ಸೋಮವಾರ, ಏಪ್ರಿಲ್ 28, 2025
HomeSportsNeeraj Chopra : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ...

Neeraj Chopra : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್‌

- Advertisement -

ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಭಾರತೀಯರ ಪಾಲಿಗೆ ಹಾಟ್‌ ಫೇವರೇಟ್.‌ ನೀರಜ್‌ ಚೋಪ್ರಾ ಎಲ್ಲಿಗೆ ಹೋದ್ರು ಸುದ್ದಿಯಾಗುತ್ತಿದ್ದಾರೆ. ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುವ ಚೋಪ್ರಾ ಸ್ಕೂಬಾ ಡೈವಿಂಗ್‌ ವೇಳೆಯಲ್ಲಿ, ನೀರಿನಲ್ಲಿಯೇ ಜಾವೆಲಿನ್‌ ಎಸೆದಿದ್ದಾರೆ. ಚಿನ್ನದ ಹುಡುಗನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನುಗೆಲ್ಲಿಸಿ ಕೊಟ್ಟ ಭಾರತದ ಹೆಮ್ಮೆಯ ಕ್ರೀಡಾಪಟು ನೀರಜ್‌ ಚೋಪ್ರಾ ಇದೀಗ, ಮಾಲ್ಡಿವ್ಸ್‌ನ ರೆಸಾರ್ಟ್‌ವೊಂದರಲ್ಲಿ ತನ್ನ ವಿಶ್ರಾಂತಿಯನ್ನು ಕಳೆಯುತ್ತಿದ್ದಾರೆ. ಆದರೆ ನೀರಜ್‌ ಚೋಪ್ರಾ ಹೇಗಿದ್ದರೂ ಜಾವೆಲಿನ್‌ ಎಸೆಯೋದನ್ನು ಮಾತ್ರ ಮರೆತಿಲ್ಲ. ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ :‌ ಸುಮ್ಮನೇ ದಕ್ಕಿದ್ದಲ್ಲ ಚಿನ್ನ…!! ನೀರಜ್‌ ಚೋಪ್ರಾ ಕಣ್ಣೀರ ಕಥೆ ನಿಮಗೆ ಗೊತ್ತಾ ..!!

ವಿಡಿಯೋದಲ್ಲಿ ಪ್ರಮುಖವಾಗಿ ನೀರಜ್‌ ಚೋಪ್ರಾ ಸ್ಕೂಬಾ ಡೈವಿಂಗ್‌ ಡ್ರೆಸ್‌ ತೊಟ್ಟು, ನೀರಿನಲ್ಲಿಯೇ ಜಾವೆಲಿನ್‌ ಎಸೆತದ ತರಬೇತಿ ಪಡೆಯುತ್ತಿದ್ದಾರೆ. ಕ್ರೀಡಾಂಗಣವಿರಲಿ, ನೀರಿನಲ್ಲಿಯೇ ಇರಲಿ. ಚೋಪ್ರಾ ಮಾತ್ರ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಜಾವೆಲಿನ್‌ ಎಸೆಯುವುದನ್ನು ಮರೆಯುತ್ತಿಲ್ಲ.

ನಾನು ಯಾವಾಗಲೂ ಜಾವೆಲಿನ್‌ ಬಗ್ಗೆಯೇ ಯೋಚಿಸುತ್ತೇನೆ. ನನ್ನ ತರಬೇತಿ ಶುರುವಾಗಿದೆ ಎಂದು ಪೋಸ್ಟ್‌ ಮಾಡಿಕೊಂಡಿದ್ದಾರೆ. ಟೊಕಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಎರಡನೇ ಸುತ್ತಿನ 87.58 ಮೀಟರ್ ಜಾವೆಲಿನ್‌ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದ ಸಾಧನೆಯನ್ನು ಮಾಡಿದ್ದರು. 23 ವರ್ಷ ವಯಸ್ಸಿನ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಚೋಪ್ರಾ ಸಾಧನೆಯನ್ನು ಎಲ್ಲರೂ ಕೊಂಡಾಡಿದ್ದರು.

ಇದನ್ನೂ ಓದಿ : ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​ : ನಟನೆಗೂ ಸೈ ಎಂದ ನೀರಜ್​ ಚೋಪ್ರಾ

(Neeraj Chopra enacts javelin throwing under water during scuba dive )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular