RCB vs SRH Traves Head : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಸನ್‌ರೈಸಸ್ ಹೈದ್ರಾಬಾದ್ (Sun Rises Hyderabad) ತಂಡಗಳ ನಡುವಿನ ಪಂದ್ಯದಲ್ಲಿ ಟ್ರಾವೆಸ್ ಹೆಡ್ ಹೊಸ ದಾಖಲೆ ಬರೆದಿದ್ದಾರೆ. ಟ್ರಾವೆಸ್ ಹೆಡ್ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ನಾಲ್ಕನೇ ವೇಗದ ಶತಕ ಎನಿಸಿಕೊಂಡಿದೆ.

ಇನ್ನು ಸನ್‌ರೈಸಸ್ ಹೈದ್ರಾಬಾದ್ ತಂಡದ ಪರ ದಾಖಲಾದ ಅತ್ಯಂತ ವೇಗದ ಶತಕ ಎನಿಸಿಕೊಂಡಿದ್ರೆ, ಐಪಿಎಲ್‌ನಲ್ಲಿ ಇದು ನಾಲ್ಕನೇ ವೇಗದ ಶತಕವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಪಂದ್ಯದಲ್ಲಿ ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮನ ಮಾಡಿದ್ದ ಟ್ರಾವೆಸ್ ಹೆಡ್ 39 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿದ್ದಾರೆ.
Travis Head 🙌
From playing for RCB ➡️ Scoring 💯 against RCB #RCBvSRH #TATAIPL #IPLonJioCinema pic.twitter.com/1TDKCVU4Cj
— JioCinema (@JioCinema) April 15, 2024
ಟ್ರಾವೆಸ್ ಹೆಡ್ 39 ಎಸೆತಗಳನ್ನು ಎದುರಿಸಿದ್ದು, ಇದರಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡಿದೆ.ಈ ಹಿಂದೆ ಡೇವಿಡ್ ವಾರ್ನರ್ ಸನ್‌ರೈಸಸ್ ಹೈದ್ರಾಬಾದ್ ಪರ ಕೇವಲ 43 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದ್ರೆ ಟ್ರಾವೆಸ್ ಹೆಡ್ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಟ್ರಾವೆಸ್ ಹೆಡ್ ಬರೋಬ್ಬರಿ 102 ರನ್ ಗಳಿಸಿ ಔಟಾದರು.
ಇದನ್ನೂ ಓದಿ : ಐಪಿಎಲ್ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಅಗ್ರಸ್ಥಾನ : ಇಲ್ಲಿದೆ ಆರೆಂಜ್, ಪರ್ಪಲ್ ಕ್ಯಾಪ್ ಆಟಗಾರರ ಪಟ್ಟಿ
Head-ing towards another classic Bengaluru run-fest 🔥#TATAIPL #RCBvSRH #IPLonJioCinema #IPLinTelugu | @SunRisers pic.twitter.com/Y6FgzZRlm9
— JioCinema (@JioCinema) April 15, 2024
ಇದನ್ನೂ ಓದಿ :ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕ ? RCB Vs MI ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬದಲು ರಣತಂತ್ರ ರೂಪಿಸಿದ ಶರ್ಮಾ
ಐಪಿಎಲ್‌ನ ವೇಗದ ಶತಕದ ಸರದಾರರು :
ಕ್ರಿಸ್ ಗೇಲ್ 30 ಎಸೆತ RCB vs PWI ಬೆಂಗಳೂರು 23 ಏಪ್ರಿಲ್ 2013
ಯೂಸುಫ್ ಪಠಾಣ್ 37 ಎಸೆತ RR ವಿರುದ್ಧ MI ಮುಂಬೈ 13 ಮಾರ್ಚ್ 2010
ಡೇವಿಡ್ ಮಿಲ್ಲರ್ 38 ಎಸೆತ KXIP ವಿರುದ್ಧ RCB ಮೊಹಾಲಿ 6 ಮೇ 2013
ಟ್ರಾವಿಸ್ ಹೆಡ್ 39 ಎಸೆತ RCB vs SRH ಬೆಂಗಳೂರು 15 ಏಪ್ರಿಲ್ 2024
ಆಡಮ್ ಗಿಲ್‌ಕ್ರಿಸ್ಟ್ 42 ಎಸೆತ DC ವಿರುದ್ಧ MI ಮುಂಬೈ 27 ಏಪ್ರಿಲ್ 2008

ಸನ್ ರೈಸಸ್ ಹೈದ್ರಾಬಾದ್ ಪರ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 34ರನ್ ಗಳಿಸಿದ್ರೆ, ಟ್ರಾವೆಸ್ ಹೆಡ್ ಅಂತಿಮವಾಗಿ 41 ಎಸೆತಗಳಲ್ಲಿ 102 ರನ್ ಬಾರಿಸಿದ್ದಾರೆ. ಹೆನ್ರಿಕ್ ಕ್ಲಾಸೆನ್ 31 ಎಸೆಗಳಲ್ಲಿ 67 ಹಾಗೂ ಮಕ್ರಾಮ್ 18ರನ್ ಬಾರಿಸಿದ್ದಾರೆ. ಈ ಮೂಲಕ ಸನ್‌ರೈಸಸ್ ಹೈದ್ರಾಬಾದ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿದೆ.
ಇದನ್ನೂ ಓದಿ : ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ : ಹಾರ್ದಿಕ್ ಪಾಂಡ್ಯ ಸಹೋದರ ಅರೆಸ್ಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಲೂಕ್ ಫರ್ಗುಸನ್ 2, ಟೋರ್ಪೆ 1 ವಿಕೆಟ್ ಪಡೆದುಕೊಂಡಿದ್ದಾರೆ. ಸನ್ ರೈಸಸ್ ಹೈದ್ರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ರನ್ ಬಾರಿಸಿದ ತಂಡ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೈದ್ರಾಬಾದ್ ದಾಖಲೆಯ ಸವಾಲು ನೀಡಿದೆ.
RCB vs SRH Traves Head 102 runs Scores 4th fastest century in IPL History