20 world 2024 champion captain Rohit Sharma : ಬೆಂಗಳೂರು: ಭಾರತಕ್ಕೆ 17 ವರ್ಷಗಳ ನಂತರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿ ಕೊಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಅಂತರಾಷ್ಟ್ರೀಯ ಕ್ರಿಕೆಟ್’ಗೆ ರೋಹಿತ್ ಶರ್ಮಾ (Rohit Sharma) ನಿವೃತ್ತಿಯ ಪ್ಲಾನ್ ರೆಡಿಯಾಗಿದೆ.

ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್’ನ ಯಶಸ್ವಿ ನಾಯಕರಲ್ಲಿ ಒಬ್ಬರು. ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರ ಸಾಲಿಗೆ ಸೇರಿರುವ ರೋಹಿತ್ ಶರ್ಮಾ, ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮೂರು ಐಸಿಸಿ ಟೂರ್ನಿಗಳಲ್ಲಿ ಫೈನಲ್’ಗೆ ಮುನ್ನಡೆಸಿದ್ದಾರೆ. ಕಳೆದ ವರ್ಷ ನಡೆದಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ ತಂಡ ರೋಹಿತ್ ಸಾರಥ್ಯದಲ್ಲಿ ಫೈನಲ್ ತಲುಪಿತ್ತು. ಆದರೆ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್’ನಲ್ಲೂ ಆಸೀಸ್ ವಿರುದ್ಧ ಭಾರತ ಸೋತಿತ್ತು.
ಇದೀಗ ಮೂರನೇ ಪ್ರಯತ್ನದಲ್ಲಿ, ಅಂದರೆ ಐಸಿಸಿ ಟಿ20 ವಿಶ್ವಕಪ್ ಫೈನಲ್ ಗೆಲ್ಲುವ ಮೂಲಕ ಭಾರತಕ್ಕೆ 13 ವರ್ಷಗಳ ನಂತರ ರೋಹಿತ್ ಶರ್ಮಾ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ನಂತರ, ಮತ್ತೆ ವಿಶ್ವಕಪ್ ಗೆದ್ದಿರಲಿಲ್ಲ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?
ಟಿ20 ವಿಶ್ವಕಪ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರೂ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ ಮುಂದುವರಿಯಲಿದ್ದಾರೆ. ಇನ್ನೂ ಒಂದು ವರ್ಷ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಆಡಲಿರುವ 37 ವರ್ಷದ ರೋಹಿತ್ ಮುಂದಿನ ವರ್ಷ ನಡೆಯುವ ಎರಡು ಐಸಿಸಿ ಟೂರ್ನಿಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳುವ ಸಾಧ್ಯತೆಯಿದೆ.
2023-25ನೇ ಸಾಲಿನ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ 2025ರ ಜೂನ್ ತಿಂಗಳಲ್ಲಿ ನಡೆಯಲಿದೆ. ಮಿನಿ ವಿಶ್ವಕಪ್ ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯೂ ಮುಂದಿನ ವರ್ಷವೇ ನಡೆಯಲಿದೆ. 2025ರ ಫೆಬ್ರವರಿ 19ರಿಂದ ಮಾರ್ಚ್ 9ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಇದನ್ನೂ ಓದಿ : Dravid World Cup: ನಾಯಕನಾಗಿ ವಿಶ್ವಕಪ್ ಗೆಲ್ಲಲಾಗಲಿಲ್ಲ, ಕೋಚ್ ಆಗಿ ಗೆಲ್ತಾರಾ ಕನ್ನಡಿಗ ರಾಹುಲ್ ದ್ರಾವಿಡ್

ಪಾಕಿಸ್ತಾನದ ನೆಲದಲ್ಲಿ ಕ್ರಿಕೆಟ್ ಆಡುವುದನ್ನು ಭಾರತ ನಿಲ್ಲಿಸಿರುವ ಕಾರಣ, ಚಾಂಪಿಯನ್ಸ್ ಟ್ರೋಫಿಗೆ ಬಿಸಿಸಿಐ ತನ್ನ ತಂಡವನ್ನು ಕಳುಹಿಸುವ ಸಾಧ್ಯತೆಗಳು ಕಡಿಮೆ. ಅಂತಿಮವಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿರುವುದು ಕೇಂದ್ರ ಸರ್ಕಾರ. ಮುಂದಿನ ಜುಲೈ ತಿಂಗಳಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯಲಿದೆ. ಈ ವೇಳೆಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಭಾಗವಹಿಸುವಿಕೆ ಕುರಿತು ಒಂದು ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ : Rahul Dravid : ವಿಧಿಯಾಟ.. ವಿಶ್ವಕಪ್ ಸೋತು ಕಣ್ಣೀರಿಟ್ಟಿದ್ದ ನೆಲದಲ್ಲೇ ವಿಶ್ವಕಪ್ ಎತ್ತಿ ಹಿಡಿದ ರಾಹುಲ್ ದ್ರಾವಿಡ್
ಭಾರತ ಕ್ರಿಕೆಟ್ ತಂಡದ ಭಾಗವಹಿಸುತ್ತೋ ಇಲ್ಲವೋ ಅನ್ನೋದು ಖಚಿತವಾಗದೇ ಇದ್ದರೂ, ಭದ್ರತಾ ದೃಷ್ಠಿಯಿಂದ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್’ನಲ್ಲೇ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದೆ. ಒಂದು ವೇಳೆ ಭಾರತ ತಂಡದ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ, ಆ ಸಂದರ್ಭದಲ್ಲಿ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆಗಳಿವೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಆಡಿದ ಪಂದ್ಯಗಳನ್ನು ಶ್ರೀಲಂಕಾಗೆ ಶಿಫ್ಟ್ ಮಾಡಲಾಗಿತ್ತು.
Rohit Sharma retirement plan: T20 world Cup 2024 champion captain Rohit Sharma’s retirement plan is ready