ಸೋಮವಾರ, ಏಪ್ರಿಲ್ 28, 2025
HomeSportsCricketSaurabh Walkar : ವಿಶ್ವಕಪ್ ಗೆಲ್ಲಲು ಕಿವೀಸ್ ಮಾಸ್ಟರ್’ಪ್ಲಾನ್, ನ್ಯೂಜಿಲೆಂಡ್ ತಂಡ ಸೇರಿದ ಭಾರತೀಯ; ಇದು...

Saurabh Walkar : ವಿಶ್ವಕಪ್ ಗೆಲ್ಲಲು ಕಿವೀಸ್ ಮಾಸ್ಟರ್’ಪ್ಲಾನ್, ನ್ಯೂಜಿಲೆಂಡ್ ತಂಡ ಸೇರಿದ ಭಾರತೀಯ; ಇದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರ

- Advertisement -

ಬೆಂಗಳೂರು : Saurabh Walkar : ಐಸಿಸಿ ಏಕದಿ ವಿಶ್ವಕಪ್ ಟೂರ್ನಿಗಿನ್ನು ಕೇವಲ 60 ದಿನಗಳಷ್ಟೇ ಬಾಕಿ. ಕ್ರಿಕೆಟ್ ಜಗತ್ತಿನ ಟಾಪ್ ತಂಡಗಳು ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿವೆ. ಹಾಗೆ ವಿಶ್ವಾಸದಲ್ಲಿರುವ ತಂಡಗಳಲ್ಲಿ ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡವೂ ಒಂದು. ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಲು ಪಣ ತೊಟ್ಟಿರುವ ನ್ಯೂಜಿಲೆಂಡ್, ವಿಶ್ವಕಪ್ ಚಾಲೆಂಜ್ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಲು ಪ್ಲಾನ್ ಮಾಡಿರುವ ನ್ಯೂಜಿಲೆಂಡ್ ವಿಶ್ವಕಪ್ ಸಿದ್ಧತೆಯಾಗಿ ಭಾರತೀಯನನ್ನೇ ತಂಡಕ್ಕೆ ಸೇರಿಸಿಕೊಂಡಿದೆ.

ಅಂದ ಹಾಗೆ ವಿಶ್ವಕಪ್’ಗಾಗಿ ನ್ಯೂಜಿಲೆಂಡ್ ತಂಡ ಸೇರಿರುವ ಭಾರತೀಯನ ಹೆಸರು ಸೌರಭ್ ವಾಲ್ಕರ್. ಸೌರಭ್ ವಾಲ್ಕರ್ ಕ್ರಿಕೆಟ್ ಆಟಗಾರನಲ್ಲ, ಬದಲಾಗಿ ಕ್ರಿಕೆಟಿಗರ ಯಶಸ್ಸಿಗೆ ತೆರೆಯ ಹಿಂದೆ ನೆರವಾಗುವ ಪರ್ಫಾಮೆನ್ಸ್ ಅನಾಲಿಸ್ಟ್ (ವಿಡಿಯೊ ಅನಾಲಿಸ್ಟ್). ಮುಂಬೈ ರಣಜಿ ತಂಡದ ಪರ್ಫಾಮೆನ್ಸ್ ಅನಾಲಿಸ್ಟ್ ಆಗಿದ್ದ ಸೌರಭ್ ವಾಲ್ಕರ್, ನಂತರ ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿಡಿಯೊ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.

ಸೌರಭ್ ವಾಲ್ಕರ್ ಅವರ ಅನುಭವವನ್ನು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಬಳಸಿಕೊಳ್ಳಲು ನ್ಯೂಜಿಲೆಂಡ್ ತಂಡ ಮುಂದಾಗಿದೆ. ಸೌರಭ್ ವಾಲ್ಕರ್ ಈಗಾಗಲೇ ನ್ಯೂಜಿಲೆಂಡ್ ತಂಡ ಸೇರಿಕೊಂಡಿದ್ದು, ಆಗಸ್ಟ್ 30ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಕಿವೀಸ್ ತಂಡದ ಜೊತೆ ಅವರ ಅಭಿಯಾನ ಶುರುವಾಗಲಿದೆ. ಈ ಬಾರಿಯ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಭಾರತದ ಪಿಚ್’ಗಳ ಬಗ್ಗೆ ಮಾಹಿತಿ ಇರುವ ಕಾರಣ ಸೌರಭ್ ವಾಲ್ಕರ್ ಅವರನ್ನು ನ್ಯೂಜಿಲೆಂಡ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಮುಖ್ಯವಾಗಿ ಸ್ಪಿನ್ ಸ್ನೇಹಿ ಪಿಚ್’ಗಳಲ್ಲಿ ಯಶಸ್ಸು ಪಡೆಯಲು ನ್ಯೂಜಿಲೆಂಡ್ ತಂಡ ಈ ತಂತ್ರ ರೂಪಿಸಿದೆ.

ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಕ್ಟೋಬರ್ 5ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 15ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ (India Vs Pakistan) ಪಂದ್ಯಕ್ಕೂ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಅಕ್ಟೋಬರ್ 8ರದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯದ ಮೂಲಕ 2 ಬಾರಿಯ ಚಾಂಪಿಯನ್ ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.

ಇದನ್ನೂ ಓದಿ : Shaheen Shah Afridi : ಏಷ್ಯಾ ಕಪ್’ಗೆ ಕೌಂಟ್’ಡೌನ್: ಭಾರತಕ್ಕೆ ಬಿಗ್ ವಾರ್ನಿಂಗ್ ಕೊಟ್ಟ ಪಾಕ್ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ವೇಳಾಪಟ್ಟಿ (ICC World Cup 2023 Schedule) :

  • ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
  • ಅಕ್ಟೋಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-1 (ಹೈದರಾಬಾದ್)
  • ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
  • ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
  • ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
  • ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
  • ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
  • ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
  • ನವೆಂಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)

Saurabh Walkar: Kiwis’ master plan to win World Cup, Indian joins New Zealand team; It is a technique of removing the thorn from the thorn itself

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular