ಮುಂಬೈ: ಅವರು ಕ್ರಿಕೆಟ್ ದೇವರು ಬಿರುದಾಂಕಿತ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಬಾಲ್ಯದ ಸ್ನೇಹಿತ. ಶಾಲಾ ಟೂರ್ನಿಯೊಂದರಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ ವಿಶ್ವದಾಖಲೆಯ ಜೊತೆಯಾಟವಾಡಿದ್ದ ಪ್ರತಿಭಾವಂತ ಕ್ರಿಕೆಟಿಗ. ಭಾರತ ಪರ ಆಡಿದ್ದ 17 ಟೆಸ್ಟ್ ಪಂದ್ಯಗಳಲ್ಲಿ ಎರಡು ಡಬಲ್ ಸೆಂಚುರಿ. ಟೆಸ್ಟ್ ಬ್ಯಾಟಿಂಗ್ ಸರಾಸರಿ 54. ಕ್ರಿಕೆಟ್ ದಿಗ್ಗಜನಾಗಬೇಕಿದ್ದ ವಿನೋದ್ ಕಾಂಬ್ಳಿ (Vinod Kambli) ಈಗ ಅತ್ಯಂತ ಶೋಚನೀಯ ಪರಿಸ್ಥಿಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೊಂದು ವೀಡಿಯೊ ವೈರಲ್ ಆಗಿದ್ದು, ಆ ವೀಡಿಯೊದಲ್ಲಿ ವಿನೋದ್ ಕಾಂಬ್ಳಿ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಯಲ್ಲಿದ್ದಾರೆ. ನಡೆದಾಡಲು ಸಾಧ್ಯವಾಗದೆ ಕುಸಿದು ಬೀಳುವ ಹಂತದಲ್ಲಿದ್ದ ವಿನೋದ್ ಕಾಂಬ್ಳಿಯವರನ್ನು ಸುತ್ತ ಮುತ್ತಲಲ್ಲಿದ್ದವರು ಮೇಲೆತ್ತಿದ್ದಾರೆ.

52 ವರ್ಷದ ವಿನೋದ್ ಕಾಂಬ್ಳಿ ಈ ಹಿಂದೆ ಸಾಕಷ್ಟು ಬಾರಿ ಆರೋಗ್ಯದ ಸಮಸ್ಯೆಗೆ ಗುರಿಯಾಗಿದ್ದಾರೆ. 2013ರಲ್ಲಿ ಕಾರ್ಡಿಯಾಕ್ ಅಟ್ಯಾಕ್’ಗೆ ಕಾಂಬ್ಳಿ ಗುರಿಯಾಗಿದ್ದರು. ಕಷ್ಟದಲ್ಲಿದ್ದ ಗೆಳೆಯನಿಗೆ ಸಚಿನ್ ತೆಂಡೂಲ್ಕರ್ ಆರ್ಥಿಕ ಸಹಾಯವನ್ನೂ ಮಾಡಿದ್ದರು. ಇದೀಗ ಮತ್ತೆ ವಿನೋದ್ ಕಾಂಬ್ಳಿ ಆರೋಗ್ಯದ ಸಮಸ್ಯೆಗೆ ಗುರಿಯಾಗಿದ್ದು, ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ :Dinesh Karthik: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪರ ಆಡಲಿದ್ದಾನೆ RCB ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್
https://www.instagram.com/reel/C-SNtWZI5wk/?utm_source=ig_web_copy_link
1993ರಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿನೋದ್ ಕಾಂಬ್ಳಿ, ವೃತ್ತಿಜೀವನದಲ್ಲಿ ಒಟ್ಟು 17 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ದ್ವಿಶತಗಳ ಸಹಿತ 54.20 ಸರಾಸರಿಯಲ್ಲಿ 1084 ರನ್ ಗಳಿಸಿದ್ದಾರೆ. 104 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಂದ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್ ಕಲೆ ಹಾಕಿದ್ದಾರೆ.

ಆದರೆ ಅಶಿಸ್ತಿನ ನಡವಳಿಕೆಗಳ ಕಾರಣ ಭಾರತ ತಂಡದಿಂದ ಬೇಗನೆ ಹೊರ ಬಿದ್ದಿದ್ದ ವಿನೋದ್ ಕಾಂಬ್ಳಿ, ದುಶ್ಚಟಗಳ ದಾಸನಾಗಿ ಬಿಟ್ಟಿದ್ದರು. ಕೊನೆಗೆ ಆ ದುಶ್ಚಟಗಳೇ ಅವರನ್ನು ಈ ಹಂತಕ್ಕೆ ಬಂದು ನಿಲ್ಲುವಂತೆ ಮಾಡಿವೆ. ವಿನೋದ್ ಕಾಂಬ್ಳಿ ಈ ಹಿಂದೆ ಆರೋಗ್ಯ ಸಮಸೆಯಿಂದ ಬಳಲಿದ್ದಾಗ ಬಾಲ್ಯ ಸ್ನೇಹಿತ ಸಚಿನ್ ತೆಂಡೂಲ್ಕರ್ ಹಲವಾರು ಬಾರಿ ಆರ್ಥಿಕ ಸಹಾಯ ಮಾಡಿದ್ದಾರೆ. ಈ ಬಾರಿಯೂ ಕಷ್ಟದಲ್ಲಿರುವ ಗೆಳೆಯನಿಗೆ ಸಚಿನ್ ನೆರವಾಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : Rahul Dravid Paris Olympics 2024 : ಬಾಲ್ಯದಲ್ಲಿ ಆಡಿದ ಕ್ರೀಡೆಯನ್ನು ಒಲಿಂಪಿಕ್ಸ್’ನಲ್ಲಿ ವೀಕ್ಷಿಸಿದ ರಾಹುಲ್ ದ್ರಾವಿಡ್
Sachin Tendulkar’s childhood friend Vinod Kambli is suffering from health Issues