ಮಂಗಳವಾರ, ಏಪ್ರಿಲ್ 29, 2025
HomeSportsCricketSri Lanka Nagin Dance : ಬಾಂಗ್ಲಾದೇಶ ವಿರುದ್ಧ ನಾಗಿನ್ ಡ್ಯಾನ್ಸ್ ಮಾಡಿ ಸೇಡು ತೀರಿಸಿಕೊಂಡ...

Sri Lanka Nagin Dance : ಬಾಂಗ್ಲಾದೇಶ ವಿರುದ್ಧ ನಾಗಿನ್ ಡ್ಯಾನ್ಸ್ ಮಾಡಿ ಸೇಡು ತೀರಿಸಿಕೊಂಡ ಶ್ರೀಲಂಕಾ

- Advertisement -

ದುಬೈ: ಕ್ರಿಕೆಟ್ ಮೈದಾನದಲ್ಲಿ ‘ನಾಗಿನ್ ಡ್ಯಾನ್ಸ್’ (Sri Lanka Nagin Dance) ಬಾಂಗ್ಲಾದೇಶ ತಂಡದ ಟ್ರೇಡ್ ಮಾರ್ಕ್ ಸೆಲೆಬ್ರೇಷನ್. ರೋಚಕ ಕ್ರಿಕೆಟ್ ಪಂದ್ಯಗಳನ್ನು ಗೆದ್ದಾಗ ‘ನಾಗಿನ್ ಡ್ಯಾನ್ಸ್‘ ಮಾಡಿ ಸಂಭ್ರಮಿಸುವುದು ಬಾಂಗ್ಲಾ ತಂಡದ ವಿಶೇಷತೆ. ಆದರೆ ಅದೇ ‘ನಾಗಿನ್ ಡ್ಯಾನ್ಸ್‘ ಬಾಂಗ್ಲಾದೇಶ ತಂಡಕ್ಕೆ ಏಷ್ಯಾ ಕಪ್‘ನಲ್ಲಿ (Asia Cup 2022) ತಿರುಗುಬಾಣ ವಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಬಿ‘ ಗ್ರೂಪ್‘ನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ, ಶ್ರೀಲಂಕಾ ವಿರುದ್ಧ (srilanka vs bangladesh) ಸೋಲುವ ಮೂಲಕ ಏಷ್ಯಾ ಕಪ್ ಟೂರ್ನಿಯಿಂದ ಹೊರ ಬಿದ್ದಿದೆ. ಸೂಪರ್-4 ಹಂತ ಪ್ರವೇಶಿಸಲು ಎರಡೂ ತಂಡಗಳಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 2 ವಿಕೆಟ್‘ಗಳಿಂದ ರೋಚಕವಾಗಿ ಸೋಲಿಸಿದ ಶ್ರೀಲಂಕಾ ಸೂಪರ್-4 ಹಂತಕ್ಕೆ ಎಂಟ್ರಿ ಕೊಟ್ಟಿದೆ.

ಬಾಂಗ್ಲಾದೇಶ ಒಡ್ಡಿದ 184 ರನ್‘ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಕೊನೆಯ ಓವರ್‘ನಲ್ಲಿ ರೋಚಕ ಗೆಲುವು ಸಾಧಿಸುತ್ತಿದ್ದಂತೆ, ಪೆವಿಲಿಯನ್‘ನಲ್ಲಿ ಲಂಕಾ ಆಲ್ರೌಂಡರ್ ಚಮಿಕ ಕರುಣಾರತ್ನ ‘ನಾಗಿನ್ ಡ್ಯಾನ್ಸ್‘ ಮಾಡಿ ಸಂಭ್ರಮಿಸಿದ್ದಾರೆ. ಬಾಂಗ್ಲಾದೇಶದ ಟ್ರೇಡ್ ಮಾರ್ಕ್ ಸೆಲೆಬ್ರೇಷನ್‘ನೊಂದಿಗೆ ಸಂಭ್ರಮಿಸುವ ಮೂಲಕ ನಾಲ್ಕು ವರ್ಷಗಳ ಹಿಂದಿನ ಘಟನೆಗೆ ಸೇಡು ತೀರಿಸಿಕೊಂಡಿದ್ದಾರೆ.

