ಕೋಲ್ಕತ್ತಾ : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB WIN) ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ದ (LSG vs RCB ) ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ. ರಜತ್ ಪಾಟೀದಾರ್ ಚೊಚ್ಚಲ ಶತಕ ಬೆಂಗಳೂರು ತಂಡವನ್ನು ಮುಂದಿನ ಹಂತಕ್ಕೆ ಮುಟ್ಟಿಸಿದ್ರೆ, ಇತ್ತ ಕನ್ನಡಿಗ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟ ವ್ಯರ್ಥವಾಗಿದೆ. ಚೊಚ್ಚಲ ಐಪಿಎಲ್‌ನಲ್ಲೇ ಟ್ರೋಫಿ ಗೆಲ್ಲುವ ಕನಸು ಕಂಡಿದ್ದ ಲಕ್ನೋ ತಂಡಕ್ಕೆ ನಿರಾಸೆಯಾಗಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB WIN) ತಂಡಕ್ಕೆ ಮೋಶಿನ್ ಖಾನ್ ಆರಂಭಿಕ ಆಘಾತ ನೀಡಿದ್ರು. ಶೂನ್ಯಕ್ಕೆ ನಾಯಕ ಡುಪ್ಲೆಸಿಸ್ ಅವರನ್ನು ಬಲಿ ಪಡೆಯುವ ಮೂಲಕ ಬೆಂಗಳೂರು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದ್ರು. ನಂತರದಲ್ಲಿ ರಜತ್ ಪಾಟೀದಾರ್ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟಲು ಮುಂದಾದ್ರು. ಆದರೆ 25 ರನ್ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿಯನ್ನು ಆವೇಶ್ ಖಾನ್ ಔಟ್ ಮಾಡಿದ್ರು. ನಂತರ ಬಂದ ಮ್ಯಾಕ್ಸ್‌ವೆಲ್ ಆಟ ಕೇವಲ 9 ರನ್ ಗಳಿಗೆ ಸೀಮಿತವಾಯ್ತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೂಡ ರಜತ್ ಪಾಟೀಧಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಕೇವಲ 54 ಎಸೆತಗಳಲ್ಲಿ7 ಸಿಕ್ಸರ್ ಹಾಗೂ 12 ಬೌಂಡರಿ ನೆರವಿನಿಂದ ಬರೋಬ್ಬರಿ 112 ರನ್ ಸಿಡಿಸಿದ್ರೆ, ದಿನೇಶ್ ಕಾರ್ತಿಕ್ ಅಂತಿಮ ಹಂತದಲ್ಲಿ 23 ಎಸೆತಗಳಲ್ಲಿ 37 ರನ್ ಬಾರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 200ರ ಗಡಿ ದಾಟಿಸಿದ್ರು. ಅಂತಿಮವಾಗಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 207ರನ್ ಗಳಿಸಿತ್ತು.
Is this the game for @RCBTweets then❓
— IndianPremierLeague (@IPL) May 25, 2022
Josh Hazlewood strikes in the 19th over. 👏 👏
KL Rahul departs after a brilliant 79.
