ಭಾನುವಾರ, ಏಪ್ರಿಲ್ 27, 2025
HomeSportsCricketRahul Dravid: ಬಿಸಿಸಿಐ ತನಗೆ ಕೊಟ್ಟ ಎರಡೂವರೆ ಕೋಟಿಯನ್ನೇ ಬೇಡ ಎಂದ ರಾಹುಲ್ ದ್ರಾವಿಡ್‌ ; ಗ್ರೇಟ್‌...

Rahul Dravid: ಬಿಸಿಸಿಐ ತನಗೆ ಕೊಟ್ಟ ಎರಡೂವರೆ ಕೋಟಿಯನ್ನೇ ಬೇಡ ಎಂದ ರಾಹುಲ್ ದ್ರಾವಿಡ್‌ ; ಗ್ರೇಟ್‌ ವಾಲ್‌ ಕಾರ್ಯಕ್ಕೆ ಜನಮೆಚ್ಚುಗೆ

- Advertisement -

ಬೆಂಗಳೂರು: ಟಿ20 ವಿಶ್ವ ಚಾಂಪಿಯನ್ ಭಾರತ ತಂಡದ ಕೋಚ ರಾಹುಲ್ ದ್ರಾವಿಡ್ (Rahul Dravid) ಎಂಥಾ ಜಂಟಲ್ ಮ್ಯಾನ್ ಎಂಬುದು ಎಲ್ಲರಿಗೂ ಗೊತ್ತು. ಈಗ ಮತ್ತೊಮ್ಮೆ ದ್ರಾವಿಡ್ ಅವರ ವ್ಯಕ್ತಿತ್ವದ ಅನಾವರಣವಾಗಿದೆ. ವೆಸ್ಟ್ ಇಂಡೀಸ್’ನಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ.ಗಳ ನಗದು ಬಹುಮಾನ (BCCI prize money) ಘೋಷಣೆ ಮಾಡಿತ್ತು.

Rahul Dravid has refused to accept the additional Rs 2.5 crore offered by BCCI
Image Credit to Original Source

ಇದರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಹಾಗೂ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 5 ಕೋಟಿ ರೂಪಾಯಿ ನೀಡಲು ಬಿಸಿಸಿಐ ಮುಂದಾಗಿತ್ತು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್’ಗಳಿಗೆ ತಲಾ 2.5 ಕೋಟಿ ರೂಪಾಯಿ ನೀಡಲು ಬಿಸಿಸಿಐ ನಿರ್ಧರಿಸಿತ್ತು.

ತಮಗೆ 5 ಕೋಟಿ ಕೊಟ್ಟು, ತಮ್ಮ ಕೋಟಿಂಗ್ ಸ್ಟಾಫ್’ಗೆ ಎರಡೂವರೆ ಕೋಟಿ ಕೊಡುವುದಕ್ಕೆ ದ್ರಾವಿಡ್ ಅವರ ಸಮ್ಮತಿ ಇರಲಿಲ್ಲ. ಇದು ಕೋಚ್’ಗಳ ಮಧ್ಯೆ ಭೇದ ಭಾವ ಮಾಡುವ ಕೆಲಸ ಎಂಬ ಕಾರಣದಿಂದ ದ್ರಾವಿಡ್ ತಮ್ಮ ಬಹುಮಾನ ಮೊತ್ತವನ್ನೇ ಕಡಿಮೆ ಮಾಡಿಕೊಂಡಿದ್ದಾರೆ. ಐದು ಕೋಟಿ ಬದಲು ಎರಡೂವರೆ ಕೋಟಿ ರೂ.ಗಳನ್ನಷ್ಟೇ ಪಡೆದಿದ್ದಾರೆ.

ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದ ಭೀಮಾರ್ಜುನರು ಇನ್ನೆಂದೂ ಟಿ20ಯಲ್ಲಿ ಜೊತೆಯಾಗಿ ಆಡಲಾರರು..!

ಇದರೊಂದಿಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್’ಗೆ ತಲಾ 2.5 ಕೋಟಿ ರೂಪಾಯಿ ಸಿಕ್ಕಿದೆ. ತಂಡದಲ್ಲಿರುವ 3 ಮಂದಿ ಫಿಸಿಯೊಗಳು, 3 ಮೂವರು ಥ್ರೋಡೌನ್ ಸ್ಪೆಷಲಿಸ್ಟ್’ಗಳು (throwdown specialists), 2 ಮಸಾಜ್’ಮ್ಯಾನ್’ಗಳು (masseurs) ಮತ್ತು ಇಬ್ಬರು ಸ್ಟ್ರೆಂತ್ & ಕಂಡಿಷನಿಂಗ್ ಕೋಚ್’ಗಳಿಗೆ (strength and conditioning coach) ತಲಾ 2 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗಿದೆ.

Rahul Dravid has refused to accept the additional Rs 2.5 crore offered by BCCI
Image Credit to Original Source

ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?

ಟಿ20 ವಿಶ್ವಕಪ್ (t20 World Cup) ಟೂರ್ನಿಗಾಗಿ ಭಾರತ ತಂಡ (Indian Cricket Team) ದ ಜೊತೆ ಒಟ್ಟು 42 ಮಂದಿ ಅಮೆರಿಕ (America) ಹಾಗೂ ವೆಸ್ಟ್ ಇಂಡೀಸ್ (west indies) ಪ್ರವಾಸಕ್ಕೆ ತೆರಳಿದ್ದರು. ಈ ಪೈಕಿ 15 ಮಂದಿ ಕ್ರಿಕೆಟ್ ಆಟಗಾರರು ಜೊತೆಗೆ ನಾಲ್ವರು ಮೀಸಲು ಆಟಗಾರರು, ಭಾರತ ಕ್ರಿಕೆಟ್‌ ತಂಡದ ಕೋಚಿಂಗ್ ಸ್ಟಾಫ್, ತಂಡದ ಸಹಾಯಕ ಸಿಬ್ಬಂದಿ, ಟೀಮ್ ಮ್ಯಾನೇಜರ್, ಲಾಜಿಸ್ಟಿಕ್ ಮ್ಯಾನೇಜರ್ ಹಾಗೂ ಮೀಡಿಯಾ ಟೀಮ್’ನ ಸದಸ್ಯರು ಸೇರಿದ್ದಾರೆ.

ಇದನ್ನೂ ಓದಿ :  Gautam Gambhir : ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭೀರ್‌ ನೇಮಕ : ಜಯ್‌ ಶಾ

2018ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದಾಗ ಆ ತಂಡದ ಕೋಚ್ ಆಗಿದ್ದ ದ್ರಾವಿಡ್, ಆಗಲೂ ತಮ್ಮ ಸಪೋರ್ಟಿಂಗ್ ಸ್ಟಾಫ್’ಗೆ ನೀಡಿದ್ದಷ್ಟೇ ನಗದು ಬಹುಮಾನ ಪಡೆದಿದ್ದರು. ಆಗ ಕೋಚ್ ದ್ರಾವಿಡ್ ಅವರಿಗೆ 50 ಲಕ್ಷ ರೂ. ಹಾಗೂ ಸಪೋರ್ಟಿಂಗ್ ಸ್ಟಾಫ್’ಗೆ 30 ಲಕ್ಷ ರೂಪಾಯಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿತ್ತು. ಇದಕ್ಕೆ ಒಪ್ಪದ ದ್ರಾವಿಡ್ ತಾವೂ ಕೂಡ 30 ಲಕ್ಷ ರೂಪಾಯಿಗಳನ್ನೇ ಪಡೆದಿದ್ದರು.

Rahul Dravid has refused to accept the additional Rs 2.5 crore offered by BCCI

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular