Siraj visits Vyshak house: ವೈಶಾಖ್ ಮನೆಗೆ ಬಂದ ಮೊಹಮ್ಮದ್ ಸಿರಾಜ್.. ಗೆಳೆಯನ ಕರೆಗೆ ಓಗೊಟ್ಟ ಆರ್’ಸಿಬಿ ವೇಗಿ!

ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಂಗಳವಾರ ಆರ್’ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj), ಸಹ ಆಟಗಾರ ವೈಶಾಖ್ ವಿಜಯ್ ಕುಮಾರ್ Vyshak Vijaykumar) ಅವರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru)  ತಂಡ ಐಪಿಎಲ್ 2024ರ ಟೂರ್ನಿಯ ಪ್ಲೇ ಆಫ್ ಬಾಗಿಲಲ್ಲಿ ನಿಂತಿದ್ದು, ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಕಳೆದ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಆರ್’ಸಿಬಿ, ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿತ್ತು. ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಂಗಳವಾರ ಆರ್’ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj), ಸಹ ಆಟಗಾರ ವೈಶಾಖ್ ವಿಜಯ್ ಕುಮಾರ್ Vushak Vijaykumar) ಅವರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ.

RCB Mohammed Siraj visit Vushak Vijaykumar house
Image Credit To Original Source

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ವೈಶಾಖ್ ವಿಜಯ್ ಕುಮಾರ್ ಅವರ ಮನೆಗೆ ಬಂದ ಮೊಹಮ್ಮದ್ ಸಿರಾಜ್, ಕೆಲ ಹೊತ್ತು ವೈಶಾಖ್ ತಂದೆ-ತಾಯಿ ಜೊತೆ ಮಾತನಾಡಿ, ಆತಿಥ್ಯ ಸ್ವೀಕರಿಸಿ ತೆರಳಿದ್ದಾರೆ.

26 ವರ್ಷದ ಬಲಗೈ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್, ಕಳೆದೆರಡು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಈ ಬಾರಿ 4 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿರುವ ವೈಶಾಖ್, 9.79ರ ಎಕಾನಮಿಯಲ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ ಈ ಸಾಲಿನಲ್ಲಿ 12 ಪಂದ್ಯಗಳನ್ನಾಡಿದ್ದು 9.30 ಎಕಾನಮಿಯಲ್ಲಿ 12 ವಿಕೆಟ್ ಕಬಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-2024 ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಆರು ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿಡಬೇಕಾದರೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧದ ಪಂದ್ಯವನ್ನು  ಆರ್’ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸಿಎಸ್’ಕೆ ವಿರುದ್ಧ ಆರ್’ಸಿಬಿ ಕನಿಷ್ಠ 18 ರನ್’ಗಳಿಂದ ಪಂದ್ಯ ಗೆಲ್ಲಬೇಕಿದೆ. ಒಂದು ವೇಳೆ ಚೇಸಿಂಗ್ ಮಾಡಿದರೆ ಸಿಎಸ್’ಕೆ ಒಡ್ಡುವ ಗುರಿಯನ್ನು 18.1 ಓವರ್’ಗಳ ಒಳಗೆ ತಲುಪಬೇಕಿದೆ. ಹಾಗಾದಲ್ಲಿ ಮಾತ್ರ ಆರ್’ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳಿಂದ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆರ್’ಸಿಬಿ +0.387 ರನ್ ರೇಟ್ ಹೊಂದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ +0.528 ರನ್ ರೇಟ್ ಹೊಂದಿದೆ.

RCB Mohammed Siraj visit Vushak Vijaykumar house
Image Credit To BCCI/IPL

ಆದರೆ ಮೇ 18ರಂದು ಚಿನ್ನಸ್ವಾಮಿಯಲ್ಲಿ ನಡೆಯುವ ಈ ಹೈವೋಲ್ಟೇಜ್ ಪಂದ್ಯಕ್ಕೆ (RCB vs CSK) ಮಳೆಯ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವರದಿಯ ಪ್ರಕಾರ ಶನಿವಾರವೂ ಮಳೆ ಸುರಿಯುವ ಸಾಧ್ಯತೆಯಿದೆ.

ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾಗಲಿದೆ. ಆಗ RCB ತಂಡ 14 ಪಂದ್ಯಗಳಿಂದ ಕೇವಲ 13 ಅಂಕ ಗಳಿಸಿದಂತಾಗುತ್ತದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಿಂದ 15 ಅಂಕ ಗಳಿಸಿ ಪ್ಲೇ ಆಫ್ ಹಂತಕ್ಕೇರಲಿದೆ.

ಇದನ್ನೂ ಓದಿ: RCB Vs CSK Match: RCB ಪ್ಲೇ ಆಫ್ ಕನಸಿಗೆ ವರುಣನ ಅವಕೃಪೆ? ಪಂದ್ಯ ರದ್ದಾದರೆ RCB ಔಟ್!

ಆದರೆ ಮಳೆ ಬಂದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ (Sub air system in Chinnaswamy Stadium) ಇರುವುದು ಆರ್’ಸಿಬಿಗೆ ಗುಡ್ ನ್ಯೂಸ್. ಅದೆಷ್ಟೇ ಮಳೆಯಾದರೂ ಮಳೆ ನಿಂತ ಬಳಿಕ ಮೈದಾನದ ನೀರನ್ನು ಹೊರ ಹಾಕಿ ಕ್ಷಣ ಮಾತ್ರದಲ್ಲಿ ಕ್ರೀಡಾಂಗಣವನ್ನು ಪಂದ್ಯಕ್ಕೆ ಸಜ್ಜುಗೊಳಿಸಬಲ್ಲ ಸಾಮರ್ಥ್ಯ ಈ ಸಬ್ ಏರ್ ಸಿಸ್ಟಮ್’ಗಿದೆ.

ಇಂತಹ ವ್ಯವಸ್ಥೆ ಭಾರತದ ಬೇರೆ ಯಾವ ಕ್ರೀಡಾಂಗಣಗಳಲ್ಲೂ ಇಲ್ಲ. ಸಬ್ ಏರ್ ಸಿಸ್ಟಮ್ ಹೊಂದಿರುವ ದೇಶದ ಮೊದಲ ಕ್ರಿಕೆಟ್ ಮೈದಾನವೆಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿದೆ. ಈ ವ್ಯವಸ್ಥೆ ಇರುವುದರಿಂದ ಕಳೆದ ಕೆಲ ವರ್ಷಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ಕಾರಣ ಪಂದ್ಯಗಳು ರದ್ದಾದ ಉದಾಹರಣೆ ತುಂಬಾ ಕಡಿಮೆ.

Comments are closed.