Follow the match ▶️ https://t.co/cOuFDWIUmk #TATAIPL | #LSGvRCB pic.twitter.com/Gcc4rcY8N0
ಬೆಂಗಳೂರ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಬೆನತ್ತಲು ಹೊರಟ ಲಕ್ನೋ ತಂಡಕ್ಕೆ ಡಿಕಾಕ್ ಮೂಲಕ ಆಘಾತ ಎದುರಾಗಿತ್ತು. ಕೇವಲ 6 ರನ್‌ಗಳಿಸಿದ್ದಾಗ ಡಿಕಾಕ್ ಮೊಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದ್ರು. ಆದರೆ ನಾಯಕ ಕನ್ನಡಿಗ ಕೆ.ಎಲ್.ರಾಹುಲ್ ಜೊತೆಯಾದ ಮನನ್ ವೊಹಾರಾ ಇನ್ನಿಂಗ್ಸ್ ಕಟ್ಟಲು ಮುಂದಾದ್ರೆ, ಹಜಲ್‌ವುಡ್ ಬ್ರೆಕ್ ಹಾಕಿದ್ರು, ಮನನ್ ಓಹ್ರಾ ಕೇವಲ 19 ರನ್ ಗಳಿಸಿ ಔಟಾದ್ರು. ಕೆ.ಎಲ್.ರಾಹುಲ್ ಜೊತೆಯಾದ ದೀಪಕ್ ಹೂಡ ಉತ್ತಮ ಜೊತೆಯಾಟವಾಡಿದ್ರು. ದೀಪಕ್ ಹೂಡ 26 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದ್ರೆ ನಂತರ ಬಂದ ಸ್ಟೋಯಿನಿಸ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಲಕ್ನೋ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ನಾಯಕ ಕೆ.ಎಲ್.ರಾಹುಲ್ 58 ಎಸೆತಗಳಲ್ಲಿ ಬರೊಬ್ಬರಿ 5 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 79 ರನ್ ಸಿಡಿಸಿ ಔಟಾದ್ರು. ನಂತರ ಬಂದ ಕೃನಾಲ್ ಪಾಂಡ್ಯ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ಈ ಮೂಲಕ ಬೆಂಗಳೂರು ವಿರುದ್ದ ಸೋಲಿಗೆ ಶರಣಾಗಿದೆ.
Eliminator. Royal Challengers Bangalore Won by 14 Run(s) (Qualified) https://t.co/cOuFDWImwM #Eliminator #TATAIPL #IPL2022
— IndianPremierLeague (@IPL) May 25, 2022
ಸಂಕ್ಷಿಪ್ತ ಸ್ಕೋರ್ :
ರಾಯಲ್ ಚಾಲೆಂಜರ್ಸ್ ಬೆಂಗಳೂರು : ರಜತ್ ಪಾಟೀದಾರ್ (112), ದಿನೇಶ್ ಕಾರ್ತಿಕ್ (37), ವಿರಾಟ್ ಕೊಹ್ಲಿ (25), ಲಮೋರ್ (14), ಮೋಶಿನ್ ಖಾನ್ 25/1, ಕೃನಾಲ್ ಪಾಂಡ್ಯ 1/39, ಆವೇಶ್ ಖಾನ್ 44/1, ರವಿ ಬಿಶ್ನೋಯಿ 45/1
ಲಕ್ನೋ ಸೂಪರ್ ಜೈಂಟ್ಸ್ : ಕೆ.ಎಲ್.ರಾಹುಲ್, ದೀಪಕ್ ಹೂಡಾ (45) , ಮನನ್ ವೋಹ್ರಾ (19) , ಎವಿನ್ ಲೂವಿಸ್ ( ) , ಮಾರ್ಕಸ್ ಸ್ಟೊಯಿನಿಸ್ (9), ಮೊಹಮ್ಮದ್ ಸಿರಾಜ್ 41/1, ಜೋಶ್ ಹಜಲ್‌ವುಡ್ 35/1, ವನಿಂದು ಹಸರಂಗ 42/1, ಹರ್ಷಲ್ ಪಟೇಲ್ 16/1
ಇದನ್ನೂ ಓದಿ : Tilak Varma : IPL ಮೂಲಕ ಕನಸು ಬೆನ್ನತ್ತಿರುವ ಯುವ ಆಟಗಾರ ತಿಲಕ್ ವರ್ಮ
ಇದನ್ನೂ ಓದಿ : IPL Crickter Umran Mailk ಭರವಸೆಯ ದ್ರುವತಾರೆ ಉಮ್ರಾನ್ ಮಲ್ಲಿಕ್
RCB WIN : LSG vs RCB Match IPL 2022