T20 World CUP SONG : ಟಿ20 ವಿಶ್ವಕಪ್ ಅಧಿಕೃತ ಗೀತೆ ರಿಲೀಸ್

ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಒಮನ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಗೀತೆಯನ್ನು ಗುರುವಾರ ಬಿಡುಗಡೆಯಾಗಿದೆ. ‘ಅವತಾರ್ಸ್‌’ ಆಯನಿಮೇಷನ್ ಮಾದರಿಯಲ್ಲಿ ಈ ಗೀತೆಯ ವಿಡಿಯೊ ತಯಾರಿಸಲಾಗಿದೆ. ಅದರಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೀರನ್ ಪೊಲಾರ್ಡ್ ಅವರ ಆಯನಿಮೇಟೆಡ್ ಪ್ರತಿಕೃತಿಗಳಿವೆ.

‘ಲಿವ್ ದ ಗೇಮ್..ಲವ್‌ ದ ಗೇಮ್‌’ ಎಂಬ ಧ್ಯೇಯವಾಕ್ಯ ಪ್ರಧಾನವಾದ ಹಾಡು ಇದಾಗಿದೆ. ಇದಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ವಿಡಿಯೊದಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಯುವ ಅಭಿಮಾನಿಗಳು ವಿಶ್ವಕಪ್ ಟೂರ್ನಿಗಾಗಿ ಕಾತುರದಿಂದ ಕಾಯುವ ರೂಪಕವನ್ನು ಚಿತ್ರಿಸಲಾಗಿದೆ.

ಇದನ್ನೂ ಓದಿ: IPL 2021 SRH vs DC: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಸನ್ ರೈಸರ್ಸ್ ಹೈದರಾಬಾದ್ ಗೆ ಸೋಲು

ಜಮೈಕಾ, ಮುಂಬೈ, ಕರಾಚಿ, ಆಕ್ಲಂಡ್ ಸೇರಿದಂತೆ ವಿವಿಧ ನಗರಗಳ ಯುವಕ-ಯುವತಿಯರು ತಮ್ಮ ಐಪಾಡ್, ಮೊಬೈಲ್, ಲ್ಯಾಪ್‌ಟ್ಯಾಪ್‌ಗಳಲ್ಲಿ ಪಂದ್ಯಗಳನ್ನು ವೀಕ್ಷಿಸುವಂತಹ ದೃಶ್ಯಾವಳಿಗಳನ್ನು ಹಾಕಲಾಗಿದೆ.

ಇದನ್ನೂ ಓದಿ: RCB vs KKR IPL 2021 : ಕೊಲ್ಕತ್ತಾ ಎದುರಲ್ಲಿ ಹೀನಾಯ ಸೋಲು ಕಂಡ ಬೆಂಗಳೂರು

( ICC T20 World Cup 2021 official Theme song released )

Comments are closed.