Smriti Mandhana : ಚಿನ್ನಸ್ವಾಮಿಯಲ್ಲಿ ಭರ್ಜರಿ ಶತಕ ಬಾರಿಸಿದ ಬೆಂಗಳೂರು ಮನೆ ಮಗಳು ಸ್ಮೃತಿ ಮಂಧನ !

India Women Vs South Africa Women : ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟೈಲಿಷ್ ಲೆಫ್ಟ್ ಹ್ಯಾಂಡರ್ ಸ್ಮೃತಿ ಮಂಧನ (smriti mandhana)  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮೋಘ ಶತಕ ಬಾರಿಸಿದ್ದಾರೆ.

India Women Vs South Africa Women : ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟೈಲಿಷ್ ಲೆಫ್ಟ್ ಹ್ಯಾಂಡರ್ ಸ್ಮೃತಿ ಮಂಧನ (smriti mandhana)  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮೋಘ ಶತಕ ಬಾರಿಸಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (India Women Vs South Africa Women) ಸ್ಮೃತಿ ಮಂಧನ ಭರ್ಜರಿ ಶತಕ ಸಿಡಿಸಿದರು.

smriti mandhana century and competed 7000 runs in ODI cricket India Women Vs South Africa Women
Image Credit : BCCI

ಈ ವರ್ಷದ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಸ್ಮೃತಿ ಐಪಿಎಲ್ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಏಕದಿನ ವೃತ್ತಿಜೀವನದ ಆರನೇ ಶತಕ ಬಾರಿಸಿದರು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಸ್ಮೃತಿ ಮಂಧನ ಬಾರಿಸಿದ 2ನೇ ಏಕದಿನ ಶತಕ. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ 2 ಏಕದಿನ ಶತಕಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಮಂಧನ ಪಾತ್ರದಾದರು. ಇದೇ ವೇಳೆ ಸ್ಮೃತಿ ಮಂಧನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ 2ನೇ ಆಟಗಾರ್ತಿ ಎಂಬ ದಾಖಲೆ ಬರೆದರು.

ಇದನ್ನೂ ಓದಿ : Mayank Agarwal : ಕರಾವಳಿಯ ದೈವೀಶಕ್ತಿ, ಪ್ರಕೃತಿ ಸೌಂದರ್ಯಕ್ಕೆ ಮನಸೋತ ಟೀಮ್ ಇಂಡಿಯಾ ಕ್ರಿಕೆಟರ್

https://x.com/rcbtweets/status/1802296570073030861?s=46

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 7000+ ರನ್ ಗಳಿಸಿದ ವನಿತೆಯರು:
– ಮಿಥಾಲಿ ರಾಜ್ (ಭಾರತ): 10,868 ರನ್
-ಶಾರ್ಲೋಟ್ ಎಜ್ವರ್ಡ್ಸ್ (ಇಂಗ್ಲೆಂಡ್):10,273 ರನ್
-ಸುಜೀ ಬೇಟ್ಸ್ (ನ್ಯೂಜಿಲೆಂಡ್): 9904 ರನ್
-ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್): 8940 ರನ್
-ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ): 8352 ರನ್
-ಸ್ಮೃತಿ ಮಂಧನ (ಭಾರತ): 7000+ ರನ್

smriti mandhana century and competed 7000 runs in ODI cricket India Women Vs South Africa Women
Image Credit : BCCI

ಇದನ್ನೂ ಓದಿ : USA Cricket Team : ಟಿ20 ವಿಶ್ವಕಪ್’ನಿಂದ ಪಾಕ್ ಔಟ್, ಸೂಪರ್-8 ತಲುಪಿ ಇತಿಹಾಸ ನಿರ್ಮಿಸಿದ ಅಮೆರಿಕ

ಸ್ಮೃತಿ ಮಂದಾನ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಭಾರತ ತಂಡ ಪರ 7000 ರನ್‌ ಗಳಿಸಿ ಎರಡನೇ ಆಟಗಾರ್ತಿ ಹಾಗೂ ವಿಶ್ವದ 6ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಭಾರತ ತಂಡದ ಪರ ಮಾಜಿ ನಾಯಕಿ ಮಿಥಾಲಿ ರಾಜ್‌ ಅವರು 10000 ರನ್‌ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಮಿಥಾಲಿ ರಾಜ್‌ ನಂತರ ಮಂದಾನ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಇದನ್ನೂ ಓದಿ : ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್: ರಾಯ್ಪುರ ರೈನೋಸ್ ತಂಡಕ್ಕೆ ಕನ್ನಡಿಗ ಮುಕುಂದ್ ಗೌಡ ಕೋಚ್!

smriti mandhana century and competed 7000 runs in ODI cricket India Women Vs South Africa Women

Comments are closed.