ಸೋಮವಾರ, ಏಪ್ರಿಲ್ 28, 2025
HomeSportsRahul Coach : ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ನೇಮಕ :...

Rahul Coach : ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ನೇಮಕ : ಬಿಸಿಸಿಐ ಅಧಿಕೃತ ಆದೇಶ

- Advertisement -

ಮುಂಬೈ : ಟೀಂ ಇಂಡಿಯಾದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ. ಟಿ೨೦ ವಿಶ್ವಕಪ್‌ ಬೆನ್ನಲ್ಲೇ ಕೋಚ್‌ ರವಿಶಾಸ್ತ್ರಿ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲೀಗ ರಾಹುಲ್‌ ಅವರನ್ನು ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗ್ರೇಟ್‌ ವಾಲ್‌ ಎಂದೇ ಕರೆಯಿಸಿಕೊಳ್ಳುತ್ತಿರುವ ರಾಹುಲ್‌ ದ್ರಾವಿಡ್‌ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಮುಖ್ಯ ತರಬೇತುದಾರರಾಗಿ ಸಾಕಷ್ಟು ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಿದ್ದಾರೆ. ಇನ್ನು ಭಾರತೀಯ ಕಿರಿಯರ ತಂಡ ಕೋಚ್‌ ಆಗಿ ಟೀಂ ಇಂಡಿಯಾಕ್ಕೆ ಹಲವು ಯುವ ಕ್ರಿಕೆಟಿಗರನ್ನು ನೀಡಿದ ಖ್ಯಾತಿ ರಾಹುಲ್‌ ದ್ರಾವಿಡ್‌ ಅವರಿಗೆ ಸಲ್ಲುತ್ತದೆ. ಇದೇ ಕಾರಣದಿಂದಲೂ ರವಿ ಶಾಸ್ತ್ರಿ ಅವರಿಂದ ತೆರವಾದ ಮುಖ್ಯ ಕೋಚ್‌ ಹುದ್ದೆಗೆ ರಾಹುಲ್‌ ಹೆಸರು ಕೇಳಿಬಂದಿತ್ತು. ಅಷ್ಟೇ ಅಲ್ಲಾ ಬಿಸಿಸಿಐ ಕೂಡ ರಾಹುಲ್‌ ದ್ರಾವಿಡ್‌ ಅವರನ್ನೇ ಕೋಚ್‌ ಆಗಿ ನೇಮಕ ಮಾಡಲು ಯತ್ನಿಸಿತ್ತು.

ಇದನ್ನೂ ಓದಿ: IPL 2022 : CSK ನಾಯಕತ್ವ ಕೈಬಿಟ್ಟು, ಕೋಚ್‌ ಆಗ್ತಾರೆ ಮಹೇಂದ್ರ ಸಿಂಗ್‌ ಧೋನಿ

ಆದರೆ ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚಿಂಗ್ ಆಫರ್ ಅನ್ನು ಹಲವು ಬಾರಿ ನಿರಾಕರಿಸಿದ್ದರು. ಆದರೆ ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರೊಂದಿಗೆ ದುಬೈನಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಹುಲ್‌ ದ್ರಾವಿಡ್‌ ಟೀಮ್‌ ಇಂಡಿಯಾ ಕೋಚ್‌ ಆಗಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆಂದು ತಿಳಿದು ಬಂದಿದೆ. ರಾಹುಲ್‌ ದ್ರಾವಿಡ್‌ ಅವರು 2023ರ ವರಗೆ ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2021 ರ ನವೆಂಬರ್‌ನಲ್ಲಿ ಮುಖ್ಯ ಕೋಚ್‌ ಆಗಿರುವ ರವಿಶಾಸ್ತ್ರಿ ಅವರ ಒಪ್ಪಂದವು ಕೊನೆಗೊಳ್ಳಲಿದೆ. ಹೀಗಾಗಿ ಟಿ 20 ವಿಶ್ವಕಪ್ ನಂತರ ಅವರು ಟೀಮ್‌ ಇಂಡಿಯಾ ಕೋಚ್ ಆಗಿ ಮಾಡುವ ಕೆಲಸವನ್ನು ವಹಿಸಿಕೊಳ್ಳುತ್ತಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ರಾಹುಲ್‌ ದ್ರಾವಿಡ್‌ ಅವರು ಭಾರತ ತಂಡ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳುವ ಮುನ್ನ ಎನ್‌ಸಿಎ ಮುಖ್ಯಸ್ಥರ ಹುದ್ದೆಯನ್ನು ತ್ಯಜಿಸಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಟೀಂ ಇಂಡಿಯಾ ಕೋಚ್‌ ಆಗಲು ರಾಹುಲ್‌ ದ್ರಾವಿಡ್‌ಗೆ ಬಿಗ್‌ ಆಫ್‌ ನೀಡಿದೆ. ರಾಹುಲ್‌ ಪ್ರತೀ ವರ್ಷ ಸುಮಾರು 10 ಕೋಟಿ ರೂಪಾಯಿ ವೇತನವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್‌ ಆಗಿ ನೇಮಕವಾಗುವ ಹೊತ್ತಲ್ಲೇ ರಾಹುಲ್‌ ದ್ರಾವಿಡ್‌ ಹೆಸರು ಕೇಳಿಬಂದಿತ್ತು. ಆದ್ರೆ ರಾಹುಲ್‌ ಕಿರಿಯರ ತಂಡದ ಕೋಚ್‌ ಹಾಗೂ ಎನ್‌ಸಿಎ ಮುಖ್ಯಸ್ಥ ಹುದ್ದೆಯನ್ನು ಒಪ್ಪಿಕೊಂಡಿದ್ದರು. ಆದರೆ ರವಿಶಾಸ್ತ್ರಿ ಅವಧಿಯಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಲ್ಲ. ಇದೇ ಕಾರಣಕ್ಕೆ ಬಿಸಿಸಿಐ ಹೊಸ ಕೋಚ್‌ ಹುಡುಕಾಟವನ್ನು ಆರಂಭಿಸಿತ್ತು. ಅನಿಲ್‌ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್‌, ಮಾಹೆಲ್‌ ಜಯವರ್ಧನ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ ಅನಿಲ್‌ ಕುಂಬ್ಳೆ ಮತ್ತೊಮ್ಮೆ ಟೀಂ ಇಂಡಿಯಾ ಕೋಚ್‌ ಆಗಲು ಹಿಂದೇಟು ಹಾಕಿದ್ದಾರೆ.

Dravid Likely To Be Interim Coach Of Team India For Home Series Vs New Zealand Tour
IMAGE CREDIT : BCCI/TWITTER

ಇದನ್ನೂ ಓದಿ: CSK WIN IPL 2021 : 4ನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಧೋನಿ ಪಡೆ : ಸಿಎಸ್‌ಕೆ ಎದುರು ಮುಗ್ಗರಿಸಿದ ಕೆಕೆಆರ್‌

ಸೌರವ್‌ ಗಂಗೂಲಿ ಹಾಗೂ ಶಾ ಇಬ್ಬರೂ ಕೂಡ ರಾಹುಲ್‌ ದ್ರಾವಿಡ್‌ ಅವರನ್ನೇ ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಲು ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಇನ್ನೊಂದೆಡೆಯಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರರು ಕೂಡ ರಾಹುಲ್‌ ದ್ರಾವಿಡ್‌ ರಾಷ್ಟ್ರೀಯ ತಂಡಕ್ಕೆ ಮಾರ್ಗದರ್ಶನ ಮಾಡಲಿ ಅನ್ನೋ ಒತ್ತಾಯವೂ ಕೇಳಿಬಂದಿತ್ತು. ಇದೇ ಕಾರಣದಿಂದಲೇ ಬಿಸಿಸಿಐ ರಾಹುಲ್‌ ಅವರನ್ನೇ ಕೋಚ್‌ ಆಗಿ ನೇಮಕ ಮಾಡಿದೆ.

(Rahul Dravid appointed as Team India head coach : BCCI official order)

RELATED ARTICLES

Most Popular