ಸೋಮವಾರ, ಏಪ್ರಿಲ್ 28, 2025
HomeSportsCricketPrithvi Shaw replaced Rahul : "ರಾಹುಲ್ ಜಾಗದಲ್ಲಿ ಪೃಥ್ವಿ ಶಾ ಆಡಿಸಿ" ಎಂದ ಕ್ರಿಕೆಟಿಗ...

Prithvi Shaw replaced Rahul : “ರಾಹುಲ್ ಜಾಗದಲ್ಲಿ ಪೃಥ್ವಿ ಶಾ ಆಡಿಸಿ” ಎಂದ ಕ್ರಿಕೆಟಿಗ ದೊಡ್ಡ ಗಣೇಶ್‌ಗೆ ಕನ್ನಡಿಗರ ತಪರಾಕಿ

- Advertisement -

ಬೆಂಗಳೂರು: Prithvi Shaw replaced Rahul : ಕನ್ನಡಿಗ ಕೆ.ಎಲ್ ರಾಹುಲ್ (KL Rahul) ವಿರುದ್ಧ ಸದಾ ನಕಾರಾತ್ಮಕ ಅಭಿಪ್ರಾಯಗಳನ್ನೇ ವ್ಯಕ್ತಪಡಿಸುವ ಕರ್ನಾಟಕದ ಕ್ರಿಕೆಟ್ ದಿಗ್ಗಜ ದೊಡ್ಡ ಗಣೇಶ್ (Dodda Ganesh) ಅವರಿಗೆ ಕನ್ನಡಿಗರೇ ಸಾಮಾಜಿಕ ತಾಲತಾಣದಲ್ಲಿ ತಪರಾಕಿ ಕೊಟ್ಟಿದ್ದಾರೆ. ದುಬೈನಲ್ಲಿ ಬುಧವಾರ ನಡೆದ ಹಾಂಕಾಂಗ್ ವಿರುದ್ಧದ ಏಷ್ಯಾ ಕಪ್ (Asia Cup 2022) ಪಂದ್ಯದಲ್ಲಿ ಕೆ.ಎಲ್ ರಾಹುಲ್ (KL Rahul) ನಿಧಾನಗತಿಯ ಆಟವಾಡಿ, 39 ಎಸೆತಗಳಲ್ಲಿ ಕೇವಲ 36 ರನ್ ಗಳಿಸಿದ್ದರು. ರಾಹುಲ್ ಆಟದಲ್ಲೇ 2 ಸಿಕ್ಸರ್’ಗಳು ಒಳಗೊಂಡಿದ್ದವು. ಹಾಂಕಾಂಗ್’ನಂತಹ ದುರ್ಬಲ ತಂಡದ ವಿರುದ್ಧ ರಾಹುಲ್ ಆಡಿದ ನಿಧಾನಗತಿಯ ಆಟಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ರಾಹುಲ್ ಬಗ್ಗೆ ಸದಾ ಟೀಕೆ ಮಾಡುತ್ತಲೇ ಬಂದಿರುವ ಮತ್ತೊಬ್ಬ ಕನ್ನಡಿಗ ದೊಡ್ಡ ಗಣೇಶ್ (Dodda Ganesh) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಬದಲಿಗೆ ಮುಂಬೈ ಬ್ಯಾಟ್ಸ್’ಮನ್ ಪೃಥ್ವಿ ಶಾ ಇದ್ದರೆ ಚೆನ್ನಾಗಿತ್ತು ಎಂದು ಟ್ವೀಟ್ ಮಾಡಿದ್ದರು.

