ಟೊಕಿಯೋ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ಪ್ರವೀಣ್ ಜಾಧವ್, ಅಟನು ದಾಸ್ ಮತ್ತು ತರುಂದೀಪ್ ರಾಯ್ 6-2 ಅಂತರದಿಂದ ಕಜಕಿಸ್ತಾನ ವನ್ನ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಬಿಲ್ಲುಗಾರಿಕೆ ಸ್ಪರ್ಧೆಯ 16 ರ ಸುತ್ತಿನಲ್ಲಿ, ನಾಲ್ಕನೇ ಸೆಟ್ ನಲ್ಲಿ ಮೊದಲ ಮೂರು ಹೊಡೆತಗಳ ನಂತರ ಭಾರತ ಒಂದು ಪಾಯಿಂಟ್ ಹಿನ್ನಡೆ ಕಂಡಿತ್ತು. ನಂತರದಲ್ಲಿ ಸತತ ಎರಡು 10 ಸೆ ಪುರುಷರ ತಂಡವು ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಪಡೆದುಕೊಂಡಿದೆ. ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ಕಜಕಿಸ್ತಾನದ ಅಬ್ದುಲಿನ್ ಇಲ್ಫಾಟ್, ಗ್ಯಾಂಕಿನ್ ಡೆನಿಸ್ ಮತ್ತು ಮುಸ್ಸಾಯೆವ್ ಸಂಜಾರ್ ಭರ್ಜರಿ ಅಂತದಿಂದ ಸೋಲಿಸಿದೆ.
ಇದನ್ನೂ ಓದಿ : Tokyo 2020 ಒಲಿಂಪಿಕ್ಸ್ ನಲ್ಲಿ ಮೊದಲ ಪದಕ: ಬೆಳ್ಳಿ ಗೆದ್ದ ಮೀರಾಬಾಯಿ ಚಾನು
ಬಿಲ್ಲುಗಾರಿಕೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆವಿವೇಯ್ಟ್ಸ್ ಕೊರಿಯಾ ವಿರುದ್ದ ಸೆಣೆಸಾಟವನ್ನು ನಡೆಸಲಿದೆ. ಇದೀಗ ಕ್ವಾರ್ಟರ್ ಫೈನಲ್ ಪ್ರವೇಶ ಕಂಡಿರುವ ಹಿನ್ನೆಲೆಯಲ್ಲಿ ಭಾರತದ ಪುರುಷರು ಪದಕದ ಭರವಸೆಯನ್ನು ಹುಟ್ಟಿಸಿದ್ದಾರೆ.