https://twitter.com/Iam_SUMITRAJ/status/1565398081637855232?s=20&t=zHNgxoXmpEy2NYHyQ0nH1A

2018ರಲ್ಲಿ ಶ್ರೀಲಂಕಾದಲ್ಲೇ ನಡೆದಿದ್ದ ನಿದಾಹಸ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ರೋಚಕವಾಗಿ ಸೋಲಿಸಿದ್ದ ಬಾಂಗ್ಲಾದೇಶ ಫೈನಲ್ ಪ್ರವೇಶಿಸಿತ್ತು. ಲಂಕಾ ವಿರುದ್ಧ ಗೆದ್ದ ನಂತರ ಬಾಂಗ್ಲಾ ಆಟಗಾರರು ಮೈದಾನದಲ್ಲಿ ‘ನಾಗಿನ್ ಡ್ಯಾನ್ಸ್‘ ಮಾಡಿದ್ದರು. ಈಗ ಏಷ್ಯಾ ಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡಡ ಬಾಂಗ್ಲಾದೇಶವನ್ನು ಸೋಲಿಸಿ ಟೂರ್ನಿಯಿಂದ ಹೊರಗಟ್ಟುವ ಮೂಲಕ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ. ಗೆದ್ದ ಬೆನ್ನಲ್ಲೇ ಲಂಕಾ ಆಲ್ರೌಂಡರ್ ಚಮಿಕ ಕರುಣಾರತ್ನೆ ನಾಗಿನ್ ನೃತ್ಯ (Sri Lanka Nagin Dance) ಮಾಡಿ ಬಾಂಗ್ಲಾ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಆಟಗಾರರ ಮಧ್ಯೆ ಮಾತಿನ ಚಕಮಕಿಯೂ ನಡೆದಿತ್ತು. ಶ್ರೀಲಂಕಾ ತಂಡದಲ್ಲಿ ಒಬ್ಬನೇ ಒಬ್ಬ ವಿಶ್ವಶ್ರೇಷ್ಠ ಬೌಲರ್ ಇಲ್ಲ ಎಂದು ಬಾಂಗ್ಲಾ ತಂಡದ ಮ್ಯಾನೇಜರ್ ಖಾಲಿದ್ ಮಹ್ಮೂದ್ ಹೇಳಿದ್ದರು. ಆ ಹೇಳಿಕೆಗೆ ಗೆಲುವಿನ ಮೂಲಕ ಶ್ರೀಲಂಕಾ ಉತ್ತರ ಕೊಟ್ಟಿದೆ.

‘ಬಿ‘ ಗ್ರೂಪ್‘ನ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ನಿಗದಿತ 20 ಓವರ್‘ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿದ್ರೆ, ಗುರಿ ಬೆನ್ನಟ್ಟಿದ ಶ್ರೀಲಂಕಾ 19.2 ಓವರ್‘ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತ್ತು.

ಇದನ್ನೂ ಓದಿ : Virat Kohli Bows to Suryakumar Yadav: ಐಪಿಎಲ್‌ನಲ್ಲಿ ಸೂರ್ಯನನ್ನು ಗುರಾಯಿಸಿದ್ದ ಕಿಂಗ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಅದೇ ಸೂರ್ಯನಿಗೆ ತಲೆ ಬಾಗಿ ನಮಿಸಿದ

ಇದನ್ನೂ ಓದಿ : Suryakumar Yadav success : ಮಿಸ್ಟರ್ 360 ಸೂರ್ಯನ ಯಶಸ್ಸಿನ ಹಿಂದೆ ರಬ್ಬರ್ ಬಾಲ್ ಮಹಿಮೆ

srilanka vs bangladesh asia cup 2022 Sri Lanka took revenge by performing Naagin dance against Bangladesh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular