ಕೋಲ್ಕತಾ: (Mohammad Shami) ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ ಕರಾರುವಾಕ್ ಬೌಲಿಂಗ್ ದಾಳಿಗೆ ಹೆಸರುವಾಸಿ. ಶಮಿ ಕ್ರಿಕೆಟ್ ಜಗತ್ತಿನ ಖತರ್ನಾಕ್ ವೇಗದ ಬೌಲರ್’ಗಳಲ್ಲಿ ಒಬ್ಬರು. ಕ್ರಿಕೆಟ್’ನಿಂದ ಸದ್ಯ ವಿರಾಮ ಪಡೆದಿರುವ ಮೊಹಮ್ಮದ್ ಶಮಿ ಕೆಂಪು ಸುಂದರಿಯೊಬ್ಬಳ ಜೊತೆ ಲವ್ವಲ್ಲಿ ಬಿದ್ದಿದ್ದಾರೆ. ಕೆಲ ವರ್ಷಗಳ ಹಿಂದೆ ಮೊಹಮ್ಮದ್ ಶಮಿ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದ ವಿಚಾರ ನಿಮ್ಗೆ ಗೊತ್ತೇ ಇದೆ. ಶಮಿ ವಿರುದ್ಧ ಅವರ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು. ಈಗ ಕೆಂಪು ಸುಂದರಿ ಜೊತೆ ಹೊಸ ಲವ್ ಸ್ಟೋರಿ ಶುರುವಾಗಿದೆ.
ಅಂದ ಹಾಗೆ ಶಮಿ ಲವ್ವಲ್ಲಿ ಬಿದ್ದಿರುವ ಕೆಂಪು ಸುಂದರಿ ಯಾವ ಹುಡುಗಿಯೂ ಅಲ್ಲ. ಅಸಲಿ ಸಂಗತಿ ಏನಂದ್ರೆ ವೇಗಿ ಮೊಹಮ್ಮದ್ ಶಮಿ ಕೆಂಪು ಬಣ್ಣದ ಜಾಗ್ವಾರ್ ಎಫ್-ಟೈಪ್ (Jaguar F-Type) ಕಾರನ್ನು ಖರೀದಿಸಿದ್ದಾರೆ. ಶಮಿ ಖರೀದಿ ಮಾಡಿರುವ ಕಾರಿನ ಬೆಲೆ 97.93 ಲಕ್ಷ ರೂ. ತಮ್ಮ ಕೆಂಪು ಸುಂದರಿಯ ವೀಡಿಯೊಗಳನ್ನು ಸ್ವತಃ ಶಮಿ ಅವರೇ ಇನ್ಸ್’ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
31 ವರ್ಷದ ಮೊಹಮ್ಮದ್ ಶಮಿ ಕಾರು ಪ್ರಿಯ. ಅವರ ಬಳಿ ಈಗಾಗಲೇ ಟೊಯೋಟಾ ಫಾರ್ಚುನರ್, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಆಡಿ ಕಾರುಗಳಿವೆ. ಶಮಿ ಅವರ ಕಾರು ಶೋರೂಮ್’ಗೆ ಹೊಸ ಸೇರ್ಪಡ ಜಾಗ್ವಾರ್ ಎಫ್-ಟೈಪ್ ಲಕ್ಷುರಿ ಕಾರು.
ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ವಿಶ್ರಾಂತಿಯಲ್ಲಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿಲ್ಲ. ಟಿ20 ಕ್ರಿಕೆಟ್’ನಲ್ಲೂ ಅಮೋಘ ದಾಖಲೆ ಹೊಂದಿರುವ ಶಮಿ ಅವರನ್ನು ಐಸಿಸಿ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಹಲವಾರು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಪರ 17 ಟಿ20 ಪಂದ್ಯಗಳನ್ನಾಡಿರುವ ಮೊಹಮ್ಮದ್ ಶಮಿ 18 ವಿಕೆಟ್ ಪಡೆದಿದ್ದಾರೆ. ಆದರೆ ಸದ್ಯಕ್ಕೆ ಶಮಿ ಭಾರತ ಪರ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ ಮಾತ್ರ ಅವಕಾಶ ಪಡೆಯುತ್ತಿದ್ದು, ಟಿ20 ಕ್ರಿಕೆಟ್’ನಲ್ಲಿ ಕಡೆಗಣನೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : Deepak Hooda : ದೀಪಕ್ ಹೂಡ ವಿನೂತನ ವಿಶ್ವದಾಖಲೆ, ಪ್ಲೇಯಿಂಗ್ XIನಲ್ಲಿದ್ದಾಗ ಸತತ 16 ಪಂದ್ಯಗಳಲ್ಲಿ ಗೆಲುವು
ಇದನ್ನೂ ಓದಿ : Sanju Samson : ಕ್ಯಾನ್ಸರ್ ಪೀಡಿತ ಹುಡುಗನಿಗೆ ಧೈರ್ಯ ತುಂಬಿದ ಸ್ಯಾಮ್ಸನ್.. ಸಂಜು ನಡೆಗೆ ಕ್ರಿಕೆಟ್ ಫ್ಯಾನ್ಸ್ ಫಿದಾ
Team India pacer Mohammad Shami fell in love with a red beauty