ಒಬ್ಬ ಕನ್ನಡಿಗನಾಗಿ ಕರ್ನಾಟಕದ ಆಟಗಾರರಿಗೆ ಬೆಂಬಲ ನೀಡುವುದನ್ನು ಬಿಟ್ಟು, ಮುಂಬೈ ಆಟಗಾರನ ಪರ ವಕಾಲತ್ತು ವಹಿಸುತ್ತಿದ್ದೀರಾ ಎಂದು ದೊಡ್ಡ ಗಣೇಶ್ (Dodda Ganesh)ಅವರನ್ನು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಕೆ.ಎಲ್ ರಾಹುಲ್ (KL Rahul) ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಬಂದಿದ್ದಾರೆ ಎಂಬುದು ನಿಮ್ಮಂತಹ ಅನುಭವಿ ಹಿರಿಯ ಕ್ರಿಕೆಟಿಗರಿಗೆ ಗೊತ್ತಿಲ್ಲವೇ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು (Dodda Ganesh) ದೊಡ್ಡ ಗಣೇಶ್’ರನ್ನು ಪ್ರಶ್ನಿಸಿದ್ದಾರೆ.

“ನೀವು ಹೇಳುವುದು ನಿಜ, ಪಥ್ವಿ ಶಾ (Prithvi Sha) 15 ಎಸೆತಗಳಲ್ಲಿ 25 ರನ್ ಬಾರಿಸುತ್ತಾನೆ, ಆದರೆ ಫೀಲ್ಡಿಂಗ್ ಕಥೆ ಹೇಳಿ” ಎಂದು ಮತ್ತೊಬ್ಬ ಕ್ರಿಕೆಟ್ ಫ್ಯಾನ್ ದೊಡ್ಡಗಣೇಶ್’ಗೆ ಬೌನ್ಸರ್ ಹಾಕಿದ್ದಾರೆ.

ದೊಡ್ಡ ಗಣೇಶ್ (Dodda Ganesh) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಫೇಲ್ ಆಗಿರುವ ಆಟಗಾರ. ಅಂತಹ ಆಟಗಾರ ಈಗಾಗ್ಲೇ ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ಶತಕ ಬಾರಿಸಿರುವ ಆಟಗಾರನೊಬ್ಬನ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಕರ್ನಾಟಕದ ಕ್ರಿಕೆಟ್ ಪ್ರಿಯರೇ ದೊಡ್ಡ ಗಣೇಶ್ (Dodda Ganesh) ಅವರನ್ನು ಲೇವಡಿ ಮಾಡಿದ್ದಾರೆ. ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ರಾಹುಲ್ ಅವರನ್ನು ದೊಡ್ಡ ಗಣೇಶ್ (Dodda Ganesh) ಟೀಕಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌ನಲ್ಲಿ ಸೂರ್ಯನನ್ನು ಗುರಾಯಿಸಿದ್ದ ಕಿಂಗ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಅದೇ ಸೂರ್ಯನಿಗೆ ತಲೆ ಬಾಗಿ ನಮಿಸಿದ

ಇದನ್ನೂ ಓದಿ: ಮಿಸ್ಟರ್ 360 ಸೂರ್ಯನ ಯಶಸ್ಸಿನ ಹಿಂದೆ ರಬ್ಬರ್ ಬಾಲ್ ಮಹಿಮೆ

ಇದನ್ನೂ ಓದಿ: ಕೊಹ್ಲಿ ‘ಖೇಲ್’ ಕತಂ.. ದುಕಾನ್ ಓಪನ್


ದೇಶೀಯ ಕ್ರಿಕೆಟ್’ನ ದಿಗ್ಗಜನೆಂದೇ ಕರೆಸಿಕೊಂಡಿದ್ದ ದೊಡ್ಡ ಗಣೇಶ್, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿದ್ದು ಕೇವಲ 5 ಪಂದ್ಯಗಳನ್ನಷ್ಟೇ. 1997ರಲ್ಲಿ 4 ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗಣೇಶ್, ಕೇವಲ 6 ವಿಕೆಟ್ ಪಡೆದಿದ್ದಾರೆ.

Prithvi Shaw replaced Rahul says Dodda Ganesh Asia cup 2022 ind vs pak

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular