ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಹೊಸ ತಂಡ ಸೇರುವುದು ಖಚಿತಗೊಂಡಿರುವ ಬೆನ್ನಲ್ಲೇ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru – RCB) ತಂಡ ಸೇರಿಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮನೆ ಮನೆ ಮಗ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳುವಂತೆ ಆರ್’ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ತಂಡದ ಫ್ರಾಂಚೈಸಿಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಹುಲ್ ಅವರನ್ನು ಮರಳಿ ಮನೆಗೆ ಕರೆ ತನ್ನಿ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.
ಇದನ್ನೂ ಓದಿ : Surya Kumar Yadav New T20 Captain : ಹಾರ್ದಿಕ್ ಪಾಂಡ್ಯಗೆ ಗಂಭೀರ್ ಶಾಕ್, ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕ
https://x.com/rcbianofficial/status/1813068643015750141?s=46
ಕಳೆದ ಮೂರು ವರ್ಷಗಳಿಂದ ಲಕ್ನೋ ಸೂಪರ್ ಜಯಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್ ಮುಂದಿನ ಐಪಿಎಲ್’ನಲ್ಲಿ ಲಕ್ನೋ ತಂಡವನ್ನು ತೊರೆಯುವುದು ಖಚಿತಗೊಂಡಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಲಕ್ನೋ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲಪ ಕಂಡಾಗ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ನಾಯಕ ರಾಹುಲ್ ಅವರನ್ನು ಕ್ಯಾಮರಾಗಳ ಮುಂದೆಯೇ ನಿಂದಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಗೌರವ ಇಲ್ಲದ ತಂಡದಿಂದ ಹೊರ ನಡೆಯಲು ನಿರ್ಧರಿಸಿರುವ ರಾಹುಲ್, ಮುಂದಿನ ಐಪಿಎಲ್ ಮೆಗಾ ಆಕ್ಷನ್’ಗೆ ಬರಲಿದ್ದಾರೆ. ರಾಹುಲ್ ಅವರನ್ನು ಆರ್’ಸಿಬಿ ತಂಡ ಹರಾಜಿನಲ್ಲಿ ಖರೀದಿಸಬೇಕೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಆರ್’ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿರುವುದರಿಂದ ತಂಡಕ್ಕೊಬ್ಬ ಸಮರ್ಥ ವಿಕೆಟ್ ಕೀಪರ್ ಅವಶ್ಯಕತೆಯಿದೆ. ಇದೇ ರೀತಿ ಆರ್’ಸಿಬಿ ನಾಯಕ ಫಾಫ್ ಡುಪ್ಲೆಸುಸ್ ಅವರನ್ನು ತಂಡ ಮತ್ತೆ ಉಳಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇರುವ ಕಾರಣ ತಂಡಕ್ಕೊಬ್ಬ ನಾಯಕ ಹಾಗೂ ಆರಂಭಿಕ ಆಟಗಾರನ ಅವಶ್ಯಕತೆಯಿದೆ. ಈ ಮೂರೂ ಸ್ಥಾನಗಳಿಗೆ ರಾಹುಲ್ ಉತ್ತಮ ಆಯ್ಕೆ ಎಂದು ಆರ್’ಸಿಬಿ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ !
32 ವರ್ಷ ವಯಸ್ಸಿನ ರಾಹುಲ್ 2013ರಲ್ಲಿ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಮೂಲಕ ಐಪಿಎಲ್ ಪಯಣ ಆರಂಭಿಸಿದ್ದರು. 2014 ಮತ್ತು 2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ರಾಹುಲ್ 2016ರಲ್ಲಿ ಮತ್ತೆ ಆರ್’ಸಿಬಿ ತಂಡಕ್ಕೆ ವಾಪಸ್ಸಾಗಿ ತಂಡ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. 2018ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್, 2022ರಿಂದ 2024ರವರೆಗೆ ಲಕ್ನೋ ಸೂಪರ್ ಜಯಂಟ್ಸ್ ಪರ ಆಡಿದ್ದರು.
ಇದನ್ನೂ ಓದಿ : Harbhajan Singh Vs PCB: ಪಾಕಿಸ್ತಾನಕ್ಕೆ ಹಿಗ್ಗಾಮುಗ್ಗ ಜಾಡಿಸಿದ ಟರ್ಬನೇಟರ್, ಕಾರಣವೇನು ಗೊತ್ತಾ ?
Royal Challengers Bengaluru – RCB Return KL Rahul In IPL 2025