ಬೆಂಗಳೂರು: ಸತತ ಎರಡು ಗೆಲುವುಗಳ ನಂತರ ಮೂರನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲು ಕಂಡಿರುವ ಆತಿಥೇಯ ಬೆಂಗಳೂರು ಬುಲ್ಸ್ ತಂಡ (Bengaluru Bulls), ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League 9th season) ತನ್ನ 4ನೇ ಲೀಗ್ ಪಂದ್ಯದಲ್ಲಿ ಯು.ಪಿ ಯೋಧಾ ತಂಡವನ್ನು (Bengaluru Bulls vs up yoddha) ಎದುರಿಸಲಿದೆ.
ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆದ್ದು ಗೆಲುವಿನ ಲಯಕ್ಕ ಮರಳುವ ವಿಶ್ವಾಸದಲ್ಲಿದೆ ಬೆಂಗಳೂರು ಬುಲ್ಸ್. 6ನೇ ಆವೃತ್ತಿಯ ಚಾಂಪಿಯನ್ ಬುಲ್ಸ್ ಪಡೆ, ಈ ಬಾರಿಯ ತನ್ನ ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ 34-29ರಲ್ಲಿ ಗೆದ್ದು ಶುಭಾರಂಭ ಮಾಡಿತ್ತು. 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 41-39ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ವಾರಿಯರ್ಸ್ ವಿರುದ್ಧ 33-42ರ ಅಂತರದಲ್ಲಿ ಸೋತಿತ್ತು. ಭಾನುವಾರ ನಡೆಯುವ ಮತ್ತೊಂದು ಪಂದ್ಯ ಮಹಾರಾಷ್ಟ್ರ ಡರ್ಬಿಗೆ ಸಾಕ್ಷಿಯಾಗಲಿದ್ದು, ಮಾಜಿ ಚಾಂಪಿಯನ್ ಯು ಮುಂಬಾ (U Mumba) ತಂಡ, ಪುಣೇರಿ ಪಲ್ಟನ್’ನ (Puneri Paltan) ಯುವ ಪಡೆಯನ್ನು ಎದುರಿಸಲಿದೆ
ಶನಿವಾರ ನಡೆದ ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ, ಗುಜರಾತ್ ಜೈಂಟ್ಸ್ ತಂಡವನ್ನು 25-18ರ ಅಂತರದಲ್ಲಿ ಸೋಲಿಸಿ ಲೀಗ್’ನಲ್ಲಿ 3ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 20 ಅಂಕಗಳ ಅಂತರದಲ್ಲಿ (46-26) ಬಗ್ಗು ಬಡಿದ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ದಿನದ 3ನೇ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು 54-26ರ ಭಾರೀ ಅಂತರದಲ್ಲಿ ಮಣಿಸಿದ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಲೀಗ್’ನಲ್ಲಿ 3ನೇ ಗೆಲುವು ದಾಖಲಿಸಿತು.
ಪ್ರೊ ಕಬಡ್ಡಿ ಲೀಗ್ -9: ಭಾನುವಾರದ ಪಂದ್ಯಗಳು
- ಪುಣೇರಿ ಪಲ್ಟನ್ Vs ಯು ಮುಂಬಾ
- ಬೆಂಗಳೂರು ಬುಲ್ಸ್ Vs ಯು.ಪಿ ಯೋಧಾ
ಸ್ಥಳ: ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಇದನ್ನೂ ಓದಿ : Pro kabaddi league : ಪ್ರೊ ಕಬಡ್ಡಿ ಲೀಗ್‌ನಲ್ಲಿಂದು ತ್ರಿಪಲ್ ಧಮಾಕ, ಸೂಪರ್ ಸಂಡೇ ಬೆಂಗಳೂರು ಬುಲ್ಸ್ ಮ್ಯಾಚ್
ಇದನ್ನೂ ಓದಿ : Bengal Warriors vs Bengaluru Bulls : ಬೆಂಗಳೂರು ಬುಲ್ಸ್‌ಗೆ ಮೊದಲ ಸೋಲು, ಮನೆಯಂಗಳದಲ್ಲಿ ಸೋತ ಕೆಂಪುಗೂಳಿಗಳು
Pro Kabaddi League 9 Bengaluru Bulls vs up yoddha