Rohit Sharma Retirement : ಕಳೆದ ವರ್ಷ ಭಾರತಕ್ಕೆ ಟಿ20 ವಿಶ್ವಕಪ್ ಜಯಿಸಿಕೊಟ್ಟ ನಂತರ, ಭಾರತದ ಏಕದಿನ ಅಂತರರಾಷ್ಟ್ರೀಯ (ಏಕದಿನ) ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ ಅವರು ಟಿ ೨೦ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮುಂಬರುವ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ನಂತರ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಹಳ ಸಮಯದಿಂದ ಫಾರ್ಮ್‌ನಲ್ಲಿಲ್ಲ ಇದೇ ಕಾರಣದಿಂದಲೇ ರೋಹಿತ್ ಶರ್ಮ ಕ್ರಿಕೆಟ್ ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಅಲ್ಲದೇ ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ಅವರ ಭವಿಷ್ಯದ ಯೋಜನೆಗಳನ್ನು ಸ್ಪಷ್ಟಪಡಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ನಾಯಕನನ್ನು ಕೇಳಿಕೊಂಡಿದೆ ಎಂದು ವರದಿಯಾಗಿದೆ.

2027 ಏಕದಿನ ವಿಶ್ವಕಪ್‌ಗಾಗಿ ಮಂಡಳಿಯು ಹೊಸ ರಣತಂತ್ರವನ್ನು ರೂಪಿಸಲು ಉತ್ಸುಕವಾಗಿದೆ, ರೋಹಿತ್ ಅವರ ಭವಿಷ್ಯದ ಬಗ್ಗೆ ಸ್ಪಷ್ಟತೆ ಅತ್ಯಗತ್ಯ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಸಿಸಿಐ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಪರಿವರ್ತನೆಯನ್ನು ಪ್ರಾರಂಭಿಸಲು ಬಯಸಿದೆ. ಎರಡೂ ಸ್ವರೂಪಗಳಲ್ಲಿ ಸ್ಥಿರ ನಾಯಕತ್ವದ ಆಯ್ಕೆಯನ್ನು ಕಂಡುಹಿಡಿಯಲು ಮಂಡಳಿ ಉತ್ಸುಕವಾಗಿದೆ, ಆದ್ದರಿಂದ ರೋಹಿತ್ ಅವರ ಯೋಜನೆಗಳ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಂತೆ ಕೇಳಲಾಗಿದೆ.

ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ, ಹಲವು ಸಮಯಗಳ ಕಾಲ ಮುಂದುವರಿಕೆ ಮಾಡುವಂತೆ ಸೂಚಿಸಿದೆ. ಅಲ್ಲದೇ ಕಳೆದ ಆಯ್ಕೆ ಸಭೆಯಲ್ಲಿ ಆಯ್ಕೆದಾರರು ಮತ್ತು ಮಂಡಳಿಯಲ್ಲಿರುವ ಜನರು ರೋಹಿತ್ ಅವರೊಂದಿಗೆ ಈ ಚರ್ಚೆ ನಡೆಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ನಂತರ ಅವರು ತಮ್ಮ ಭವಿಷ್ಯವನ್ನು ಹೇಗೆ ಯೋಜಿಸಬೇಕೆಂದು ನಿರ್ಧರಿಸ ಬೇಕಾಗುತ್ತದೆ ಎಂದು ಅವರಿಗೆ ತಿಳಿಸಲಾಗಿದೆ.
Also Read : Cricket Talent hunt : ಯುವ ಕ್ರಿಕೆಟಿಗರಿಗೆ ಸುವರ್ಣಾವಕಾಶ : ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯಿಂದ ಟ್ಯಾಲೆಂಟ್ ಹಂಟ್
ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಹಾಗೂ ಏಕದಿನ ವಿಶ್ವಕಪ್‌ಗೆ ಹೋಗುವ ಮೊದಲು ತಂಡದ ಆಡಳಿತ ಮಂಡಳಿಯು ಕೆಲವು ಯೋಜನೆಗಳನ್ನು ರೂಪಿಸಿದೆ. ಭಾರತ ಟೆಸ್ಟ್ ತಂಡಕ್ಕೆ ಮುಂಚೂಣಿಯಲ್ಲಿ ಬೂಮ್ರಾ ಅವರ ಹೆಸರು ಕೇಳಿಬಂದಿದೆ. ಆದರೆ ವೇಗಿಗಳ ಫಿಟ್ನೆಸ್ ಅವರ ದೀರ್ಘಕಾಲೀನ ನಾಯಕತ್ವದ ಮಹತ್ವಾಕಾಂಕ್ಷೆಗಳಿಗೆ ಅಡ್ಡಿಯಾಗಬಹುದು. ಇದೇ ಕಾರಣಕ್ಕೆ ಶುಭಮನ್ ಗಿಲ್ ಕೂಡ ಮತ್ತೊಂದು ಆಯ್ಕೆಯಾಗಿದೆ.

ಉಳಿದಂತೆ ರಿಷಬ್ ಪಂತ್, ಯಶಸ್ವಿ ಜೈಸ್ವಾಲ್ ಕೂಡ ಭವಿಷ್ಯದ ನಾಯಕ ಎಂದು ಬಣ್ಣಿಸಲಾಗುತ್ತಿದೆ. ಆದರೆ ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕ್ರಿಕೆಟ್ ಗೆ ರಾಜೀನಾಮೆ ನೀಡುವ ಯಾವುದೇ ಆಯ್ಕೆಯು ತನ್ನ ಮುಂದೆ ಇಲ್ಲ ಎಂದಿದ್ದಾರೆ. ಸದ್ಯಕ್ಕೆ ಚಾಂಪಿಯನ್ಸ್ ಟ್ರೋಫಿಯ ಮೇಲೆ ಗಮನ ಹರಿಸುವುದು ಮಾತ್ರವೇ ನನ್ನ ಮುಂದೆ ಇರುವ ಗುರಿ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Also Read : TPL 2025 : ಶುರುವಾಯ್ತು ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ -2025 : ಟಿಪಿಎಲ್ ಕಂಪ್ಲೀಟ್ ಡಿಟೇಲ್ಸ್
Rohit Sharma Retirement After Champions Trophy Rumors Clarify Hitman