IPL 2022 : CSK ನಾಯಕತ್ವ ಕೈಬಿಟ್ಟು, ಕೋಚ್‌ ಆಗ್ತಾರೆ ಮಹೇಂದ್ರ ಸಿಂಗ್‌ ಧೋನಿ

ಮಹೇಂದ್ರ ಸಿಂಗ್‌ ಧೋನಿ, ಟೀಂ ಇಂಡಿಯಾ ಕಂಡ ಶ್ರೇಷ್ಟ ನಾಯಕ. ಭಾರತಕ್ಕೆ ವಿಶ್ವಕಪ್‌, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನಾಲ್ಕು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿ ಕೊಟ್ಟ ಮಹೇಂದ್ರ ಸಿಂಗ್‌ ಧೋನಿ ಚೆನ್ನ ಸೂಪರ್‌ ಕಿಂಗ್ಸ್‌ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆಟಗಾರನಾಗಿ ಮುಂದುವರಿಯುವ ಬದಲು ಕೋಚ್‌ ಆಗಿ ಸೇವೆ ಸಲ್ಲಿಸುವ ಸುಳಿವನ್ನು ನೀಡಿದ್ದಾರೆ ಧೋನಿ.

Mahindra Singh Dhoni is a retired, farewell CSK Captain in Chennai
ಮಹೇಂದ್ರ ಸಿಂಗ್‌ ಧೋನಿ

ಧೋನಿ ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್ 2021 ರ ಸಿಎಸ್‌ಕೆ ಅಂತಿಮ ಲೀಗ್ ಹಂತದ ಪಂದ್ಯದ ವೇಳೆಯಲ್ಲಿಯೇ 2022 ರ ಋತುವಿನಲ್ಲಿ ಸಹ ಹಳದಿ ಸೈನ್ಯದೊಂದಿಗೆ ತನ್ನ ದೀರ್ಘ ಕಾಲದ ಒಡನಾಟ ಮುಂದುವರಿಯುತ್ತದೆ ಎಂದು ಹೇಳಿದ್ದರು. ಅಲ್ಲದೇ ನೀವು ನನ್ನನ್ನು ಹಳದಿ ಬಣ್ಣದಲ್ಲಿಯೇ ನೋಡುತ್ತೀರಿ ಅಂತಾ ಹೇಳಿಕೆ ನೀಡಿದ್ದರು. ಆದರೆ ನಾನು ಸಿಎಸ್‌ಕೆ ಪರವಾಗಿ ಆಡುತ್ತೇನೆಯೇ ಅನ್ನೋ ಬಗ್ಗೆ ಗೊತ್ತಿಲ್ಲ. ಸಾಕಷ್ಟು ಅನಿಶ್ವಿತತೆಗಳು ಬರುತ್ತಿವೆ. ಹೊಸದಾಗಿ ಎರಡು ತಂಡಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಹೊಸ ನಿಯಮಗಳು ಜಾರಿಯಾಗುತ್ತಿವೆ.

BCCI Announces Release Of Tender to Own And Operate An IPL TEAM
IMAGE CREDIT : BCCI-IPL

ಮುಂದಿನ ಬಾರಿ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಅನ್ನೋ ಬಗ್ಗೆ ಬಿಸಿಸಿಐ ಯಾವುದೇ ಖಚಿತತೆಯನ್ನೂ ನೀಡಿಲ್ಲ. ಇನ್ನೊಂದೆಡೆಯಲ್ಲಿ ಮಹಾ ಹರಾಜು ನಡೆಯುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಒಂದೊಮ್ಮೆ ಎಲ್ಲಾ ಆಟಗಾರರನ್ನು ಹರಾಜಿಗೆ ಒಳಪಡಿಸಿದ್ರೆ ಮಹೇಂದ್ರ ಸಿಂಗ್‌ ಧೋನಿ ಅನಿವಾರ್ಯವಾಗಿ ಚೆನ್ನೈ ತೊರೆಯ ಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಒಂದೊಮ್ಮೆ ಇಂತಹ ಸ್ಥಿತಿ ನಿರ್ಮಾಣವಾದ್ರೆ ಧೋನಿ ಐಪಿಎಲ್‌ಗೆ ಗುಡ್‌ಬೈ ಹೇಳಿ, ಚೆನ್ನೈ ತಂಡದ ಕೋಚ್‌ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗುತ್ತಿದೆ. ಅಲ್ಲದೇ ಖುದ್ದು ಮಹೇಂದ್ರ ಸಿಂಗ್‌ ಧೋನಿ ನೀಡಿರುವ ಹೇಳಿಕೆಗಳು ಇದನ್ನೇ ಪುಷ್ಟಿಗೊಳಿಸುತ್ತಿವೆ.

ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆಟಗಾರರನ್ನು ಕನಿಷ್ಠ ಸಂಖ್ಯೆಯಲ್ಲಿ ಆಟಗಾರರನ್ನು ಉಳಿಸಿಕೊಳ್ಳಬೇಕಾದ್ರೆ ದೋನಿಗೆ ಕನಿಷ್ಠ 15 ಕೋಟಿ ರೂಪಾಯಿ ಹಣವನ್ನು ವ್ಯಯಿಸ ಬೇಕಾಗುತ್ತದೆ. ಇದರು ಚೆನ್ನೈ ತಂಡ ಇತರ ಆಟಗಾರರ ಖರೀದಿಯ ಮೇಲೆಯೂ ಪರಿಣಾಮವನ್ನು ಬೀರುವ ಸಾಧ್ಯತೆಯೂ ಇದೆ. ಮಹೇಂದ್ರ ಸಿಂಗ್‌ ಧೋನಿ ಈಗಾಗಲೇ ಐಪಿಎಲ್‌ ಹೊರತು ಪಡಿಸಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೇ ಕಾರಣದಿಂದಲೇ ಧೋನಿ ಮುಂದಿನ ಟಿ೨೦ ವಿಶ್ವಕಪ್‌ನಲ್ಲಿ ಭಾರತ ತಂಡ ಮೆಂಟರ್‌ ಆಗಿ ನೇಮಕಗೊಂಡಿದ್ದಾರೆ. ಭಾರತ ತಂಡ ವಿಶ್ವಕಪ್‌ ಗೆಲ್ಲಲು ಸಕ್ಸಸ್‌ ಆದ್ರೆ ಧೋನಿ ಟೀಂ ಇಂಡಿಯಾದ ಕೋಚ್‌ ಆದ್ರೂ ಅಚ್ಚರಿಯಿಲ್ಲ. ಬಿಸಿಸಿಐ ಹೊಸ ನಿಯಮದ ಪ್ರಕಾರ ಧೋನಿ ಟೀಂ ಇಂಡಿಯಾದಲ್ಲಿ ಕಾರ್ಯನಿರ್ವಹಿಸಲು ಬಯಸಿದ್ರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ತೊರೆಯಲೇ ಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

Dhoni wins fourth IPL trophy, CSK wins a spectacular victory over KKR
ನಾಲ್ಕನೇ ಬಾರಿಗೆ ಐಪಿಎಲ್‌ ಟ್ರೋಫಿ ಗೆದ್ದ ಚೆನ್ನೈ ಸೂಪರ್‌ ಕಿಂಗ್ಸ್‌ IMAGE CREDIT : BCCI/IPL

ಆಟಗಾರನಾಗಿ ಇಲ್ಲದಿದ್ದರೆ, ಧೋನಿ ಸೂಪರ್ ಕಿಂಗ್ಸ್‌ಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವ ಸಾಧ್ಯತೆಯಿದೆ. ಮಹೇಂದ್ರ ಸಿಂಗ್‌ ಧೋನಿ ಹಾಗೂ ಸುರೇಶ್‌ ರೈನಾ ನೀಡಿರುವ ಹೇಳಿಕೆ ಧೋನಿ ನಾಯಕತ್ವದಿಂದ ಕೆಳಗಿಳಿಯುವ ಸೂಚನೆಯನ್ನು ನೀಡುತ್ತಿದೆ. ಒಟ್ಟಿನಲ್ಲಿ ಧೋನಿ ಮುಂದಿನ ಸಾಲಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುತ್ತಾರಾ, ಇಲ್ಲಾ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರಾ ಅನ್ನೋದನ್ನು ತಿಳಿಯಬೇಕಾದ್ರೆ ಐಪಿಎಲ್‌ ಬಿಡ್ಡಿಂಗ್‌ ವರೆಗೂ ಕಾಯಲೇ ಬೇಕು.

ಇದನ್ನೂ ಓದಿ :

ಐಪಿಎಲ್‌ ಹೊಸ ತಂಡ ಖರೀದಿಗೆ ಮುಗಿಬಿದ್ದ ಅದಾನಿ, ಬಿರ್ಲಾ, ಕೋಟಕ್‌

ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣವಾಯ್ತು ರಿಷಬ್‌ ಪಂತ್‌ ಕೈಗೊಂಡ ಒಂದು ನಿರ್ಧಾರ

4ನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಧೋನಿ ಪಡೆ : ಸಿಎಸ್‌ಕೆ ಎದುರು ಮುಗ್ಗರಿಸಿದ ಕೆಕೆಆರ್‌

IPL 2022 : Mahendra Singh Dhoni not play for CSK next season, but he may continues as a coach

Comments are closed.