Deepika Padukone : ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರ: Deepika Padukone rushed hospital : ಬ್ಯಾಕ್​ ಟು ಬ್ಯಾಕ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ಸೋಮವಾರದಂದು ದಾಖಲಾಗಿರುವ ವಿಚಾರ ಇಂದು ಬೆಳಕಿಗೆ ಬಂದಿದೆ. ದೀಪಿಕಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯಿಂದ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೀಪಿಕಾ ಪಡುಕೋಣೆಯನ್ನು ಸೋಮವಾರ ರಾತ್ರಿ ಸುಮಾರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವಿವಿಧ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ದೀಪಿಕಾ ಎಲ್ಲಿಯೂ ಕೂಡ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಇದುವರೆಗೂ ಹೇಳಿಕೊಂಡಿಲ್ಲ. ಆದರೆ ಅವರು ಕಾಮಿನೇನಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.

ದೀಪಿಕಾ ವೃತ್ತಿ ಬದುಕಿನ ಬಗ್ಗೆ ಮಾತನಾಡುವುದಾದರೆ ಕೊನೆಯ ಬಾರಿಗೆ ದೀಪಿಕಾ ಪಡುಕೋಣೆ ಗೆಹರಾಯಿಯಾನ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅನನ್ಯ ಪಾಂಡೆ ಹಾಗೂ ಸಿದ್ಧಾಂತ್​ ಚತುರ್ವೇದಿ ಜೊತೆ ಮುಖ್ಯ ಪಾತ್ರದಲ್ಲಿ ನಟಿ ದೀಪಿಕಾ ನಟಿಸಿದ್ದಾರೆ.ಸಧ್ಯ ದೀಪಿಕಾ ಪಡುಕೋಣೆ ಪಠಾಣ್​, ಫೈಟರ್​, ಪ್ರಾಜೆಕ್ಟ್​ ಕೆ ಹಾಗೂ ದಿ ಇಂಟರ್ನ್​ ಹಿಂದು ರೂಪಾಂತರ ಸೇರಿದಂತೆ ಅನೇಕ ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ.

ಮೊಟ್ಟ ಮೊದಲ ಬಾಲಿವುಡ್​ ಸಿನಿಮಾದಲ್ಲಿ ಶಾರೂಖ್​ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ದೀಪಿಕಾ ಪಡುಕೋಣೆ ಇದೀಗ ಮತ್ತೆ ಪಠಾಣ್​ ಸಿನಿಮಾದ ಮೂಲಕ ಕಿಂಗ್​ ಖಾನ್​ಗೆ ಜೋಡಿಯಾಗಿದ್ದಾರೆ. ಸಿದ್ಧಾರ್ಥ್​ ಆನಂದ್​ ನಿರ್ದೇಶನದ ಈ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇನ್ನುಳಿದಂತೆ ಫೈಟರ್​ ಸಿನಿಮಾದ ಮೂಲಕ ಮೊಟ್ಟ ಮೊದಲಬಾರಿಗೆ ಹೃತಿಕ್​ ರೋಷನ್​ಗೆ ಜೋಡಿಯಾಗಿ ತೆರೆ ಮೇಲೆ ಮಿಂಚಲು ದೀಪಿಕಾ ಸಜ್ಜಾಗುತ್ತಿದ್ದಾರೆ.

ಇದನ್ನು ಓದಿ : BCCI Election : ಅಕ್ಟೋಬರ್ 18ಕ್ಕೆ ಬಿಸಿಸಿಐ ಚುನಾವಣೆ; ಅಮಿತ್ ಶಾ ಮಗ ಅಧ್ಯಕ್ಷರಾದ್ರೆ ದಾದಾ ಕಥೆಯೇನು ?

ಇದನ್ನೂ ಓದಿ : Jambu Savari: ಮೈಸೂರಿನಲ್ಲಿ ಜಂಬೂ ಸವಾರಿ ಮಾದರಿಯಲ್ಲಿ ನಡೆಯಲಿದೆ ಗ್ರಾಮೀಣ ದಸರೆ

Deepika Padukone rushed to hospital after complaining of uneasiness: Report

Comments are closed.