Rahul Dravid Olympics: ಪ್ಯಾರಿಸ್: ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಈಗ ಹಾಲಿಡೇ ಮೂಡ್’ನಲ್ಲಿದ್ದಾರೆ. ಟಿ20 ವಿಶ್ವಕಪ್ (ICC t20 World Cup 2024) ಗೆದ್ದ ಬೆನ್ನಲ್ಲೇ ಭಾರತ ತಂಡದ ಕೋಚಿಂಗ್ ಜವಾಬ್ದಾರಿ ತೊರೆದಿರುವ ರಾಹುಲ್ ದ್ರಾವಿಡ್ ಒಲಿಂಪಿಕ್ಸ್ ಕ್ರೀಡಾಕೂಟವನ್ನು (Paris Olympics 2024) ವೀಕ್ಷಿಸಲು ಪ್ಯಾರಿಸ್’ಗೆ ತೆರಳಿದ್ದಾರೆ.

ಭಾರತ ಮತ್ತು ಅರ್ಜೆಂಟೀನಾ ತಂಡಗಳ ಮಧ್ಯೆ ನಡೆದ ಬಿ ಗುಂಪಿನ ಹಾಕಿ ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ದ್ರಾವಿಡ್ ವೀಕ್ಷಿಸಿದ್ದಾರೆ. ಈ ಪಂದ್ಯ 1-1ರಲ್ಲಿ ಡ್ರಾಗೊಂಡಿತ್ತು. ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲು ಪ್ಯಾರಿಸ್’ಗೆ ಬಂದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್, ಟೀಮ್ ಇಂಡಿಯಾದ ಹಾಕಿ ತಂಡವನ್ನು ಪ್ರೋತ್ಸಾಹಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರಿಗೆ ಹಾಕಿ ಕ್ರೀಡೆಯ ಬಗ್ಗೆ ವಿಶೇಷ ಬಾಂಧವ್ಯವಿದೆ. ಕಾರಣ, ಅದು ದ್ರಾವಿಡ್ ಅವರು ಆಡಿರುವ ಮೊದಲ ಕ್ರೀಡೆ. ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಓದುತ್ತಿದ್ದಾಗ ರಾಹುಲ್ ದ್ರಾವಿಡ್ ಹಾಕಿ ಆಟಗಾರನಾಗಿದ್ದರು. ನಂತರ ಕ್ರಿಕೆಟ್ ಕಡೆ ಆಸಕ್ತಿ ಬೆಳೆಸಿಕೊಂಡು ಇಡೀ ಜಗತ್ತೇ ಮೆಚ್ಚುವ ಕ್ರಿಕೆಟಿಗನಾಗಿ ಬೆಳೆದು ನಿಂತದ್ದು ಈಗ ಇತಿಹಾಸ.
ಇದನ್ನೂ ಓದಿ : Manu Bhaker: 22 ವರ್ಷ, 17 ಚಿನ್ನ.. ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಾಕೆ ಭಾರತದ ಗೋಲ್ಡನ್ ಗರ್ಲ್ ಶೂಟರ್ ಮನು ಭಾಕರ್
ಟಿ20 ವಿಶ್ವಕಪ್ ಟೂರ್ನಿಯ ನಂತರ ಕ್ರಿಕೆಟ್’ನಿಂದ ಬಿಡುವ ಪಡೆದಿರುವ ರಾಹುಲ್ ದ್ರಾವಿಡ್, ಮುಂದಿನ ದಿನಗಳಲ್ಲಿ ಮತ್ತೆ ಕೋಚಿಂಗ್ ಕಡೆ ಗಮನ ಹರಿಸಲಿದ್ದಾರೆ. ದ್ರಾವಿಡ್ ಮತ್ತೆ ಐಪಿಎಲ್’ಗೆ ಮರಳುವ ಸಾಧ್ಯತೆಯಿದ್ದು ರಾಜಸ್ಥಾನ್ ರಾಯಲ್ಸ್ ತಂಡದ ಪ್ರಧಾನ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2011ರಿಂದ 2013ರವರೆಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ದ್ರಾವಿಡ್, 2013ರಲ್ಲಿ ರಾಯಲ್ಸ್ ಪಡೆಯನ್ನು ಐಪಿಎಲ್ ಪ್ಲೇ ಆಫ್ ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ರಾಜಸ್ಥಾನ್ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದರು. 2013ರಲ್ಲಿ ಐಪಿಎಲ್’ಗೆ ಗುಡ್ ಬೈ ಹೇಳಿದ್ದ ದ್ರಾವಿಡ್ 2014 ಮತ್ತು 2015ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರು.
ನಂತರ ದ್ರಾವಿಡ್ ಭಾರತ ಅಂಡರ್-19 ತಂಡದ ಹೆಡ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ದ್ರಾವಿಡ್ ಅವರ ಗರಡಿಯಲ್ಲಿ 2016ರ ಅಂಡರ್-19 ವಿಶ್ವಕಪ್’ನಲ್ಲಿ ಫೈನಲ್ ತಲುಪಿದ್ದ ಭಾರತ, 2018ರ ಜ್ಯೂನಿಯರ್ ವಿಶ್ವಕಪ್’ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದನ್ನೂ ಓದಿ : ಫೀಲ್ಡರ್ ಬೌಂಡರಿ ತಡೆದರೂ ಐದು ರನ್ ಒಡಿದ ಬ್ಯಾಟ್ಸ್‌ಮನ್, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ
Rahul Dravid Paris Olympics 2024 : Rahul Dravid watched the sport he played as a child in the Olympics