Mangalore : ಇಂಟನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ವಕೀಲ ರಾಜೇಶ್‌ ಭಟ್‌ ಮನೆಯಲ್ಲಿ ಶೋಧ ಕಾರ್ಯ

ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಕೀಲ ರಾಜೇಶ್‌ ಭಟ್‌ ವಿರುದ್ದ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ರಾಜೇಶ್‌ ಭಟ್‌ ತಲೆ ಮರೆಯಿಸಿಕೊಂಡಿದ್ದು, ಈಗಾಗಲೇ ಲುಕ್‌ಔಟ್‌ ನೋಟೀಸ್‌ ಜಾರಿ ಮಾಡಲಾಗಿದೆ. ಇದೀಗ ಎಸಿಪಿ ರಂಜಿತ್‌ ಬಂಡಾರು ನೇತೃತ್ವದಲ್ಲಿಂದು ರಾಜೇಶ್‌ ಭಟ್‌ ಮನೆಯಲ್ಲಿ ಶೋಧ ಕಾರ್ಯವನ್ನು ನಡೆಸಿದ್ದಾರೆ.

ಇಂಟನ್‌ಶಿಪ್‌ ಸಲುವಾಗಿ ತನ್ನ ಕಚೇರಿಗೆ ಬಂದಿದ್ದ ಕಾನೂನು ವಿದ್ಯಾರ್ಥಿನಿಯೋರ್ವಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ರಾಜೇಶ್‌ ವಿರುದ್ದ ದಾಖಲಾಗಿರುವ ಪ್ರಕರಣದ ತನಿಖೆಯ ವಿಚಾರಣೆ ತೀವ್ರಗೊಂಡಿದೆ. ಆದರೆ ಇದುವರೆಗೂ ರಾಜೇಶ್‌ ಭಟ್‌ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ವಿದೇಶಕ್ಕೆ ತೆರಳದಂತೆ ಲುಕ್‌ಔಟ್‌ ನೋಟೀಸ್‌ ಜಾರಿ ಮಾಡಲಾಗಿದೆ.

ಇಂದು ಪ್ರಮುಖದ ತನಿಖೆಯನ್ನು ನಡೆಸುತ್ತಿರುವ ಎಸಿಪಿ ರಂಜಿತ್‌ ಬಂಡಾರು ಅವರ ನೇತೃತ್ವದಲ್ಲಿನ ಪೊಲೀಸರ ತಂಡ ರಾಜೇಶ್‌ ಭಟ್‌ ಅವರ ಮನೆಯಲ್ಲಿ ಶೋಧ ಕಾರ್ಯವನ್ನು ನಡೆಸಿದೆ. ಅಲ್ಲದೇ ಮನೆಯವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ : ವಕೀಲ ರಾಜೇಶ್‌ ಭಟ್‌ ಅಮಾನತ್ತು, ಮೂವರು ಅರೆಸ್ಟ್‌

ಇದನ್ನೂ ಓದಿ : ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ವಕೀಲ ರಾಜೇಶ್‌ ಭಟ್‌ಗೆ ಸಹಕರಿಸಿದ್ದ ಸ್ನೇಹಿತ ಬಂಧನ

( internship student harassment case Lawyer Rajesh Bhatt searches house)

Comments are closed.