ಲಂಡನ್ : ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ 5ನೇ ಮತ್ತು ಅಂತಿಮ ಟೆಸ್ಟ್ ರದ್ದಾಗಿದೆ. ಟೆಸ್ಟ್ ರದ್ದತಿಗೆ ಐಪಿಎಲ್ ಎರಡನೇ ಹಂತ (IPL 2021)ವೇ ಕಾರಣ ಎಂದಿದ್ದು, ಈ ಬಗ್ಗೆ ವಿವಾದವೂ ಹುಟ್ಟಿಕೊಂಡಿವೆ. ಹಾಗಾಗಿ ಈ ವಿವಾದಗಳ ಕುರಿತು ಸದ್ಯ ಇಂಗ್ಲೆಂಡ್- ವೇಲ್ಸ್ ಕ್ರಿಕೆಟ್ ಮಂಡಳಿ (ECB ) ಮುಖ್ಯಸ್ಥ ಟಾಮ್ ಹ್ಯಾರಿಸನ್ ಸ್ಪಷ್ಟೀಕರಣ ನೀಡಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್ ರದ್ದತಿಗೂ ಐಪಿಎಲ್ʼಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಐಪಿಎಲ್ 14 ನೇ ಸೀಸನ್ʼನ ಎರಡನೇ ಲೀಗ್ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನಡೆಯಲಿದೆ. ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರ ನಂತ್ರ ಸಹಾಯಕ ಸಿಬ್ಬಂದಿಯ ಇತರ ಸದಸ್ಯರು ಕೂಡ ವೈರಸ್‌ನ ಹಿಡಿತಕ್ಕೆ ಒಳಗಾದರು. ಮ್ಯಾಂಚೆಸ್ಟರ್ ಟೆಸ್ಟ್ʼಗೂ ಮುನ್ನ, ಟೀಮ್ ಇಂಡಿಯಾದ ಫಿಸಿಯೋಥೆರಪಿಸ್ಟ್ ಕರೋನಾ ಪರೀಕ್ಷಾ ವರದಿ ಕೂಡ ಪಾಸಿಟಿವ್ ಆಗಿ ಬಂದಿತ್ತು. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ, ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ನಂತ್ರ ಒಂದು ವರದಿಯಲ್ಲಿ, ಈ ಪಂದ್ಯಕ್ಕೆ ಭಾರತ ತನ್ನ ತಂಡವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಇಸಿಬಿ ಹೇಳಿತ್ತು. ಆದ್ರೆ, ಈಗ ಟಾಮ್ ಹ್ಯಾರಿಸನ್ ಆ ಎಲ್ಲ ವರದಿಗಳನ್ನ ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ರದ್ದು: ಕ್ರಿಕೆಟ್ ಪ್ರಿಯರಿಗೆ ಭಾರೀ ನಿರಾಸೆ
ಅಂತಿಮ ಟೆಸ್ಟ್‌ನ ದಿನಾಂಕಗಳನ್ನು ವಿಸ್ತರಿಸಲು ಭಾರತ ಉತ್ಸುಕವಾಗಿದೆ ಎಂದು ಕೆಲವು ವರದಿಗಳು ಹೇಳಿವೆ. ಆದಾಗ್ಯೂ, ಇಸಿಬಿ ಮುಖ್ಯಸ್ಥರು ಆ ಎಲ್ಲಾ ವರದಿಗಳನ್ನು ತಳ್ಳಿಹಾಕಿದರು ಮತ್ತು ಟೆಸ್ಟ್ ರದ್ದತಿಗೂ ಐಪಿಎಲ್ʼಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಅವರು ಬಿಬಿಸಿ ಸ್ಪೋರ್ಟ್‌ಗೆ, ‘ಐಪಿಎಲ್ -2021ರ ಎರಡನೇ ಹಂತದ ಕಾರಣ ಈ ಪಂದ್ಯವನ್ನ ರದ್ದುಗೊಳಿಸಲಾಗಿಲ್ಲ. ಈ ಭಾರತೀಯ ಕ್ರಿಕೆಟ್ ತಂಡವು ನಮ್ಮ ದೇಶದಲ್ಲಿ ಅಭಿಮಾನಿಗಳಿರುವಂತೆ ಮತ್ತು ನಮ್ಮ ಕ್ರಿಕೆಟ್ ತಂಡದಷ್ಟೇ ಟೆಸ್ಟ್ ಕ್ರಿಕೆಟ್ ಬಗ್ಗೆ ಉತ್ಸುಕವಾಗಿದೆ. ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದ ಭಾರತದ ಆಟಗಾರರು ಮೈದಾನಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: Shikhar Dhavan : ಶಿಖರ್ ಧವನ್ ಗೆ ಇನ್ನೂ ಮುಗಿದಿಲ್ಲ ಟೀಂ ಇಂಡಿಯಾದಲ್ಲಿ ಅವಕಾಶ
(India England final Test: ECB heads clear)