Russia: ಐಷಾರಾಮಿ ಬಂಗ್ಲೆ….! ಚಿನ್ನದ ಕಮೋಡ್….! ಆರಕ್ಷಕನ ಭ್ರಷ್ಟಾಚಾರಕ್ಕೆ ಬೆಚ್ಚಿಬಿದ್ದ ಸರ್ಕಾರ…!

ಭ್ರಷ್ಟಾಚಾರ ಭಾರತದಲ್ಲೊಂದೇ ಅಲ್ಲ ವಿಶ್ವದ ಎಲ್ಲೆಡೆಯೂ ಅಷ್ಟೇ ಬಲವಾಗಿ ಬೇರು ಬಿಟ್ಟಿದೆ. ರಷ್ಯಾದಲ್ಲು ಇಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ರಷ್ಯಾದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳಿಗೆ ಶಾಕ್ ಎದುರಾಗಿದೆ. ಮನೆಯಲ್ಲೇ ಅಪಾರ ಚಿನ್ನಾಭರಣದ ಜೊತೆ ಚಿನ್ನದ ಕಮೋಡ್ ಕೂಡ ಪತ್ತೆಯಾಗಿದೆ.

ರಷ್ಯಾದ ಸಂಚಾರ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಫೊನೊವ್ ಎಂಬುವವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆರೋಪದ  ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಭ್ರಷ್ಟ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಚಿನ್ನದ ಕಮೋಡ್ ಪತ್ತೆಯಾಗಿದೆ.

ಐಷಾರಾಮಿ ಬಂಗ್ಲೆ ಕಟ್ಟಿದ್ದ ಪೊಲೀಸ್ ಅಧಿಕಾರಿ ಲಕ್ಷಾಂತರ ರೂಪಾಯಿ ವಸ್ತುಗಳನ್ನು ಅಲಂಕಾರಕ್ಕೆ ಬಳಸಿದ್ದು, ಬಾತ್ ರೂಂನಲ್ಲಿ ಕಮೋಡ್ ಸೇರಿದಂತೆ ಎಲ್ಲ ವಸ್ತುಗಳನ್ನು ಚಿನ್ನದಲ್ಲೇ ಮಾಡಿಸಿಕೊಂಡಿದ್ದಾನೆ. ಬಾತ್ ರೂಂ ಮಾತ್ರವಲ್ಲ ಅಡುಗೆ ಮನೆ, ಹಾಲ್ ನ ಅಲಂಕಾರಕ್ಕೂ ಚಿನ್ನ ಬಳಸಿದ್ದಾನಂತೆ.  ಇದನ್ನು ಕಂಡ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಪೊಲೀಸ್ ಅಧಿಕಾರಿ ಕರ್ನಲ್ ಅಲೆಕ್ಸಿ ಸಪೋನೊವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಒಟ್ಟು 6 ಜನರನ್ನು ಬಂಧಿಸಿದ್ದಾರೆ.

ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಈ ಪೊಲೀಸನ ಭ್ರಷ್ಟಾಚಾರ ಕಂಡು ಬೆಚ್ಚಿ ಬಿದ್ದಿದ್ದಾರೆ.R

Comments are closed.