ಬೆಂಗಳೂರು : ಕರ್ನಾಟಕದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ವಿ.ಎಸ್ ತಿಲಕ್ ನಾಯ್ಡು (Tilak Naidu ) ಅವರನ್ನು ಬಿಸಿಸಿಐ (BCCI) ಕಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ರಾಗಿ ಬಿಸಿಸಿಐ ನೇಮಕ ಮಾಡಿದೆ. ತಿಲಕ್ ನಾಯ್ಡು ಮುಂದಾಳತ್ವದ ಕಿರಿಯರ ಆಯ್ಕೆ ಸಮಿತಿಯ ಸದಸ್ಯರಾಗಿ ಬಂಗಾಲದ ಮಾಜಿ ವೇಗದ ಬೌಲರ್ ರಣದೇಬ್ ಬೋಸ್, ಹರ್ವಿಂದರ್ ಸಿಂಗ್ ಸೋಧಿ, ಪಾಥಿಕ್ ಪಟೇಲ್ ಮತ್ತು ಕ್ರಿಶನ್ ಮೋಹನ್ ನೇಮಕಗೊಂಡಿದ್ದಾರೆ.
1998ರಿಂದ 2010ರವರೆಗೆ ಕರ್ನಾಟಕ ಪರ ಆಡಿದ್ದ ತಿಲಕ್ ನಾಯ್ಡು, 93 ಪ್ರಥಮದರ್ಜೆ ಪಂದ್ಯಗಳಿಂದ 4386 ರನ್ ಕಲೆ ಹಾಕಿದ್ದಾರೆ. 2013ರಿಂದ 2016ರವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ತಿಲಕ್ ನಾಯ್ಡು ಕಾರ್ಯ ನಿರ್ವಹಿಸಿದ್ದರು. 2015-16ರಲ್ಲಿ KSCA ಸೀನಿಯರ್ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ಇದೇ ವೇಳೆ ಮಹಿಳಾ ಆಯ್ಕೆ ಸಮಿತಿಯನ್ನೂ ಬಿಸಿಸಿಐ ಪ್ರಕಟಿಸಿದ್ದು, ಶ್ಯಾಮಾ ದೇ ಶಾ (Shyama Dey Shaw) ಅವರನ್ನು ಆಯ್ಕೆ ಸಮಿತಿಯ ಸದಸ್ಯೆಯನ್ನಾಗಿ ನೇಮಕಗೊಳಿಸ ಲಾಗಿದೆ. ಎಡಗೈ ಬ್ಯಾಟರ್-ಮಧ್ಯಮ ವೇಗದ ಬೌಲರ್ ಆಗಿದ್ದ ಶ್ಯಾಮಾ ದೇ ಶಾ ಭಾರತ ತಂಡ ಪರ ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನಾಡಿದ್ದಾರೆ. ದೇಶೀಯ ಕ್ರಿಕೆಟ್’ನಲ್ಲಿ 1985ರಿಂದ 1997ರವರೆಗೆ ಬಂಗಾಳ ಪರ ಆಡಿದ್ದ ಶ್ಯಾಮಾ ದೇ ಶಾ 1998ರಿಂದ 2002ರವರೆಗೆ ರೇಲ್ವೇಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ನಿವೃತ್ತಿಯ ನಂತರ ಎರಡು ವರ್ಷ ಬಂಗಾಳ ಮಹಿಳಾ ತಂಡದ ಆಯ್ಕೆ ಸಮಿತಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಕಲ್ಪನಾ ವೆಂಕಟಾಚಾರ್ ಬಿಸಿಸಿಐ ಮಹಿಳಾ ಆಯ್ಕೆ ಸಮಿತಿಯ ಸದಸ್ಯೆಯಾಗಿದ್ದಾರೆ.
🚨 NEWS 🚨: BCCI announces Women’s Selection Committee & Junior Cricket Committee appointments.
— BCCI (@BCCI) June 19, 2023
The CAC has unanimously recommended Ms Shyama Dey Shaw and Mr VS Thilak Naidu for the said positions.
More Details 🔽https://t.co/EGKhomrBE1
ಬಿಸಿಸಿಐ ಕಿರಿಯರ ಆಯ್ಕೆ ಸಮಿತಿ:
ತಿಲಕ್ ನಾಯ್ಡು (ಮುಖ್ಯಸ್ಥ)
ರಣದೇಬ್ ಬೋಸ್
ಹರ್ವಿಂದರ್ ಸಿಂಗ್ ಸೋಧಿ
ಪಾಥಿಕ್ ಪಟೇಲ್
ಕ್ರಿಶನ್ ಮೋಹನ್
ಬಿಸಿಸಿಐ ಮಹಿಳಾ ಆಯ್ಕೆ ಸಮಿತಿ:
ನೀತು ಡೇವಿಡ್ (ಮುಖ್ಯಸ್ಥೆ)
ರೇಣು ಮಾರ್ಗರೇಟ್
ಆರತಿ ವೈದ್ಯ,
ಕಲ್ಪನಾ ವೆಂಕಟಾಚಲ
ಶ್ಯಾಮಾ ದೇ ಶಾ
ಇದನ್ನೂ ಓದಿ : Shubman Gill : ಪ್ಯಾರಿಸ್’ನಲ್ಲಿದ್ದಾರೆ ಶುಭಮನ್ ಗಿಲ್, ಟೀಮ್ ಇಂಡಿಯಾ ಪ್ರಿನ್ಸ್’ಗೆ ನಂ.7 ಗಿಫ್ಟ್ ಕೊಟ್ಟ PSG
ಇದನ್ನೂ ಓದಿ : Ambati Rayudu : ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ರೆಡಿಯಾದ ಅಂಬಾಟಿ ರಾಯುಡು
Tilak Naidu BCCI Junior Cricket Committee Head