ಬುಧವಾರ, ಏಪ್ರಿಲ್ 30, 2025
HomeSportsCricketRinku Singh : ಗ್ಯಾಸ್ ಸಿಲಿಂಡರ್ ವಿತರಕನ ಮಗನಿಗೆ ಸದ್ಯದಲ್ಲೇ ತೆರೆಯಲಿದೆ ಟೀಮ್ ಇಂಡಿಯಾ ಬಾಗಿಲು

Rinku Singh : ಗ್ಯಾಸ್ ಸಿಲಿಂಡರ್ ವಿತರಕನ ಮಗನಿಗೆ ಸದ್ಯದಲ್ಲೇ ತೆರೆಯಲಿದೆ ಟೀಮ್ ಇಂಡಿಯಾ ಬಾಗಿಲು

- Advertisement -

ಬೆಂಗಳೂರು : ಇದು ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುವ ಉತ್ತರ ಪ್ರದೇಶದ ಪ್ರತಿಭಾವಂತ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಅವರ ಸ್ಫೂರ್ತಿದಾಯಕ ಕಥೆ. ಐಪಿಎಲ್-2023 ಟೂರ್ನಿಯಲ್ಲಿ ರಿಂಕ್ ಸಿಂಗ್ ಕೆಕೆಆರ್ ಪರ ಅಮೋಘ ಆಟವಾಡಿದ್ದ ರಿಂಕು ಸಿಂಗ್ 14 ಪಂದ್ಯಗಳಿಂದ 149.53ರ ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ 474 ರನ್ ಕಲೆ ಹಾಕಿ ಗಮನ ಸೆಳೆದಿದ್ದರು.

ಕೋಲ್ಕತಾ ನೈಟ್ ರೈಡರ್ಸ್ ಪರ ಫಿನಿಷರ್ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದ ಉತ್ತರ ಪ್ರದೇಶದ ಎಡಗೈ ದಾಂಡಿಗ ರಿಂಕು ಸಿಂಗ್ (Rinku Singh) ಗುಜರಾತ್ ಟೈಟನ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 30 ರನ್‌ಗಳ ಅವಶ್ಯಕತೆಯಿದ್ದಾಗ ಸತತ ಐದು ಸಿಕ್ಸರ್ ಬಾರಿಸಿ ನಂಬಲಸಾಧ್ಯ ರೀತಿಯಲ್ಲಿ ಕೆಕೆಆರ್ ತಂಡವನ್ನು ಗೆಲ್ಲಿಸಿದ್ದರು. ಐಪಿಎಲ್‌ನಲ್ಲಿ ತೋರಿರುವ ಅಮೋಘ ಪ್ರದರ್ಶನ ರಿಂಕ್ ಸಿಂಗ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಿಕೊಡುವ ಸಾಧ್ಯತೆಯಿದೆ.

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿರುವ ಟೀಮ್ ಇಂಡಿಯಾದಲ್ಲಿ ರಿಂಕು ಸಿಂಗ್ ಸ್ಥಾನ ಪಡೆಯಲಿದ್ದಾರೆ ಎನ್ನಲಾಗ್ತಿದೆ. 25 ವರ್ಷದ ರಿಂಕು ಸಿಂಗ್ ಬಡಕುಟುಂಬದಿಂದ ಬಂದವರು. ಅವರ ತಂದೆ ಕಾನ್‌ಚಂದ್ರ ಸಿಂಗ್ ಉತ್ತರ ಪ್ರದೇಶದ ಅಲಿಗಢದಲ್ಲಿ ಎಲ್‌ಪಿಜಿ ಸಿಲಿಂಡರ್ ಡಿಸ್ಟ್ರಿಬ್ಯೂಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತುಂಬಾ ವರ್ಷಗಳ ಕಾಲ ರಿಂಕು ಸಿಂಗ್ ತಮ್ಮ ಕುಟುಂಬದೊಂದಿಗೆ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಆದರೆ ಐಪಿಎಲ್‌ನಲ್ಲಿ ಆಡಲಾರಂಭಿಸಿದ ನಂತರ ಅಲ್ಲಿ ಬಂದ ಹಣದಲ್ಲಿ ತಂದೆ ತಾಯಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ.

ರಿಂಕು ಸಿಂಗ್ ಅವರ ಅಣ್ಣ ಕ್ರಿಕೆಟ್ ಕೋಚಿಂಗ್ ಸೆಂಟರ್ ಒಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಕೆಲಸವನ್ನು ರಿಂಕು ಸಿಂಗ್ ಅವರಿಗೂ ಆಫರ್ ಮಾಡಲಾಗಿತ್ತು. ಆದರೆ ಅದನ್ನು ನಿರಾಕರಿಸಿದ್ದ ರಿಂಕು, ನಾನು ಕ್ರಿಕೆಟ್ ಆಡುತ್ತೇನೆ ಎಂದು ಹೊರಟಿದ್ದರು. ಮನೆಯ ಜವಾಬ್ದಾರಿ ಹೊರುವ ಬದಲು ಕ್ರಿಕೆಟ್ ಆಡುತ್ತಿದ್ದ ರಿಂಕು ಸಿಂಗ್‌ಗೆ ತಂದೆ ಸಾಕಷ್ಟು ಬಾರಿ ಹೊಡೆದದ್ದೂ ಇದೆ. ತಂದೆಯ ವಿರೋಧ ಕಟ್ಟಿಕೊಂಡೇ ಕ್ರಿಕೆಟ್ ಆಡಿದ್ದ ರಿಂಕು ಸಿಂಗ್, ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆಯುವವರೆಗೆ ತಮ್ಮ ಕ್ರಿಕೆಟ್ ಪ್ರಯಾಣದಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ರಿಂಕು ಸಿಂಗ್‌ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಖಚಿತ ಎನ್ನಲಾಗ್ತಿದೆ.

ಇದನ್ನೂ ಓದಿ : KL Rahul – Asia Cup : ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಷ್ಯಾ ಕಪ್‌ನಲ್ಲೂ ಆಡುವುದು ಡೌಟ್!

ಇದನ್ನೂ ಓದಿ : ICC World Cup 2023 : ತಂಡಗಳ ಪಟ್ಟಿ ಸಲ್ಲಿಸಲು ಡೆಡ್‌ಲೈನ್ ಫಿಕ್ಸ್ ಮಾಡಿದ ಐಸಿಸಿ, ಬಿಸಿಸಿಐಗೆ ಟೆನ್ಷನ್ ಶುರು

ಭಾರತ Vs ವೆಸ್ಟ್ ಇಂಡೀಸ್ ಟಿ20 ಸರಣಿಯ ವೇಳಾಪಟ್ಟಿ :

  • ಮೊದಲ ಟಿ20: ಆಗಸ್ಟ್ 04 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)
  • ಎರಡನೇ ಟಿ20: ಆಗಸ್ಟ್ 06 (ನ್ಯಾಷನಲ್ ಸ್ಟೇಡಿಯಂ, ಗಯಾನ)
  • ಮೂರನೇ ಟಿ20: ಆಗಸ್ಟ್ 08 (ನ್ಯಾಷನಲ್ ಸ್ಟೇಡಿಯಂ, ಗಯಾನ)
  • ನಾಲ್ಕನೇ ಟಿ20: ಆಗಸ್ಟ್ 12 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)
  • ಐದನೇ ಟಿ20: ಆಗಸ್ಟ್ 13 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)

Rinku Singh: The door of Team India will soon open for the son of a gas cylinder distributor

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular