ಸೋಮವಾರ, ಏಪ್ರಿಲ್ 28, 2025
HomeSportsSMA T20 Karnataka win : ಬಂಗಾಳ ವಿರುದ್ದ ಸೂಪರ್‌ ಓವರ್‌ನಲ್ಲಿ ಗೆದ್ದಕರ್ನಾಟಕ ಸೆಮಿಫೈನಲ್‌ಗೆ ಎಂಟ್ರಿ

SMA T20 Karnataka win : ಬಂಗಾಳ ವಿರುದ್ದ ಸೂಪರ್‌ ಓವರ್‌ನಲ್ಲಿ ಗೆದ್ದಕರ್ನಾಟಕ ಸೆಮಿಫೈನಲ್‌ಗೆ ಎಂಟ್ರಿ

- Advertisement -

ದೆಹಲಿ : ಸಯದ್‌ ಮುಷ್ತಾಕ್‌ ಆಲಿ ಟ್ರೋಫಿ ( Syed Mushtaq Ali Trophy ) ಟಿ20 ಸರಣಿಯಲ್ಲಿ ಕರ್ನಾಟಕ (Karnataka) ತಂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಂಗಾಳ ತಂಡದ ವಿರುದ್ದ ಸೂಪರ್‌ ಓವರ್‌ ಮೂಲಕ ಗೆಲುವು ಕಂಡು ಸೆಮಿ ಫೈನಲ್‌ ಪ್ರವೇಶಿಸಿದೆ. ಕರ್ನಾಟಕಕ್ಕೆ ಬಂಗಾಳ ತಂಡ ಪ್ರಬಲ ಪೈಪೋಟಿಯನ್ನು ನೀಡಿ ಪಂದ್ಯ ಸಮಬಲಗೊಂಡಿತ್ತು. ಅಂತಿಮವಾಗಿ ಸೂಪರ್‌ ಓವರ್‌ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ ತಂಡ ಉತ್ತಮ ಆಟದ ಪ್ರದರ್ಶನ ನೀಡಿದೆ. ಆರಂಭಿಕ ಆಟಗಾರ ಶರತ್‌ ನಿರಾಸೆ ಅನುಭವಿಸಿದ್ರೆ, ರೋಹನ್‌ ಕದಂ ಹಾಗೂ ಮನೀಶ್‌ ಪಾಂಡೆ ಉತ್ತಮ ಜೊತೆಯಾಟ ನೀಡಿದ್ರು. ರೋಹನ್‌ ಕದಂ 30 ರನ್‌ ಬಾರಿಸಿದ್ರೆ, ಮನೀಶ್‌ ಪಾಂಡೆ ೨೯ರನ್‌ ಸಿಡಿಸಿದ್ದಾರೆ. ನಂತರ ಕರುಣ್‌ ನಾಯರ್‌ ಕರುಣ್‌ ನಾಯರ್‌ 29 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿ ನೆರವಿನಿಂದ 55 ರನ್‌ಗಳಿಸುವ ಮೂಲಕ ಸ್ಪೋಟ ಅರ್ಧಶತಕ ಸಿಡಿಸಿದ್ದಾರೆ. ನಂತರ ಅಭಿನವ ಮನೋಹರ್‌ 19 ರನ್‌ ಹಾಗೂ ಅನಿರುದ್ದ 16 ರನ್‌ ಬಾರಿಸುವ ಮೂಲಕ ಕರ್ನಾಟಕ ತಂಡ 5 ವಿಕೆಟ್‌ ಕಳೆದುಕೊಂಡು 160 ರನ್‌ ಗಳಿಸಿತ್ತು. ಬೆಂಗಾಳ ಪರ ಮುಕೇಶ್‌ ಕುಮಾರ್‌, ಆಕಾಶ್‌ ದೀಪ್‌, ಎಸ್.ಗೋಷ್‌, ಬಿಜಾಯ್‌ ಚಟರ್ಜಿ, ಶಹಬಾಜ್‌ ತಲಾ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ನಂತರ ಕರ್ನಾಟಕ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಿದ ಬೆಂಗಾಲ ತಂಡಕ್ಕೆ ವಿದ್ಯಾಧರ ಪಾಟೀಲ್‌ ಆಘಾತ ನೀಡಿದ್ರು. ಅಭಿಷೇಕ್‌ ದಾಸ್‌ ಶೂನ್ಯಕ್ಕೆ ಔಟಾದ್ರು. ನಂತರ ಶ್ರೀವತ್ಸ ಗೋಸ್ವಾಮಿ 22 ಹಾಗೂ ಬಿಜಾಯ್‌ ಚಟರ್ಜಿ 51 ರನ್‌ ಗಳಿಸುವ ಮೂಲಕ ಉತ್ತಮ ಜೊತೆಯಾಟ ನೀಡಿದ್ರು. ನಂತರದಲ್ಲಿ ದರ್ಶನ್‌ ಬೆಂಗಾಳ ತಂಡಕ್ಕೆ ಆಘಾತ ನೀಡಿದ್ರು. ಕೈಫ್‌ ಅಹ್ಮದ್‌ 20 ಹಾಗೂ ರಿತ್ವಿಕ್‌ ರಾಯ್‌ ಚೌದರಿ 36 ರನ್‌ ಗಳಿಸುವ ಮೂಲಕ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದ್ರು. ಆದರೆ ಕರ್ನಾಟಕದ ಆಟಗಾರರು ಮಾತ್ರ ಅವಕಾಶವನ್ನೇ ನೀಡಲಿಲ್ಲ. ಬೆಂಗಾಳ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 160 ರನ್‌ ಬಾರಿಸುವ ಮೂಲಕ ಪಂದ್ಯ ಟೈ ಆಗಿತ್ತು. ಕರ್ನಾಟಕ ಪರ ಎಂ.ಬಿ.ದರ್ಶನ್‌ 3, ಜೆ.ಸುಜಿತ್‌ 2 ಹಾಗೂ ವಿ.ಪಾಟೀಲ್‌ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಪಂದ್ಯ ಟೈ ಆಗುತ್ತಲೇ ಸೂಪರ್‌ ಓವರ್‌ ಪಂದ್ಯವನ್ನು ನಡೆಸಲಾಯಿತು. ಬಂಗಾಳ ತಂಡ ಮೊದಲು ಬ್ಯಾಟಿಂಗ್‌ ನಡೆಸಿತು. ಕರ್ನಾಟಕ ಪರ ಬೌಲಿಂಗ್‌ ಮಾಡಿದ ಕೆ.ಸಿ.ಕಾರ್ಯಪ್ಪ ಅದ್ಬುತವಾಗಿ ಬೌಲಿಂಗ್‌ ನಡೆಸಿದ್ರು, ಕಾರ್ಯಪ್ಪ ತನ್ನ 2ನೇ ಎಸೆತದಲ್ಲಿಯೇ ಕೈಪ್‌ ಅಹ್ಮದ್‌ ಅವರನ್ನು ಬಲಿ ಪಡೆದಿದೆ. ನಂತರ ಕ್ರೀಸ್‌ಗೆ ಬಂದ ಶ್ರೀವತ್ಸ ಗೋಸ್ವಾಮಿ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದ್ರೆ ಎರಡನೇ ಎಸೆತದಲ್ಲಿ ರನೌಟ್‌ ಆದ್ರು. ಈ ಮೂಲಕ ಬಂಗಾಳ ಕೇವಲ 4 ಎಸೆತಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಕೇವಲ 5 ರನ್‌ ಗಳಿಸಿತು. ಬಂಗಾಳ ತಂಡ ನೀಡಿದ್ದ 6 ರನ್‌ ಟಾರ್ಗೆಟ್‌ ಬೆನ್ನತ್ತಿದ ಕರ್ನಾಟಕಕ್ಕೆ ನಾಯಕ ಮನೀಷ್‌ ಪಾಂಡೆ ಹಾಗೂ ಕರುಣ್‌ ನಾಯರ್‌ ಆರಂಭಿಕರಾಗಿ ಕಣಕ್ಕೆ ಇಳಿದಿದ್ದಾರೆ. ಮೊದಲ ಎಸೆತದಲ್ಲಿ ಎರಡು ರನ್‌ ಬಾರಿಸಿದ ಮನೀಷ್‌ ಪಾಂಡೆ ಎರಡನೇ ಎಸೆತದಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಕರ್ನಾಟಕಕ್ಕೆ ಗೆಲುವನ್ನು ತಂದುಕೊಟ್ಟರು.

ಇದನ್ನೂ ಓದಿ :  ಕಿವೀಸ್‌ ವಿರುದ್ದ ಭಾರತಕ್ಕೆ ಭರ್ಜರಿ ಜಯ : ಕೋಚ್‌ ಆಗಿ ಮೊದಲ ಗೆಲುವು ಕಂಡ ದ್ರಾವಿಡ್‌

ಇದನ್ನೂ ಓದಿ : ಅನಿಲ್ ಕುಂಬ್ಳೆ ಬದಲಿಗೆ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ಸೌರವ್ ಗಂಗೂಲಿ ನೇಮಕ

( Syed Mushtaq Ali Trophy T20 Tournament Karnataka beat Bengal in Super Over)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular