ಬೆಂಗಳೂರು: (Ramiz Raja)ಭಾರತೀಯ ಕ್ರಿಕೆಟ್’ನಲ್ಲಿ ಹೊಸ ವರ್ಷಕ್ಕೆ ಹೊಸ ಬದಲಾವಣೆ ಪ್ರಾರಂಭವಾಗಿದೆ. ಟಿ20 ತಂಡಕ್ಕೆ ಪ್ರತ್ಯೇಕ ನಾಯಕನನ್ನು ನೇಮಕ ಮಾಡಿರುವ ಬಿಸಿಸಿಐ (BCCI), ಹೊಸ ಪ್ರಯೋಗಕ್ಕೆ ಮುಂದಾಗಿದೆ. ಟೀಮ್ ಇಂಡಿಯಾದ ಈ ಬದಲಾವಣೆಗೆ ಪಾಕಿಸ್ತಾನ ಕ್ರಿಕೆಟ್ ತಂಡ ಕಾರಣವಂತೆ. ಹೀಗಂದಿರೋದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Paksitan cricket Board – PCB) ಮಾಜಿ ಮುಖ್ಯಸ್ಥ ರಮೀಜ್ ರಾಜಾ (Ramiz Raja).
ಶ್ರೀಲಂಕಾ ವಿರುದ್ಧ ಜನವರಿ 3ರಂದು ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೈಫಲ್ಯದ ನಂತರ ರೋಹಿತ್ ನಾಯಕತ್ವದ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಹೀಗಾಗಿ ಟಿ20 ತಂಡಕ್ಕೆ ಪ್ರತ್ಯೇಕ ನಾಯಕನನ್ನು ನೇಮಕ ಮಾಡುವ ಬಗ್ಗೆ ಬಿಸಿಸಿಐ ಒಲವು ಹೊಂದಿದ್ದು, ಇದರ ಮೊದಲ ಹೆಜ್ಜೆ ಎಂಬಂತೆ ಶ್ರೀಲಂಕಾ ವಿರುದ್ಧದ ಸರಣಿಗೆ ಪಾಂಡ್ಯ ನಾಯಕನಾಗಿ ನೇಮಕವಾಗಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವ ತಂಡವನ್ನು ಕಟ್ಟಲು ಬಿಸಿಸಿಐ ಮುಂದಾಗಿದೆ.
ಭಾರತೀಯ ಕ್ರಿಕೆಟ್’ನಲ್ಲಿ ಇಷ್ಟೆಲ್ಲಾ ಬದಲಾವಣೆಗಳು ನಡೆಯುತ್ತಿರುವುದಕ್ಕೆ ಪಾಕಿಸ್ತಾನ ಕಾರಣ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಹೇಳಿದ್ದಾರೆ.
“ನಾವು ವೈಟ್ ಬಾಲ್ ಕ್ರಿಕೆಟ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದೇವೆ. ನಾವು ಏಷ್ಯಾ ಕಪ್ ಫೈನಲ್’ನಲ್ಲಿ ಆಡಿದ್ದೇವೆ. ಆದರೆ ಭಾರತ ಫೈನಲ್’ಗೆ ಅರ್ಹತೆ ಪಡೆಯಲಿಲ್ಲ. ಕ್ರಿಕೆಟ್’ನಲ್ಲಿ ಬಿಲಿಯನ್ ಡಾಲರ್ ಇಂಡಸ್ಟ್ರಿಯಾಗಿರುವ ಭಾರತ ನಮಗಿಂತ ಹಿಂದಿದೆ. ಏಷ್ಯಾ ಕಪ್’ನಲ್ಲಿ ನಾವು ತೋರಿದ ಪ್ರದರ್ಶನವನ್ನು ಅರಗಿಸಿಕೊಳ್ಳಲು ಬಿಸಿಸಿಐಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಯ್ಕೆ ಸಮಿತಿಯ ಮುಖ್ಯಸ್ಥ, ಸೀನಿಯರ್ ಆಯ್ಕೆ ಸಮಿತಿಯನ್ನು ಬಿಸಿಸಿಐ ಕಿತ್ತು ಹಾಕಿದೆ. ತಂಡದ ನಾಯಕತ್ವದಲ್ಲೂ ಬದಲಾವಣೆಗಳಾಗಿವೆ. ಇದಕ್ಕೆಲ್ಲಾ ಭಾರತ ವಿರುದ್ಧ ಪಾಕಿಸ್ತಾನ ಆಡಿದ ಆಟವೇ ಕಾರಣ” ಎಂದಿದ್ದಾರೆ ರಮೀಜ್ ರಾಜಾ.
ಇದನ್ನೂ ಓದಿ:ICC Women’s T20 World Cup : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತ ತಂಡ ಪ್ರಕಟ, ಟೀಮ್ ಇಂಡಿಯಾದಲ್ಲಿ ಏಕೈಕ ಕನ್ನಡತಿ
ಇದನ್ನೂ ಓದಿ:Team India fixtures 2023: ಮುಂದಿನ ವರ್ಷ ಟೀಮ್ ಇಂಡಿಯಾ ಆಡಲಿರುವ ಸರಣಿಗಳು ಎಷ್ಟು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ
ಭಾರತೀಯ ಕ್ರಿಕೆಟ್’ನಲ್ಲಿ ಬದಲಾವಣೆಗೆ ನಾವು ಕಾರಣ ಎನ್ನುತ್ತಿರುವ ರಮೀಜ್ ರಾಜಾ ತಮ್ಮ ಬುಡಕ್ಕೆ ಬೆಂಕಿ ಬಿದ್ದಿರುವುದನ್ನು ಮರೆತಂತಿದೆ. ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದಲ್ಲೇ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕ್ 0-3 ಅಂತರದಲ್ಲಿ ಹೀನಾಯವಾಗಿ ಸೋತಿತ್ತು. ಈ ಸೋಲಿನ ಬೆನ್ನಲ್ಲೇ ರಮೀಜ್ ರಾಜಾ ಅವರನ್ನು ಪಾಕ್ ಕ್ರಿಕೆಟ್ ಮಂಡಳಿಯ ಸ್ಥಾನದಿಂದ ಕಿತ್ತು ಹಾಕಲಾಗಿತ್ತು. ತವರು ನೆಲದಲ್ಲೇ ಪಾಕಿಸ್ತಾನ ತಂಡ ಹೀನಾಯವಾಗಿ ಮಣ್ಣು ಮುಕ್ಕಿದ್ದನ್ನು ಮರೆತು ಭಾರತೀಯ ಕ್ರಿಕೆಟ್’ನಲ್ಲಿ ಬದಲಾವಣೆಗೆ ನಾವು ಕಾರಣ ಎಂದು ಬಡಬಡಾಯಿಸುತ್ತಿರುವ ರಮೀಜ್ ರಾಜಾ ಕಾಮಿಡಿಯನ್’ನಂತೆ ಮಾತನಾಡುತ್ತಿದ್ದಾರೆ.
Ramiz Raja Pakistan is the reason for Team India’s leadership change