ಮುಂಬೈ: (Pro Kabaddi League Auction) ಪ್ರೊ ಕಬಡ್ಡಿ ಲೀಗ್-9ರ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿದ್ದ “ಹೈ ಫ್ಲೈಯರ್” ಖ್ಯಾತಿಯ ಪವನ್ ಸೆಹ್ರಾವತ್ ಬರೋಬ್ಬರಿ 2.26 ಕೋಟಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದ್ದಾರೆ. ಶುಕ್ರವಾರ ನಡೆದ ಮೊದಲ ದಿನ ಹರಾಜಿನಲ್ಲಿ ಸ್ಟಾರ್ ರೇಡರ್ ಪವನ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ತಂಡ 2.26 ಕೋಟಿ ಮೊತ್ತಕ್ಕೆ ಖರೀದಿಸಿತು. ಪವನ್ ಅವರನ್ನು ಪಡೆಯಲು ಯು ಮುಂಬಾ ಮತ್ತು ತಮಿಳ್ ತಲೈವಾಸ್ ಫ್ರಾಂಚೈಸಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಕೊನೆಗೆ ಯು ಮುಂಬಾ ಪೈಪೋಟಿಯನ್ನು ಮೆಟ್ಟಿ ನಿಂತ ತಮಿಳ್ ತಲೈವಾಲ್ ತಂಡ “ಹೈ ಫ್ಲೈಯರ್” ಪವನ್ ಸೆಹ್ರಾವತ್ ಅವರನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಇದು ಪ್ರೊ ಕಬಡ್ಡಿ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ಅತೀ ಹೆಚ್ಚಿನ ಮೊತ್ತ.
2018-19ರಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರೊ ಕಬಡ್ಡಿ ಚಾಂಪಿಯನ್’ಷಿಪ್ ಗೆದ್ದುಕೊಟ್ಟಿದ್ದ ಪವನ್ ಸೆಹ್ರಾವತ್ ಮುಂದಿನ ವರ್ಷದಿಂದ ತಮಿಳ್ ತಲೈವಾಸ್ ಪರ ಆಡಲಿದ್ದಾರೆ. “ಹೈ ಫ್ಲೈಯರ್”ಗೆ ಬದಲಿ ಆಟಗಾರನಾಗಿ ಹರ್ಯಾಣ ಸ್ಟೀಲರ್ಸ್ ತಂಡದ ನಾಯಕನಾಗಿದ್ದ ವಿಕಾಸ್ ಖಂಡೋಲ ಅವರನ್ನು ಬೆಂಗಳೂರು ಬುಲ್ಸ್ ತಂಡ 1.70 ಕೋಟಿ ಮೊತ್ತಕ್ಕೆ ಖರೀದಿಸಿತು. ಯು ಮುಂಬಾ ತಂಡದ ನಾಯಕನಾಗಿದ್ದ ಇರಾನ್ ಡಿಫೆಂಡರ್ ಫಜಲ್ ಅತ್ರಾಚಲಿಯವರನ್ನು ಪುಣೇರಿ ಪಲ್ಟನ್ ತಂಡ 1.38 ಕೋಟಿಗೆ ಖರೀಸಿದಿದೆ. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ರೇಡ್ ಪಾಯಿಂಟ್ಸ್ ಕಲೆ ಹಾಕಿರುವ ಪ್ರದೀಪ್ ನರ್ವಾಲ್ ಅವರನ್ನು 90 ಲಕ್ಷ ರೂ. ಮೊತ್ತಕ್ಕೆ ಯು.ಪಿ ಯೋಧಾ ತನ್ನಲ್ಲೇ ಉಳಿಸಿಕೊಂಡಿದೆ.
ಪ್ರೊ ಕಬಡ್ಡಿ ಲೀಗ್ ಇತಿಹಾಸದ ದುಬಾರಿ ಆಟಗಾರರು
- ಪವನ್ ಸೆಹ್ರಾವತ್ (ತಮಿಳ್ ತಲೈವಾಸ್): 2.26 ಕೋಟಿ
- ವಿಕಾಸ್ ಖಂಡೋಲ (ಬೆಂಗಳೂರು ಬುಲ್ಸ್): 1.70 ಕೋಟಿ
- ಪ್ರದೀಪ್ ನರ್ವಾಲ್ (ಯು.ಪಿ ಯೋಧಾ): 1.65 ಕೋಟಿ
- ಮೋನು ಗೊಯಾಟ್ (ಹರ್ಯಾಣ ಸ್ಟೀಲರ್ಸ್): 1.51 ಕೋಟಿ
- ಸಿದ್ಧಾರ್ಥ್ ದೇಸಾಯಿ (ತೆಲುಗು ಟೈಟನ್ಸ್): 1.45 ಕೋಟಿ
- ಫಜಲ್ ಅತ್ರಾಚಲಿ (ಪುಣೇರಿ ಪಲ್ಟನ್): 1.38 ಕೋಟಿ
- ರಾಹುಲ್ ಚೌಧರಿ (ತೆಲುಗು ಟೈಟನ್ಸ್): 1.29 ಕೋಟಿ
- ಗುಮಾಮ್ ಸಿಂಗ್ (ಯು ಮುಂಬಾ): 1.22 ಕೋಟಿ
- ನಿತಿನ್ ತೋಮರ್ (ಪುಣೇರಿ ಪಲ್ಟನ್): 1.20 ಕೋಟಿ
- ದೀಪಕ್ ಹೂಡ (ಜೈಪುರ ಪಿಂಕ್ ಪ್ಯಾಂಥರ್ಸ್): 1.15 ಕೋಟಿ
ಇದನ್ನೂ ಓದಿ : Asia Cup 2022 India Playing XI : ಈ ಪ್ಲೇಯಿಂಗ್ XI ಇದ್ದರೆ ಪಾಕಿಸ್ತಾನ ವಿರುದ್ಧ ಗೆಲುವು ನಮ್ಮದೇ
Pro Kabaddi League Auction Pawan Sehrawat the “Ex-Bull” of Bengaluru, set a record by selling for 2.26 crores