ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಅವೃತ್ತಿಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಕ್ರಿಕೆಟಿಗ ಸುರೇಶ್ ರೈನಾ ಟೂರ್ನಿಯಿಂದ ಅರ್ಧಕ್ಕೆ ವಾಪಾಸಾಗಿದ್ರು. ಇದೀಗ ರೈನಾ ವಾಪಾಸಾಗಿರುವ ಕಾರಣ ಬಹಿರಂಗವಾಗಿದೆ.

ಪಠಾಣ್ಕೋಟ್ನ ಥಾರಿಯಲ್ ಗ್ರಾಮದಲ್ಲಿ ನೆಲೆಸಿದ್ದ ರೈನಾ ಅವರ ಹತ್ತಿರದ ಸಂಬಂಧಿಕರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರ ಮಾವ ಮೃತಪಟ್ಟಿದ್ದಾರೆ. ಅತ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ.

ಸುರೇಶ್ ರೈನಾ ತಂದೆಯ ಸಹೋದರಿಯ ಕುಟುಂಬದ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಇಡೀ ಕುಟುಂಬದವರು ಮನೆಯ ಟೆರೇಸ್ ಮೇಲೆ ಮಲಗಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ರೈನಾ ಮಾವ ಅಶೋಕ್ ಕುಮಾರ್ ಮೃತಪಟ್ಟಿದ್ದರೆ, ಅತ್ತೆ ಆಶಾ ದೇವಿ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಶೋಕ್ ಕುಮಾರ್ ಅವರ 80 ವರ್ಷದ ತಾಯಿ, ಸಂಬಂಧಿ ಕೌಶಾಲ್ ಕುಮಾರ್ (32)ಹಾಗೂ ಅಪಿನ್ ಕುಮಾರ್ (24) ತೀವ್ರ ಗಾಯಗೊಂಡಿದ್ದಾರೆ.

ಮೃತರು ಸುರೇಶ್ ರೈನಾ ಅವರ ಹತ್ತಿರದ ಸಂಬಂಧಿಗಳೆಂದು ತಿಳಿಯುತ್ತಿದ್ದಂತೆಯೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ.. ಈಗಾಗಲೇ ಸ್ಥಳಕ್ಕೆ ಬೆರಳಚ್ಚು ತಜ್ಞರು, ಮತ್ತಿತರರು ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಶ್ವಾನಗಳಿಂದಲೂ ಪರೀಕ್ಷೆ ಮಾಡಿಸಲಾಗಿದೆ.
ಆಗಸ್ಟ್ 21ರಂದು ದುಬೈಗೆತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಇಂದು ವಾಪಸ್ ಆಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ಭಾರತಕ್ಕೆ ಮರಳುತ್ತಿದ್ದಾರೆ. ಟೂರ್ನಿಯಲ್ಲಿ ಲಭ್ಯ ಇರುವುದಿಲ್ಲ ಎಂದು ಸಿಎಸ್ಕೆ ಸಿಇಒ ಕೆ.ಎಸ್.ವಿಶ್ವನಾಥ್ ಅವರು ಟ್ವೀಟ್ ಮಾಡಿ ಖಚಿತ ಪಡಿಸಿದ್ದರು.