ಮುಂಬೈ : ಹಾಲಿ ಐಪಿಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ದ ಸೋಲನ್ನು ಕಂಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಿರಾಶದಾಯಕ ಪ್ರದರ್ಶನವನ್ನು ನೀಡಿದೆ. ಈ ನಡುವಲ್ಲೇ ಚೆನ್ನೈ ಪಾಳಯಕ್ಕೆ ಗುಡ್‌ನ್ಯೂಸ್ ಸಿಕ್ಕಿದ್ದು, ಮಾಜಿ ಆಟಗಾರ, ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್ ಸುರೇಶ್ ರೈನಾ (Suresh Raina ಎಂಟ್ರಿ ಕೊಡೋದು ಪಕ್ಕಾ ಆಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಸುರೇಶ್ ರೈನಾ ಸೇಲ್ ಆಗದೆ ಉಳಿದಿದ್ದರು. ಹೀಗಾಗಿ ಗುಜರಾತ್ ಟೈಟಾನ್ಸ್ ತಂಡ ಸೇರ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೂ ರೈನಾ ಐಪಿಎಲ್‌ಗೆ ಎಂಟ್ರಿ ಕೊಟ್ಟಿರಲಿಲ್ಲ. ಇದೀಗ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರುವ ಮಾತು ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ನಿಂದ ಹೊರಬಿದ್ದಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮೆಗಾ ಹರಾಜಿನಲ್ಲಿ ಈ ಬಾರಿ ವೇಗದ ಬೌಲರ್ ದೀಪಕ್ ಚಹಾರ್ ಅವರನ್ನು ಬರೋಬ್ಬರಿ 14 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದೆ ಹೊರಗುಳಿದಿದ್ದರು. ಚೆನ್ನೈ ಇದೀಗ ದೀಪಕ್ ಚಾಹರ್ ಅವರ ಬದಲಿ ಆಟಗಾರನನ್ನು ಹುಡುಕುತ್ತಿದೆ ಮತ್ತು ಸುರೇಶ್ ರೈನಾ ರೂಪದಲ್ಲಿ ಮಿಸ್ಟರ್ ಐಪಿಎಲ್ ಅನ್ನು ಪೂರ್ಣಗೊಳಿಸಬಹುದು ಎಂದು ನಂಬಲಾಗಿದೆ. ಸುದ್ದಿ ವೆಬ್‌ಸೈಟ್ ದೈನಿಕ್ ಭಾಸ್ಕರ್ ಪ್ರಕಾರ, ಸುರೇಶ್ ರೈನಾ ತಂಡಕ್ಕೆ ಮರಳಬಹುದು.

ಸುರೇಶ್ ರೈನಾ ಮತ್ತು ಫ್ರಾಂಚೈಸಿ ಆಡಳಿತದ ನಡುವೆ ಮಾತುಕತೆ ನಡೆಯುತ್ತಿದ್ದು, ರೈನಾ ಸೇರ್ಪಡೆಯ ಕುರಿತು ಯಾವುದೇ ಕ್ಷಣದಲ್ಲಿಯೂ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಸುರೇಶ್ ರೈನಾ ಫ್ರಾಂಚೈಸಿಯಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್. ಆದರೆ, ಕಳೆದ ಋತುವಿನಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ, ಆದ್ದರಿಂದ ತಂಡವು ಅವರನ್ನು ಬಿಡುಗಡೆ ಮಾಡಿತು. ಸುರೇಶ್ ರೈನಾ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಾಗ ಅವರು ಹಿಂದಿ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಸದ್ಯ ಐಪಿಎಲ್ ಪಂದ್ಯಗಳಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ಈ ಸುದ್ದಿ ನಿಜವೇ ಆಗಿದ್ದಲ್ಲಿ ಸುರೇಶ್ ರೈನಾ ಮತ್ತು ಎಂಎಸ್ ಧೋನಿ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿ ದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ರೈನಾ, ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಸಾರ್ವಕಾಲಿಕ ಅಗ್ರ ರನ್ ಗಳಿಸಿದ ಆಟಗಾರ. ಮುಂಬರುವ ಋತುವಿನಲ್ಲಿ ಫ್ರಾಂಚೈಸಿಯಿಂದ ಬಿಡುಗಡೆಗೊಳ್ಳುವ ಮೊದಲು ರೈನಾ ವರ್ಷಗಳಲ್ಲಿ CSK ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಮ್ಮೆ ಐಪಿಎಲ್‌ನಲ್ಲಿ ಸಾರ್ವಕಾಲಿಕ ಅಗ್ರ ರನ್ ಗಳಿಸಿದ ಆಟಗಾರ, ರೈನಾ ಲೀಗ್‌ನಲ್ಲಿ 205 ಪಂದ್ಯಗಳಲ್ಲಿ 5528 ರನ್ ಗಳಿಸಿದ್ದಾರೆ.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ರೈನಾ ಅವರನ್ನು ಮರಳಿ ಖರೀದಿಸುತ್ತದೆ ಎಂದು ಹಲವರು ನಿರೀಕ್ಷಿಸಿದ್ದರೂ, ನಾಲ್ಕು ಬಾರಿಯ ಚಾಂಪಿಯನ್‌ಗಳು ಅವರನ್ನು ಹಿಂದಕ್ಕೆ ತಳ್ಳಲು ನಿರ್ಧರಿಸಿದರು. ಕಳೆದ ವರ್ಷ IPL 2021 ರ ಸಮಯದಲ್ಲಿ CSK ಗಾಗಿ ಅವರ ಅಂತಿಮ ಪ್ರದರ್ಶನವು ಬಂದಿತು. ರೈನಾ ಈಗ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಐಪಿಎಲ್ ಸೀಸನ್‌ನಲ್ಲಿ ಸೋಲನ್ನೇ ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಫ್ಲೇ ಆಫ್ ಕನಸು ಕಷ್ಟಕರವೇ ಆಗಿದೆ. ಹೀಗಾಗಿ ಆಲ್ ರೌಂಡರ್ ಸ್ಥಾನದಲ್ಲಿ ರೈನಾ ಕಾಣಿಸಿಕೊಂಡ್ರೆ ಗೆಲುವಿನ ನಗೆ ಬೀರಬಹುದು ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಎಲ್ಲವೂ ಅಂದುಕೊಂಡಂತೆ ಆದ್ರೆ ಸುರೇಶ್ ರೈನಾ ಬ್ಯಾಟಿಂಗ್ ಆರ್ಭಟವನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಿಗೆ ಕೊರೊನಾ ಸೋಂಕು
ಇದನ್ನೂ ಓದಿ : ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದ ನಾಯಕ ಮಯಾಂಕ್ ಅಗರ್ವಾಲ್
Suresh Raina enter CSK for IPL 2022 place of Deepak Chahar