ್ದು, ಎಲ್ಲಾ ಪಂದ್ಯಗಳು ಲೋ ಸ್ಕೋರಿಂಗ್ ಮ್ಯಾಚ್’ಗೆ ಸಾಕ್ಷಿಯಾಗಿವೆ. ಎಂಟು ಪಂದ್ಯಗಳಲ್ಲಿ ಕೆನಡಾ ತಂಡ ಐರ್ಲೆಂಡ್ ವಿರುದ್ಧ 137 ರನ್ ಗಳಿಸಿದ್ದೇ ಈ ಮೈದಾನದಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತ.

New York Nassau County International Cricket Stadium: ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (ICC T20 World Cup 2024) ಅಮೆರಿಕ ಇದೇ ಮೊದಲ ಬಾರಿ ಆತಿಥ್ಯ ವಹಿಸಿದೆ. ಅಮೆರಿಕದ ನ್ಯೂ ಯಾರ್ಕ್’ನಲ್ಲಿರುವ ನಾಸೌ ಕೌಂಟಿ ಇಂಟರ್’ನ್ಯಾಷನಲ್ ಸ್ಟೇಡಿಯಂನಲ್ಲಿ (Nassau County International Cricket Stadium, New York) 8 ಪಂದ್ಯಗಳು ನಡೆದಿದ್ದು, ಎಲ್ಲಾ ಪಂದ್ಯಗಳು ಲೋ ಸ್ಕೋರಿಂಗ್ ಮ್ಯಾಚ್’ಗೆ ಸಾಕ್ಷಿಯಾಗಿವೆ. ಎಂಟು ಪಂದ್ಯಗಳಲ್ಲಿ ಕೆನಡಾ ತಂಡ ಐರ್ಲೆಂಡ್ ವಿರುದ್ಧ 137 ರನ್ ಗಳಿಸಿದ್ದೇ ಈ ಮೈದಾನದಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತ.

New York Nassau County International Cricket Stadium which was ready in 106 days for the ICC T20 World Cup, will soon be demolished
Image Credit : ICC

ನ್ಯೂ ಯಾರ್ಕ್ ಮೈದಾನದ ಪಿಚ್ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದು, ಇದು ಟಿ20 ಪಂದ್ಯವಾಡಲು ಯೋಗ್ಯವಲ್ಲದ ಪಿಚ್ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಂಟರೆಸ್ಟಿಂಗ್ ಸಂಗತಿ ಏನೆಂದರೆ ಟಿ20 ವಿಶ್ವಕಪ್ ಪಂದ್ಯಗಳಿಗಾಗಿಯೇ ನ್ಯೂ ಯಾರ್ಕ್’ನಲ್ಲಿರುವ ನಾಸೌ ಕೌಂಟಿ ಇಂಟರ್’ನ್ಯಾಷನಲ್ ಸ್ಟೇಡಿಯ ಅನ್ನು ಕೇವಲ 106 ದಿನಗಳಲ್ಲಿ ನಿರ್ಮಿಸಲಾಗಿತ್ತು. ಇದೀಗ ನ್ಯೂ ಯಾರ್ಕ್’ನಲ್ಲಿ ವಿಶ್ವಕಪ್ ಪಂದ್ಯಗಳು ಮುಗಿದಿರುವ ಕಾರಣ, ಕ್ರೀಡಾಂಗಣವನ್ನು ನೆಲಸಮಗೊಳಿಸಿ ಹೊಸ ಕ್ರೀಡಾಂಗಣ ನಿರ್ಮಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಭಾರತ ಮತ್ತು ಅಮೆರಿಕ ನಡುವೆ ಬುಧವಾರ ಪಂದ್ಯ ಮುಕ್ತಾಯವಾಗುತ್ತಿದಂತೆ ಸಾಲು ಸಾಲು ಜೆಸಿಬಿಗಳು ನ್ಯೂ ನಾಸೌ ಕೌಂಟಿ ಇಂಟರ್’ನ್ಯಾಷನಲ್ ಸ್ಟೇಡಿಯಂನ ಆವರಣದಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ : IPL Brand Value: 5 ಬಾರಿಯ ಚಾಂಪಿಯನ್ ಚೆನ್ನೈ First, ಕಪ್ ಗೆಲ್ಲದ ಆರ್’ಸಿಬಿ Next

https://x.com/mufaddal_vohra/status/1801155577953005720

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಮೊದಲ ಮೂರು ಲೀಗ್ ಪಂದ್ಯಗಳನ್ನು ನ್ಯೂ ಯಾರ್ಕ್ ಕ್ರೀಡಾಂಗಣದಲ್ಲೇ ಆಡಿತ್ತು. ಅಲ್ಪ ಮೊತ್ತಗ ಗುರಿಯನ್ನು ಎರಡು ಬಾರಿ ಚೇಸಿಂಗ್ ಮಾಡಿ ಗೆದಿದ್ದ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕೇವಲ 119 ರನ್’ಗಳಿಗೆ ಆಲೌಟಾಗಿತ್ತು. ನಂತರ ಪಾಕಿಸ್ತಾನವನ್ನು 113 ರನ್’ಗಳಿಗೆ ಕಟ್ಟಿ ಹಾಕಿ 6 ರನ್’ಗಳ ರೋಚಕ ಗೆಲುವು ಸಾಧಿಸಿತ್ತು.

New York Nassau County International Cricket Stadium which was ready in 106 days for the ICC T20 World Cup, will soon be demolished
Image Credit to Original Source

ಆಡಿರುವ 3 ಪಂದ್ಯಗಳಿಂದ 6 ಅಂಕ ಗಳಿಸಿ ಎ ಗುಂಪಿನಿಂದ ಈಗಾಗಲೇ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿರುವ ರುವ ಟೀಮ್ ಇಂಡಿಯಾ, ಜೂನ್ 15ರಂದು ನಡೆಯುವ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಮೆರಿಕ ಮಿಯಾಮಿಯಲ್ಲಿರುವ ಲಾಡರ್’ಹಿಲ್ ಮೈದಾನದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ಜೂನ್ 20ರಂದು ಆರಂಭವಾಗಲಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : India Vs USA: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಕೆಟ್ ಪಡೆದ ಅಮೆರಿಕ ಸಾಫ್ಟ್’ವೇರ್ ಇಂಜಿನಿಯರ್!

ಜೂನ್ 22ರಂದು ನಡೆಯುವ 2ನೇ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ಅಥವಾ ನೇಪಾಳ ತಂಡ ಎದುರಾಳಿಯಾಗುವ ಸಾಧ್ಯತೆಯಿದೆ. ಜೂನ್ 24ರಂದು ನಡೆಯುವ 3ನೇ ಸೂಪರ್-8 ಪಂದ್ಯದಲ್ಲಿ ಭಾರತ ತಂಡಕ್ಕೆ ಏಕದಿನ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡ ಎದುರಾಳಿಯಾಗುವ ಸಾಧ್ಯತೆಯಿದೆ.

New York Nassau County International Cricket Stadium which was ready in 106 days for the ICC T20 World Cup, will soon be demolished !

ಇದನ್ನೂ ಓದಿ : Jasprit Bumrah Net Worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !

Comments are closed.