Prakash Bhagat : ಬೀದಿಯಲ್ಲಿ ದಾಲ್‌ ಪುರಿ ಮಾರುತ್ತಿದ್ದಾನೆ ಖ್ಯಾತ ಕ್ರಿಕೆಟಿಗ

ಅಸ್ಸಾಂ : ಒಂದು ಕಾಲದಲ್ಲಿ ಅಸ್ಸಾಂ ಕ್ರಿಕೆಟ್‌ ತಂಡ ರಣಜಿ ಆಟಗಾರ. ರಣಜಿ, ಮುಸ್ತಾಕ್‌ ಆಲಿ ಟ್ರೋಫಿಯಲ್ಲಿಯೂ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದಾನೆ. ಆದ್ರೀಗ ಜೀವನ ನಿರ್ವಹಣೆಗೆ ಬೀದಿಯಲ್ಲಿ ದಾಲ್‌ ಪುರಿ ಮಾರಾಟ ಮಾಡುತ್ತಿದ್ದಾರೆ. ಅಷ್ಟಕ್ಕೂ ಆತ ಬೇರಾರೂ ಅಲ್ಲಾ ರಣಜಿ ಆಟಗಾರ ಪ್ರಕಾಶ್‌ ಭಗತ್.‌

ರಾಜ್ಯ, ರಾಷ್ಟ್ರಮಟ್ಟದ ಕ್ರಿಕೆಟ್‌ ಪಂದ್ಯಾವಳಿ ಪಾಲ್ಗೊಂಡಿರುವ ಕ್ರಿಕೆಟಿಗ ಪ್ರಕಾಶ್‌ ಭಗತ, ದಕ್ಷಿಣ ಅಸ್ಸಾಂನ ಸಿಲ್ಚಾರ್ನಲ್ಲಿ ಬೀದಿ ಬದಿಯಲ್ಲಿನಿಂತು ದಾಲ್‌ ಪೂರಿ ಮಾರಾಟ ಮಾಡುತ್ತಾ, ತನ್ನ ಬಡ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ. 34 ವರ್ಷದ ಎಡಗೈ ನಿಧಾನಗತಿಯ ಬೌಲರ್ ಮತ್ತು ಬಲಗೈ ಬ್ಯಾಟ್ಸ್‌ಮನ್ ಆಗಿರುವ ಪ್ರಕಾಶ್‌ ಭಗತ್‌ ಆಲ್‌ ರೌಂಡರ್‌ ಆಟಗಾರರಿಯೂ ಗುರುತಿಸಿಕೊಂಡಿದ್ದಾರೆ.

ಅಸ್ಸಾಂ ಕ್ರಿಕೆಟ್ ತಂಡದ ಸದಸ್ಯರಾಗಿ 2009- 10 ಮತ್ತು 2010-11 ನೇ ಸಾಲಿನಲ್ಲಿ ರಲ್ಲಿ ರೈಲ್ವೆ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳ ವಿರುದ್ಧ ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 2003 ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಒಂದು ತಿಂಗಳ ಕಾಲ ತರಬೇತಿಯ ವೇಳೆಯಲ್ಲಿ ತಾನು ಬಿಸಿಸಿಐ ಅಧ್ಯಕ್ಷ, ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಅವರಿಗೆ ಬೌಲ್‌ ಮಾಡಿದ್ದೆ ಅನ್ನುವ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹವಾಗ್‌ ಅವರನ್ನು ಭೇಟಿಯಾಗಿದ್ದೇನೆ ಅಂತಾ ಹೇಳಿದ್ದಾರೆ ಭಗತ್.‌

ಅಸ್ಸಾಂ ರಣಜಿ ತಂಡದ ಆಟಗಾರರಾಗಿದ್ದ ವೇಳೆಯಲ್ಲಿ ತಂದೆ ಗಜಧರ್‌ ಭಗತ್‌ ಅವರು ನಿಧನರಾದ್ರು. ಬಡ ಕುಟುಂಬದ ನಿರ್ವಹಣೆಗಾಗಿ 2011 ರಲ್ಲಿ ಕ್ರಿಕೆಟ್ ತೊರೆದು, ಹಿರಿಯ ಅಣ್ಣ ದೀಪಕ್‌ ಭಗತ್‌ ನಡೆಸುತ್ತಿದ್ದ ಚಾಟ್‌ ಪುಡ್‌ ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ್ರು. ಅಲ್ಲದೇ ಅಣ್ಣ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕುಟುಂಬದ ಸಂಪೂರ್ಣ ಜವಾಬ್ದಾರಿ ಪ್ರಕಾಶ್‌ ಭಗತ್‌ ಅವರ ಹೆಗಲೇರಿತ್ತು.

ಬಾಲ್ಯದಲ್ಲಿಯೇ ಕ್ರಿಕೆಟ್‌ ಬಗ್ಗೆ ಕನಸು ಕಂಡಿದ್ದ ಪ್ರಕಾಶ್‌ ಭಗತ್‌, ೧೩ ವರ್ಷ ಹಾಗೂ ೧೬ ವರ್ಷ ವಯೋಮಿತಿಯ ತಂಡದಲ್ಲಿ ಉತ್ತಮ ನಿರ್ವಹಣೆಯನ್ನು ತೋರುವ ಮೂಲಕ ರಾಜ್ಯ ರಣಜಿ ತಂಡಕ್ಕೂ ಆಯ್ಕೆಯಾಗಿದ್ದರು. ಇದೀಗ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಪ್ರಕಾಶ್‌ ಭಗತ್‌ ಗೆ ಕ್ರಿಕೆಟ್‌ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಯಾರಾದ್ರೂ ತನಗೆ ಆರ್ಥಿಕ ಸಹಕಾರವನ್ನು ನೀಡಿದ್ರೆ ಮತ್ತೆ ರಾಜ್ಯ ತಂಡವನ್ನು ಪ್ರತಿನಿಧಿಸಲು ಸಿದ್ದ ಎನ್ನುತ್ತಿದ್ದಾರೆ.

ಬಹುತೇಕ ಕ್ರಿಕೆಟಿಗರು ಸರಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ತಾನು ಎಷ್ಟೇ ಪ್ರಯತ್ನ ಪಟ್ಟರೂ ತನಗೆ ಉದ್ಯೋಗ ಸಿಗಲಿಲ್ಲ. ಈ ಹಿಂದೆ ಮೊಬೈಲ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಇದ್ದ ಉದ್ಯೋಗವೂ ಕೈ ತಪ್ಪಿದೆ. ಹೀಗಾಗಿ ಬೀದಿಯಲ್ಲಿ ನಿಂತು ಪ್ರಕಾಶ್‌ ಭಗತ್‌ ದಾಲ್‌ ಪೂರಿ ಮಾರಾಟ ಮಾಡುತ್ತಿದ್ದಾರೆ.

Comments are closed.