ಶಿಕ್ಷಕರ ರಜೆಗೆ ಬೀಳುತ್ತೆ ಕತ್ತರಿ : ಪ್ರಾಥಮಿಕ ಶಾಲಾರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದೇನು ?

ಶಿವಮೊಗ್ಗ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಬಾರಿ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾದ ಹಿನ್ನೆಲೆಯಲ್ಲಿ ಪಠ್ಯ ಕಡಿತಗೊಳಿಸಲಾಗಿತ್ತು. ಇದು ಮುಂದಿನ ತರಗತಿಗಳಿಗೆ ತೊಂದರೆಯಾಗಲಿದೆ. ವರ್ಷದಲ್ಲಿ ಸಿಲಬಸ್‌ ಪೂರ್ಣಗೊಳಿಸಿದ್ರೆ ಮಕ್ಕಳಿಗೆ ಅನುಕೂಲವಾಗಲಿದೆ. ಈ ಬಾರಿ ಈಗಾಗಲೇ ಬ್ರಿಡ್ಜ್‌ ಕೋರ್ಸ್‌ ನಡೆಸಲಾಗುತ್ತಿದೆ. ಈ ಬಾರಿ ಶಿಕ್ಷಕರ ರಜೆಯನ್ನು ಕಡಿತಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಕ್ಕಳು ಕಳೆದೊಂದು ವರ್ಷದಿಂದಲೂ ಶಾಲೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ ಬ್ರಿಡ್ಜ್‌ ಕೋರ್ಸ್‌ಗಳ ಮೂಲಕ ಪಠ್ಯ ಚಟುವಟಿಕೆಯನ್ನು ಪೂರ್ಣಗೊಳಿಸಬೇಕಾಗಿದೆ. ಇದುವರೆಗೆ ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ, ಆದರೆ ಅವಶ್ಯಕತೆ ಬಿದ್ರೆ ಕ್ರಮಕೈಗೊಳ್ಳುತ್ತೇವೆ. ಪಠ್ಯ ಕಡಿತ ಮಾಡುವ ಕುರಿತು ಪ್ರಯತ್ನ ನಡೆಸುತ್ತೇವೆ. ಶಿಕ್ಷಕರು ಸಹಕಾರ ಕೊಟ್ರೆ ರಜೆಯನ್ನು ಕಡಿತ ಮಾಡುವ ಚಿಂತನೆಯೂ ಸರಕಾರದ ಮುಂದಿದೆ ಎಂದಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಶಾಲಾರಂಭ ಮಾಡುವ ಕುರಿತು ಸರಕಾರ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ. ಒಂದೊಮ್ಮೆ ಕೊರೊನಾ ಸೋಂಕು ಹೆಚ್ಚಳವಾದ್ರೆ ಶಾಲೆಯನ್ನು ಬಂದ್‌ ಮಾಡುವ ಅವಕಾಶವೂ ಇದೆ. ಈಗಾಗಲೇ ಆರನೇ ತರಗತಿ ಮೇಲ್ಪಟ್ಟು ತರಗತಿಗಳು ಆರಂಭಗೊಂಡಿದ್ದು, ಶಿಕ್ಷಕರು ಚೆನ್ನಾಗಿಯೇ ಶಾಲೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಐದನೇ ತರಗತಿಗಿಂತ ಕೆಳಗಿನ ಮಕ್ಕಳಿಗೆ ತರಗತಿ ನಡೆಸುವ ಕುರಿತು ತಾಂತ್ರಿಕ ಸಮಿತಿಯ ಸಭೆಯ ಬಳಿಕವೇ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ದಸರಾ, ಬೇಸಿಗೆ ರಜೆ ಘೋಷಣೆ : ಸರಕಾರದ ಆದೇಶ

ಇದನ್ನೂ ಓದಿ : 1 – 5 Class ಕರ್ನಾಟಕದಲ್ಲಿ ಸದ್ಯಕ್ಕೆ ಆರಂಭವಿಲ್ಲ : ಸಿಎಂ ಬಸವರಾಜ್‌ ಬೊಮ್ಮಾಯಿ

(Teachers leave cut : Minister Nagesh spoke about elementary school start)

Comments are closed.