ಭಾನುವಾರ, ಏಪ್ರಿಲ್ 27, 2025
HomeSportsStuart Binny : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಸ್ಟುವರ್ಟ್‌ ಬಿನ್ನಿ

Stuart Binny : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಸ್ಟುವರ್ಟ್‌ ಬಿನ್ನಿ

- Advertisement -

ಮುಂಬೈ : ಖ್ಯಾತ ಆಲ್‌ರೌಂಡರ್‌ ಆಟಗಾರ ಕನ್ನಡಿಗ ಸ್ಟುವರ್ಟ್‌ ಬಿನ್ನಿ ಅಂತರಾಷ್ಟ್ರೀಯ, ಪ್ರಥಮ ದರ್ಜೆ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಮಾಜಿ ಕ್ರಿಕೆಟಿಗ ರೋಜರ್‌ ಬಿನ್ನಿ ಅವರ ಪುತ್ರನಾಗಿರುವ 37 ವರ್ಷದ ಸ್ಟುವರ್ಟ್‌ ಬಿನ್ನಿ 2014ರ ಜನವರಿಯಲ್ಲಿ ನಡೆದ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ ಬಿನ್ನಿ ಏಕದಿನ ಪಂದ್ಯಕ್ಕೆ ಪದಾರ್ಪಣೆಯನ್ನು ಮಾಡಿದ್ದರು. 6 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 194 ರನ್‌ ಬಾರಿಸಿದ್ದಾರೆ. ಅಲ್ಲದೇ 3 ವಿಕೆಟ್‌ ಪಡೆದುಕೊಂಡಿದ್ದಾರೆ. 14 ಏಕದಿನ ಪಂದ್ಯಗಳನ್ನು ಆಡಿರುವ ಬಿನ್ನಿ 230 ರನ್‌ ಬಾರಿಸಿದ್ದು, 20 ವಿಕೆಟ್‌ ಗಳಿಸಿದ್ದಾರೆ. 79 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 3925 ರನ್‌ ಬಾರಿಸಿದ್ದು, 124 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೇ ಮೂರು ಟಿ20 ಪಂದ್ಯಗಳನ್ನಾಡಿದ್ದಾರೆ.

ಸ್ಟುವರ್ಟ್‌ ಬಿನ್ನಿಗೆ ಸಾಕಷ್ಟು ಅವಕಾಶಗಳು ಲಭಿಸಿದ್ದರೂ ಕೂಡ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಹೀಗಾಗಿ 2016 ರಿಂದ ಭಾರತ ತಂಡವನ್ನು ಪ್ರತಿನಿಧಿಸಿರಲಿಲ್ಲ. ಐಪಿಎಲ್‌ ಪಂದ್ಯಾವಳಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಇದನ್ನೂ ಓದಿ : MS ಧೋನಿ ವಿಶ್ವದ 2ನೇ ಶ್ರೀಮಂತ ಕ್ರಿಕೆಟಿಗ ! ʼಮಾಹಿʼ ವಾರ್ಷಿಕ ಆದಾಯ ಎಷ್ಟು ಗೊತ್ತಾ?

ಇದನ್ನೂ ಓದಿ : Avani Lekhara : ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಅವನಿ ಲೇಖರ

(All-rounder Stuart Binny announces retirement from international and all formats)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular