ದುಬೈ : T20 ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ದ ಭರ್ಜರಿ 8 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಅಫ್ಘಾನಿಸ್ಥಾನ ತಂಡ ಗೆಲ್ಲ ಬೇಕೆಂಬ ಕೋಟ್ಯಾಂತರ ಭಾರತೀಯ ಹರಿಕೆ ಕೊನೆಗೂ ಫಲಿಸಲಿಲ್ಲ.

ಅಬುದುಬೈನಲ್ಲಿರುವ ಶೇಖ್ ಝೈಯದ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ತಂಡಕ್ಕೆ ನ್ಯೂಜಿಲೆಂಡ್ ಬೌಲರ್‌ಗಳು ಆರಂಭಿಕ ಆಘಾತ ನೀಡಿದ್ರು. ನಾಜಿಬುಲ್ಲಾ 73 ರನ್ ಬಾರಿಸಿದ್ದು ಹೊರತು ಪಡಿಸಿದ್ರೆ ಉಳಿದ ಯಾವುದೇ ಆಟಗಾರರು ಉತ್ತಮ ಆಟದ ಪ್ರದರ್ಶನವನ್ನು ನೀಡಲಿಲ್ಲ. ಗುಲ್ಬದಿನ್ 15, ಮೊಹಮದ್ ನಬಿ 14 ರನ್ ಗಳಿಸುವ ಮೂಲಕ ಅಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 124 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರ ಬೋಲ್ಟ್ 17/3, ಟೀಮ್ ಸೌಥಿ 24/2 ವಿಕೆಟ್ ಪಡೆದಿದ್ದಾರೆ.

ನಂತರ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಮಾರ್ಟಿನ್ ಗುಫ್ಟಿಲ್ 28 ರನ್ ಬಾರಿಸಿದ್ರೆ, ಮಿಚಿಲ್ 17 ರನ್ ಗಳಿಸಿದ್ದಾರೆ. ನಂತರ ಬ್ಯಾಟಿಂಗ್ ನಡೆಸಿದ ವಿಲಿಯಂಸನ್ 40 ರನ್ ಗಳಿಸಿದ್ರೆ, ಕಾನ್‌ವೇ 36 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ನ್ಯೂಜಿಲೆಂಡ್ ತಂಡ 18.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ.

ನ್ಯೂಜಿಲೆಂಡ್ ತಂಡ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿ ಭಾರತ ಟೂರ್ನಿಯಿಂದಲೇ ಹೊರಬಿದ್ದಿದ್ದು, ಟೀಂ ಇಂಡಿಯಾ ನಮೀಬಿಯಾ ತಂಡದ ವಿರುದ್ದ ಅನೌಪಚಾರಿಕ ಪಂದ್ಯವನ್ನು ಆಡಬೇಕಾಗಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದದ ಸೋಲು ಭಾರತಕ್ಕೆ ವಿಶ್ವಕಪ್ ನಲ್ಲಿ ಭಾರೀ ಹೊಡೆತ ಕೊಟ್ಟಿದೆ.
ಇದನ್ನೂ ಓದಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿ : ಉತ್ತಪ್ಪ, ಸಂಜು ಆರ್ಭಟ, ಬಿಹಾರ ವಿರುದ್ದ ಕೇರಳಕ್ಕೆ ಭರ್ಜರಿ ಗೆಲುವು
ಇದನ್ನೂ ಓದಿ : ಅತಿಯಾ ಶೆಟ್ಟಿಗೆ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದ ಕೆಎಲ್ ರಾಹುಲ್