ಸೋಮವಾರ, ಏಪ್ರಿಲ್ 28, 2025
HomeSportsBengaluru Bulls out: ಸೆಮಿಫೈನಲ್'ನಲ್ಲಿ ಸೋಲು ಕಂಡ ಬುಲ್ಸ್, ನಾಳೆ ಜೈಪುರ, ಪಲ್ಟನ್ ಮಧ್ಯೆ ಫೈನಲ್

Bengaluru Bulls out: ಸೆಮಿಫೈನಲ್’ನಲ್ಲಿ ಸೋಲು ಕಂಡ ಬುಲ್ಸ್, ನಾಳೆ ಜೈಪುರ, ಪಲ್ಟನ್ ಮಧ್ಯೆ ಫೈನಲ್

- Advertisement -

ಮುಂಬೈ: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ (Pro Kabaddi League) ಚಾಂಪಿಯನ್ ಪಟ್ಟಕ್ಕೇರುವ ಬೆಂಗಳೂರು ಬುಲ್ಸ್ ತಂಡದ (Bengaluru Bulls out) ಕನಸು ನುಚ್ಚು ನೂರಾಗಿದೆ. ಮುಂಬೈ ಡೋಮ್, NSCI SVP ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ, ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ (jaipur pink panthers) ವಿರುದ್ಧ 29-49ರ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಆರಂಭದಿಂದಲೇ ಜೈಪುರ ಆರ್ಭಟಕ್ಕೆ ತತ್ತರಿಸಿದ ಬುಲ್ಸ್ ಬಳಗ ಯಾವ ಹಂತದಲ್ಲೂ ಹೋರಾಟ ಪ್ರದರ್ಶಿಸಲೇ ಇಲ್ಲ. ಮುಖ್ಯವಾಗಿ ಬುಲ್ಸ್ ಪಡೆಯ ಸ್ಟಾರ್ ರೇಡರ್ ಭರತ್ ಹೂಡಗೆ ಬ್ರೇಕ್ ಹಾಕುವಲ್ಲಿ ಜೈಪುರ ಡಿಫೆಂಡರ್’ಗಳು ಯಶಸ್ವಿಯಾದರು. ಲೀಗ್ ಹಂತದಲ್ಲಿ ಅಬ್ಬರಿಸಿದ್ದ ಭರತ್, ಸೆಮಿಪೈನಲ್’ನಲ್ಲಿ ಕೇವಲ 7 ರೇಡ್ ಪಾಯಿಂಟ್ಸ್ ಕಲೆ ಹಾಕಲಷ್ಟೇ ಶಕ್ತರಾದರು. ಮತ್ತೊಂದೆಡೆ ಜೈಪುರ ಪರ ಮಿಂಚ ಲೆಫ್ಟ್ ರೇಡರ್ ಅಜಿತ್ ಕುಮಾರ್ 13 ರೇಡ್ ಪಾಯಿಂಟ್ಸ್ ಗಳಿಸಿದರೆ, ಅಮೋಘ ಪ್ರದರ್ಶನ ತೋರಿದ ರೈಟ್ ಕಾರ್ನರ್ ಡಿಫೆಂಡರ್ ಸಾಹುಲ್ ಕುಮಾರ್ 10 ಟ್ಯಾಕಲ್ ಪಾಯಿಂಟ್ ಗಳಿಸಿ ಬುಲ್ಸ್ ಸದ್ದಡಗಿಸಿದರು.

ಮತ್ತೊಂದು ಸೆಮಿಫೈನಲ್’ನಲ್ಲಿ ತಮಿಳ್ ತಲೈವಾಸ್ ತಂಡವನ್ನು 39-37ರಲ್ಲಿ ರೋಚಕವಾಗಿ ಮಣಿಸಿದ ಪುಣೇರಿ ಪಲ್ಟನ್ ಬಳಗ ಫೈನಲ್’ಗೆ ಲಗ್ಗೆ ಇಟ್ಟಿತು. ಆರಂಭದಲ್ಲಿ ತಲೈವಾಸ್ ಮುನ್ನಡೆ ಕಾಯ್ದುಕೊಡರೂ ಅಂತಿಮ ಕ್ಷಣಗಳಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ಪುಣೇರಿ ಪಲ್ಟನ್ 2 ಅಂಕಗಳಿಂದ ತಲೈವಾಸ್ ಸವಾಲನ್ನು ಮೆಟ್ಟಿ ನಿಂತಿತು. ಕನ್ನಡಿಗ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪಲ್ಟನ್ ಪಡೆಯ ಪರ ಸೆಮಿಫೈನಲ್’ನಲ್ಲಿ ಯುವ ರೇಡರ್ ಪಂಕಜ್ ಮೋಹಿತೆ 16 ರೇಡ್ ಪಾಯಿಂಟ್ಸ್ ಗಳಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. ಇರಾನ್ ಆಲ್ರೌಂಡರ್ ಮೊಹಮ್ಮದ್ ಇಸ್ಮಾಯಿಲ್ ನಭಿಬಕ್ಷ್ 6 ಅಂಕ ಗಳಿಸಿದರು.

ಶನಿವಾರ ನಡೆಯುವ ಮೆಗಾ ಫೈನಲ್ ಪಂದ್ಯದಲ್ಲಿ ಲೀಗ್ ಹಂತದ ಟೇಬಲ್ ಟಾಪರ್’ಗಳಾದ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ್ದ ಜೈಪುರ ತಂಡಕ್ಕಿದು 2ನೇ ಫೈನಲ್. ಪುಣೇರಿ ಪಲ್ಟನ್ ಇದೇ ಮೊದಲ ಬಾರಿ ಫೈನಲ್’ನಲ್ಲಿ ಕಾಣಿಸಿಕೊಂಡಿದೆ.

ಪ್ರೊ ಕಬಡ್ಡಿ ಲೀಗ್-9: ಫೈನಲ್ (Pro Kabaddi League semifinals)
ಸೆಮಿಫೈನಲ್-2: ಪುಣೇರಿ ಪಲ್ಟನ್ Vs ಜೈಪುರ ಪಿಂಕ್ ಪ್ಯಾಂಥರ್ಸ್ (ನಾಳೆ ರಾತ್ರಿ 8ಕ್ಕೆ)

ಸ್ಥಳ: ಡೋಮ್, NSCI SVP ಸ್ಟೇಡಿಯಂ, ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Ravindra Jadeja: ದಕ್ಷಿಣ ಭಾರತದ ಪಂಚೆ-ಶಲ್ಯದಲ್ಲಿ ಮಿಂಚಿದ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜ

ಇದನ್ನೂ ಓದಿ : Shreyas Iyer : ಶತಕ ಮಿಸ್ಸಾದ್ರೂ ಯಾರೂ ಮಾಡಲಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್

Pro Kabaddi League semifinals Bengaluru Bulls out jaipur pink panthers Entry to final

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular