ಸೋಮವಾರ, ಏಪ್ರಿಲ್ 28, 2025
HomeSportsCricketIndia Cricket team coach Rahul Dravid : ಸುದ್ದಿಗೋಷ್ಠಿಯಲ್ಲಿ ‘Sexy’ ಪದ ಬಳಸಲು...

India Cricket team coach Rahul Dravid : ಸುದ್ದಿಗೋಷ್ಠಿಯಲ್ಲಿ ‘Sexy’ ಪದ ಬಳಸಲು ಹಿಂಜರಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ : viral Video

- Advertisement -

ದುಬೈ: ಭಾರತ ಕ್ರಿಕೆಟ್ ತಂಡದ ಕೋಚ್ (India Cricket team coach Rahul Dravid ), ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಖ್ಯಾತಿಯ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತು ಕಂಡ ಜಂಟಲ್’ಮ್ಯಾನ್ ಕ್ರಿಕೆಟರ್. ತಮ್ಮ ನಡವಳಿಕೆ, ಶಿಸ್ತು, ಮಾತು.. ಎಲ್ಲದರಲ್ಲೂ ದ್ರಾವಿಡ್ ಮಾದರಿ. ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ರಾಹುಲ್ ದ್ರಾವಿಡ್ ಯಾವುದೇ ವಿವಾದಗಳಿಗೆ ಗುರಿಯಾದವರಲ್ಲ. ಅವರದ್ದು ನಿಷ್ಕಳಂಕ ವ್ಯಕ್ತಿತ್ವ.

ರಾಹುಲ್ ದ್ರಾವಿಡ್ ಯಾಕೆ ಜಂಟಲ್’ಮ್ಯಾನ್ ಎಂಬುದಕ್ಕೆ ಮತ್ತೊಂದು ನಿದರ್ಶನ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್-4 ಪಂದ್ಯಕ್ಕೂ (India Vs Pakistan Asia Cup 2022) ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ದ್ರಾವಿಡ್ ಆಡಿದ ಮಾತು. ಭಾರತಕ್ಕಿಂದ ಬಲಿಷ್ಠ ಬೌಲಿಂಗ್ ಪಡೆ ಪಾಕಿಸ್ತಾನ ತಂಡದಲ್ಲಿದೆ ಎಂದು ನಿಮಗನ್ನಿಸುತ್ತಿದೆಯೇ ಎಂಬ ಪ್ರಶ್ನೆ ಸುದ್ದಿಗೋಷ್ಠಿಯಲ್ಲಿ ದ್ರಾವಿಡ್ ಅವರಿಗೆ ಎದುರಾಯಿತು. ಇದಕ್ಕೆ ದ್ರಾವಿಡ್ ಕೊಟ್ಟ ಉತ್ತರ ತುಂಬಾ ಇಂಟ್ರೆಸ್ಟಿಂಗ್.

‘’ಪಾಕಿಸ್ತಾನ ತಂಡದ ಬೌಲಿಂಗ್ ಪಡೆಯನ್ನು ನೀವು ಗೌರವಿಸಲೇಬೇಕು. ಆದರೆ ನಮ್ಮ ಬಳಿಯೂ ಅತ್ಯುತ್ತಮ ಬೌಲಿಂಗ್ ಆಕ್ರಮಣವಿದೆ ಎಂಬುದನ್ನು ನಾನು ಅತ್ಯಂತ ಆತ್ಮವಿಶ್ವಾಸ ದಿಂದ ಹೇಳಬಲ್ಲೆ’’.
ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ಕೋಚ್.

ರಾಹುಲ್ ದ್ರಾವಿಡ್ ಅವರು ಇಷ್ಟನ್ನೇ ಹೇಳಿದ್ದರೆ ಅದರಲ್ಲೇನೂ ವಿಶಷತೆ ಇರ್ತಾ ಇರ್ಲಿಲ್ಲ. ಆದರೆ ಪಾಕಿಸ್ತಾನ ಬೌಲಿಂಗ್ ಪಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ವೇಳೆ ಅವರಾಡಿದ ಮಾತು ದ್ರಾವಿಡ್ ಅವರ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಇರುವ ಗೌರವ ಹೆಚ್ಚಾಗುವಂತೆ ಮಾಡಿದೆ. ಹಾಗಾದ್ರೆ ದ್ರಾವಿಡ್ ಅಂಥದ್ದೇನು ಹೇಳಿದ್ರು.?

‘’ನಮ್ಮ ಬೌಲಿಂಗ್ ಆಕ್ರಮಣ ಪಾಕಿಸ್ತಾನ ತಂಡದ ಬೌಲಿಂಗ್ ಪಡೆಯಷ್ಟು … ಇಲ್ಲದೇ ಇರಬಹುದು. ಕ್ಷಮಿಸಿ ನಾನು ಆ ಪದವನ್ನು ಇಲ್ಲಿ ಬಳಸಲಾರೆ. ಇದು S ಅಕ್ಷರದಿಂದ ಆರಂಭವಾಗುವ ಪದ, ಗ್ಲಾಮರಸ್ ಪದ’’.
ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ಕೋಚ್.

ರಾಹುಲ್ ದ್ರಾವಿಡ್ ಅವರು ಹೇಳಿದ S ಎಂಬ ಅಕ್ಷರದಿಂದ ಆರಂಭವಾಗುವ ಆ ಪದ ‘Sexy’. ಸಭ್ಯತೆಯ ಎಲ್ಲೆ ಮೀರಬಾರದು ಎಂಬ ಕಾರಣಕ್ಕೆ ದ್ರಾವಿಡ್ ಆ ಪದವನ್ನು ಸುದ್ದಿಗೋಷ್ಠಿಯಲ್ಲಿ ಬಳಸಲು ಹಿಂದೇಟು ಹಾಕಿದ್ದಾರೆ. ದ್ರಾವಿಡ್ ಅವರ ಈ ನಡವಳಿಕೆ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಉದೇ ಕಾರಣಕ್ಕೆ ರಾಹುಲ್ ದ್ರಾವಿಡ್ ಜಂಟಲ್’ಮ್ಯಾನ್ ಎನಿಸಿಕೊಂಡಿರುವುದು ಎಂದು ಕ್ರಿಕೆಟ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Prithvi Shaw replaced Rahul : “ರಾಹುಲ್ ಜಾಗದಲ್ಲಿ ಪೃಥ್ವಿ ಶಾ ಆಡಿಸಿ” ಎಂದ ಕ್ರಿಕೆಟಿಗ ದೊಡ್ಡ ಗಣೇಶ್‌ಗೆ ಕನ್ನಡಿಗರ ತಪರಾಕಿ

ಇದನ್ನೂ ಓದಿ : Ravindra Jadeja out of Asia Cup: ಏಷ್ಯಾ ಕಪ್‌ನಿಂದ ರವೀಂದ್ರ ಜಡೇಜ ಔಟ್, ಭಾರತಕ್ಕೆ ಬಿಗ್ ಶಾಕ್

India Cricket team coach Rahul Dravid hesitated to use the word Sexy in the press conference

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular