ಸೋಮವಾರ, ಏಪ್ರಿಲ್ 28, 2025
HomeSportsCricketPant meets Dhoni: ಕ್ರಿಕೆಟ್ ಜನಕರ ನಾಡಿನಲ್ಲಿ ಮಹಾಗುರು, ಸೂಪರ್ ಹೀರೋನನ್ನು ಭೇಟಿ ಮಾಡಿದ ಶಿಷ್ಯರು

Pant meets Dhoni: ಕ್ರಿಕೆಟ್ ಜನಕರ ನಾಡಿನಲ್ಲಿ ಮಹಾಗುರು, ಸೂಪರ್ ಹೀರೋನನ್ನು ಭೇಟಿ ಮಾಡಿದ ಶಿಷ್ಯರು

- Advertisement -

ಲಂಡನ್: ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಪಂದ್ಯ ವೀಕ್ಷಿಸಲು ಎಡ್ಜ್’ಬಾಸ್ಟಮ್ ಮೈದಾನಕ್ಕೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರು ಬೇರಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತಿನ ‘ದಿ ಗ್ರೇಟ್ ಫಿನಿಷರ್’ (Rishabh Pant Meets Mahindra Singh Dhoni) ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni)

ಎಡ್ಜ್’ಬಾಸ್ಟನ್ ಮೈದಾನದಲ್ಲಿ ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 49 ರನ್’ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಗೆದ್ದುಕೊಂಡಿತು. ಸೌಥಾಂಪ್ಟನ್’ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಭಾರತ 50 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. 2ನೇ ಟಿ20 ಪಂದ್ಯವನ್ನು ಗೆದ್ದ ನಂತರ ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್’ಗಳಾದ ರಿಷಭ್ ಪಂತ್ (Rishabh Pant) ಮತ್ತು ಇಶಾನ್ ಕಿಶನ್ (Ishan Kishan) ಎಂ.ಎಸ್ ಧೋನಿ ಅವರನ್ನು ಕ್ರೀಡಾಂಗಣದಲ್ಲಿ ಭೇಟಿ ಮಾಡಿದರು. ಧೋನಿ ಅವರ ಅತೀ ದೊಡ್ಡ ಫ್ಯಾನ್ ಕೂಡ ಆಗಿರುವ ರಿಷಭ್ ಪಂತ್, ತಮ್ಮ ಸೂಪರ್ ಹೀರೋ ಜೊತೆ ಒಂದಷ್ಟು ಹೊತ್ತು ಕಾಲ ಕಳೆದು ಫೋಟೋ ಕ್ಲಿಕ್ಕಿಸಿಕೊಂಡರು. ಜುಲೈ 7ರಂದು ನಡೆದಿದ್ದ ಧೋನಿ ಬರ್ತ್ ಡೇ ಪಾರ್ಟಿಯಲ್ಲೂ ರಿಷಭ್ ಪಂತ್ ಕಾಣಿಸಿಕೊಂಡಿದ್ದರು.

ಮತ್ತೊಂದೆಡೆ ಧೋನಿ ತವರು ರಾಜ್ಯ ಜಾರ್ಖಂಡ್’ನವರೇ ಆಗಿರುವ ಇಶಾನ್ ಕಿಶನ್ ತಮ್ಮ ರೋಲ್ ಮಾಡೆಲ್ ಧೋನಿಯವರನ್ನು ಭೇಟಿ ಮಾಡಿ ಒಂದಷ್ಟು ಹೊತ್ತು ಕ್ರಿಕೆಟ್ ಪಾಠ ಹೇಳಿಸಿಕೊಂಡರು. ಧೋನಿ ಜೊತೆ ಇಶಾನ್ ಕಿಶನ್ ಮಾತನಾಡುತ್ತಿರುವ ಚಿತ್ರಗಳನ್ನು ಸ್ವತಃ ಬಿಸಿಸಿಸಿ ತನ್ನ ಸಾಮಾಜಿಕ ಜಾಲತಾಣ ಅಕೌಂಟ್’ಗಳಲ್ಲಿ ಪ್ರಕಟಿಸಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿಫಲರಾಗಿದ್ದ ಇಶಾನ್ ಕಿಶನ್, 2ನೇ ಟಿ20 ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇಶಾನ್ ಬದಲು ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ರಿಷಭ್ ಪಂತ್, 15 ಎಸೆತಗಳಲ್ಲಿ 26 ರನ್ ಸಿಡಿಸಿದ್ದರು. ಅಷ್ಟೇ ಅಲ್ಲ, ಪ್ರಥಮ ವಿಕೆಟ್’ಗೆ ರೋಹಿತ್ ಜೊತೆ 29 ಎಸೆತಗಳಲ್ಲಿ 49 ರನ್’ಗಳ ಜೊತೆಯಾಟವಾಡಿದ್ದರು. ಅಂತಿಮವಾಗಿ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿದ್ದ ಭಾರತ ತಂಡ, ನಂತರ ಆತಿಥೇಯ ಇಂಗ್ಲೆಂಡ್ ತಂಡವನ್ನು 121 ರನ್’ಗಳಿಗೆ ಆಲೌಟ್ ಮಾಡಿ 49 ರನ್’ಗಳಿಂದ ಪಂದ್ಯ ಗೆದ್ದುಕೊಂಡಿತ್ತು. ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಅನುಭವೀ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ 3 ಓವರ್’ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 15 ರನ್ನಿತ್ತು 3 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ : ಯುವ ಆಟಗಾರನ ಹಾದಿಗೆ ವಿರಾಟ್ ಅಡ್ಡಗಾಲು, ಈಗೇನ್ಮಾಡ್ತಾರೆ ಟೀಮ್ ಇಂಡಿಯಾ ಹೀರೋ ?

ಇದನ್ನೂ ಓದಿ : KSCA Ground Ban : ಪಂದ್ಯ ನಡೆಯುತ್ತಿದ್ದಾಗಲೇ ಸ್ಟಂಪ್‌ಗೆ ಒದ್ದ ಗ್ರೌಂಡ್ ಓನರ್, KSCAನಿಂದ ಗ್ರೌಂಡ್ ಬ್ಯಾನ್

Rishabh Pant Meets Mahindra Singh Dhoni in London

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular