ಭಾನುವಾರ, ಏಪ್ರಿಲ್ 27, 2025
HomeSportsCricketSyed Mushtaq Ali Trophy 2022 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ...

Syed Mushtaq Ali Trophy 2022 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ಸಂಭಾವ್ಯ ತಂಡದಿಂದ ಕರುಣ್, ಸಮರ್ಥ್, ಸಿದ್ಧಾರ್ಥ್ ಔಟ್

- Advertisement -

ಬೆಂಗಳೂರು: (Syed Mushtaq Ali Trophy 2022) ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ 25 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯ ತಂಡವನ್ನು(Karnataka Cricket Team) ಪ್ರಕಟಿಸಲಾಗಿದೆ. ಅನುಭವಿ ಬ್ಯಾಟ್ಸ್’ಮನ್’ಗಳಾದ ಕರಣ್ ನಾಯರ್ (Karun Nair) , ಆರ್.ಸಮರ್ಥ್ (Siddarth), ಕೆ.ವಿ ಸಿದ್ಧಾರ್ಥ್ (Samarth) ಹಾಗೂ ಅನುಭವಿ ವೇಗಿ ರೋನಿತ್ ಮೋರೆ ಅವರನ್ನು ಸಂಭಾವ್ಯ ತಂಡದಿಂದಲೇ ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ.

ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ವೇಗ ಬೌಲರ್ ಪ್ರಸಿದ್ಧ್ ಕೃಷ್ಣ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಿಂಚಿದ್ದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ರೋಹನ್ ಪಾಟೀಲ್ ಹಾಗೂ ಬಲಗೈ ಓಪನರ್ ಎಲ್.ಆರ್ ಚೇತನ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: (Syed Mushtaq Ali Trophy 2022) ಕರ್ನಾಟಕ ಸಂಭಾವ್ಯ

ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಚೇತನ್ ಎಲ್.ಆರ್., ರೋಹನ್ ಪಾಟೀಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಸ್ಮರಣ್ ಆರ್., ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್), ಶರತ್ ಬಿ.ಆರ್ (ವಿಕೆಟ್ ಕೀಪರ್), ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ರಿಷಿ ಬೋಪಣ್ಣ, ರಿತೇಶ್ ಭಟ್ಕಳ್, ಜೆ.ಸುಚಿತ್, ಶುಭಾಂಗ್ ಹೆಗ್ಡೆ, ವಿ.ಕೌಶಿಕ್, ವೈಶಾಖ್ ವಿಜಯ್ ಕುಮಾರ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ., ಆದಿತ್ಯ ಗೋಯೆಲ್, ಮನೋಜ್ ಭಾಂಡಗೆ, ವಿದ್ವತ್ ಕಾರಿಯಪ್ಪ, ನಿಕಿನ್ ಜೋಸ್, ಕೆ.ಸಿ ಕಾರಿಯಪ್ಪ.

ಕೋಚ್: ಪಿ.ವಿ ಶಶಿಕಾಂತ್
ಫಿಸಿಯೋ: ಜಾಬಾ ಪ್ರಭು
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಕೆ.ಸಿ ಅವಿನಾಶ್
ಮ್ಯಾನೇಜರ್: ಅನುತೋಷ್ ಪೌಲ್

ಕರ್ನಾಟಕ ತಂಡದ ವೇಳಾಪಟ್ಟಿ ಹೀಗಿದೆ:

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ
ಅಕ್ಟೋಬರ್ 11: ಕರ್ನಾಟಕ Vs ಮಹಾರಾಷ್ಟ್ರ
ಅಕ್ಟೋಬರ್ 12: ಕರ್ನಾಟಕ Vs ಕೇರಳ
ಅಕ್ಟೋಬರ್ 14: ಕರ್ನಾಟಕ Vs ಮೇಘಾಲಯ
ಅಕ್ಟೋಬರ್ 16: ಕರ್ನಾಟಕ Vs ಅರುಣಾಚಲ ಪ್ರದೇಶ
ಅಕ್ಟೋಬರ್ 20: ಕರ್ನಾಟಕ Vs ಸರ್ವಿಸಸ್
ಅಕ್ಟೋಬರ್ 22: ಕರ್ನಾಟಕ Vs ಹರ್ಯಾಣ
(ಎಲ್ಲಾ ಪಂದ್ಯಗಳು ಮೊಹಾಲಿಯಲ್ಲಿ ನಡೆಯಲಿವೆ)

ಇದನ್ನೂ ಓದಿ : Hardik Pandya Natasha Stankovic : ಪತ್ನಿಯ ಫ್ಯಾಮಿಲಿಯನ್ನು ಮೊದಲ ಬಾರಿ ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ.. ಅಳಿಯನನ್ನು ನೋಡಿ ಅತ್ತೆ-ಮಾವ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : BCCI Election : ಅಕ್ಟೋಬರ್ 18ಕ್ಕೆ ಬಿಸಿಸಿಐ ಚುನಾವಣೆ; ಅಮಿತ್ ಶಾ ಮಗ ಅಧ್ಯಕ್ಷರಾದ್ರೆ ದಾದಾ ಕಥೆಯೇನು ?

Syed Mushtaq Ali Trophy 2022 select Karnataka Cricket Team Karun Nair Siddarth Samarth Out

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular