ಭಾನುವಾರ, ಏಪ್ರಿಲ್ 27, 2025
HomeSportsCricketShubman Gill : ಪ್ಯಾರಿಸ್’ನಲ್ಲಿದ್ದಾರೆ ಶುಭಮನ್ ಗಿಲ್, ಟೀಮ್ ಇಂಡಿಯಾ ಪ್ರಿನ್ಸ್’ಗೆ ನಂ.7 ಗಿಫ್ಟ್ ಕೊಟ್ಟ...

Shubman Gill : ಪ್ಯಾರಿಸ್’ನಲ್ಲಿದ್ದಾರೆ ಶುಭಮನ್ ಗಿಲ್, ಟೀಮ್ ಇಂಡಿಯಾ ಪ್ರಿನ್ಸ್’ಗೆ ನಂ.7 ಗಿಫ್ಟ್ ಕೊಟ್ಟ PSG

- Advertisement -

ಪ್ಯಾರಿಸ್: ಟೀಮ್ ಇಂಡಿಯಾದ ಪ್ರಿನ್ಸ್ ಖ್ಯಾತಿಯ ಶುಭಮನ್ ಗಿಲ್ (Shubman Gill) ಸದ್ಯ ಫ್ರಾನ್ಸ್’ನ ಪ್ಯಾರಿಸ್’ನಲ್ಲಿದ್ದು, ಜಗತ್ತಿನ ದೈತ್ಯ ಫುಟ್ಬಾಲ್ ಕ್ಲಬ್’ಗಳಲ್ಲಿ ಒಂದಾಗಿರುವ ಪ್ಯಾರಿಸ್ ಸೇಂಟ್ ಜರ್ಮನ್ (Paris Saint-German PSG) ಕ್ಲಬ್ ಶುಭಮನ್ ಗಿಲ್’ಗೆ ನಂ.7 ಜರ್ಸಿಯನ್ನು ಉಡುಗೊರೆಯಾಗಿ ನೀಡಿದೆ.

ಇಂಗ್ಲೆಂಡ್’ನ ಲಂಡನ್’ನಲ್ಲಿ ಕಳೆದ ಭಾನುವಾರ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final – WTC final 2023) ಪಂದ್ಯದಲ್ಲಿ ಆಡಿದ್ದ ಶುಭಮನ್ ಗಿಲ್ ಎರಡೂ ಇನ್ನಿಂಗ್ಸ್’ಗಳಲ್ಲಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್’ನಲ್ಲಿ 18 ರನ್ ಗಳಿಸಿದ್ದ ಗಿಲ್, ದ್ವಿತೀಯ ಇನ್ನಿಂಗ್ಸ್’ನಲ್ಲಿ ಕೇವಲ 13 ರನ್ ಗಳಿಸಿ ಔಟಾಗಿದ್ದರು.

WTC ಫೈನಲ್ ಪಂದ್ಯದ ನಂತರ ಟೀಮ್ ಇಂಡಿಯಾ ಆಟಗಾರರಿಗೆ ಕ್ರಿಕೆಟ್’ನಿಂದ 20 ದಿನಗಳ ವಿರಾಮ ಸಿಕ್ಕಿದೆ. ಈ ಅವಧಿಯನ್ನು ಟೀಮ್ ಇಂಡಿಯಾ ಸ್ಟಾರ್’ಗಳು ಪ್ರವಾಸದ ಮೂಲಕ ಕಳೆಯುತ್ತಿದ್ದಾರೆ. ಲಂಡನ್’ನಿಂದ ಪ್ಯಾರಿಸ್’ಗೆ ಪ್ರಯಾಣ ಬೆಳೆಸಿದ್ದ ಶುಭಮನ್ ಗಿಲ್ ಅಲ್ಲಿ ಪ್ಯಾರಿಸ್ ಸೇಂಟ್-ಜರ್ಮನ್ ಕ್ಲಬ್’ನ ಫುಟ್ಬಾಲ್ ಪಂದ್ಯವನ್ನ ವೀಕ್ಷಿಸಿದ್ದರು. ಈ ವೇಳೆ PSG ಕ್ಲಬ್ ಗಿಲ್ ಅವರಿಗೆ ನಂ.7 ಜರ್ಸಿಯನ್ನು ಉಡುಗೊರೆಯಾಗಿ ಕೊಟ್ಟಿದ್ದು, ಈ ಚಿತ್ರವನ್ನು PSG ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

WTC ಫೈನಲ್ ಪಂದ್ಯಕ್ಕೂ ಮುನ್ನ ಶುಭಮನ್ ಗಿಲ್ ಲಂಡನ್’ನಲ್ಲಿ ಮ್ಯಾಂಚೆಸ್ಟರ್ ಫುಟ್ಬಾಲ್ ಕ್ಲಬ್ ತಂಡದ ಪಂದ್ಯವನ್ನು ವೀಕ್ಷಿಸಿದ್ದರು. WTC ಫೈನಲ್ ಪಂದ್ಯದಲ್ಲಿ ದಯನೀಯ ವೈಫಲ್ಯ ಎದುರಿಸಿರುವ ಬಲಗೈ ಓಪನರ್ ಗಿಲ್, ವೆಸ್ಟ್ ಇಂಡೀಸ್ ಪ್ರವಾಸವನ್ನು ಎದುರು ನೋಡುತ್ತಿದ್ದಾರೆ. ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ : Asia Cup 2023 : ಬಿಸಿಸಿಐ ಹಠದ ಮುಂದೆ ನಡೆಯಲಿಲ್ಲ ಪಾಕ್ ಆಟ, ಶ್ರೀಲಂಕಾದಲ್ಲಿ ಭಾರತ Vs ಪಾಕ್ ಮ್ಯಾಚ್

ಇದನ್ನೂ ಓದಿ : Ambati Rayudu : ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ರೆಡಿಯಾದ ಅಂಬಾಟಿ ರಾಯುಡು

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular