Uefa womens euro 2022 : ಜರ್ಮನಿ ತಂಡಕ್ಕೆ 2-1 ಅಂತರದಲ್ಲಿ ಸೋಲನ್ನುಣಿಸಿದ ಇಂಗ್ಲೆಂಡ್ ಮಹಿಳಾ ಫುಟ್ಬಾಲ್ ತಂಡವು UEFA ಮಹಿಳಾ ಯುರೋ 2022 ಫೈನಲ್‌ನಲ್ಲಿ ಜಯಭೇರಿ ಬಾರಿಸಿದೆ. ಈ ಗೆಲುವನ್ನು ಇಂಗ್ಲೆಂಡ್ ತಂಡದ ಮಹಿಳಾ ಫುಟ್ಬಾಲ್ ಆಟಗಾರ್ತಿ ಕ್ಲೋಯ್ ಕೆಲ್ಲಿ ಅತ್ಯಂತ ವಿಭಿನ್ನವಾಗಿ ಸಂಭ್ರಮಿಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. ಏಕೆಂದರೆ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದ ಕ್ಲೋಯ್ ಕೆಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸ್ಟೈಲ್ನಲ್ಲಿ ಜೆರ್ಸಿ ಕಳಚಿ ಸಂಭ್ರಮಿಸಿದ್ದಾರೆ.
Chloe Kelly goal😍❤️
— Maheen (@Madridheen) July 31, 2022
She give lead 2_1#WEURO2022 pic.twitter.com/KiNpJclU7M
ಇಂಗ್ಲೆಂಡ್ ಗೆಲುವಿಗೆ ಪ್ರಮುಖ ಕಾರಣ ಎನಿಸಿದ್ದೇ ಕ್ಲೋಯ್ ಕೆಲ್ಲಿ. ಏಕೆಂದರೆ ಕಾರ್ನರ್ನಿಂದ ಬಂದ ಪಾಸ್ನ್ನು ಗೋಲು ಆಗಿ ಬದಲಾಯಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಈ ಸಂತಸವನ್ನು ಸಂಭ್ರಮಿಸಲು ವಿಶೇಷ ಮಾರ್ಗ ಆಯ್ದುಕೊಂಡ ಕ್ಲೋಯ್ ಕೆಲ್ಲಿ ಜೆರ್ಸಿ ಕಳಚಿ ಸಂಭ್ರಮಿಸಿದ್ದಾರೆ.
Chloe Kelly. England's hero 💥 pic.twitter.com/U3NAe90igg
— B/R Football (@brfootball) July 31, 2022
ಕೊನೆಯ ಗೋಲು ಬಾರಿಸಿದ ಕ್ಲೋಯ್ ಕೆಲ್ಲಿ ರೆಫರಿಯತ್ತ ಮುಖ ಮಾಡುತ್ತಾರೆ. ರೆಫರಿ ಈ ಗೋಲನ್ನು ಮಾನ್ಯ ಮಾಡುತ್ತಿದ್ದಂತೆಯೇ ಕ್ಲೋಯ್ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ತಂಡದ ಸಹ ಆಟಗಾರ್ತಿಯ ಜೊತೆ ಸೇರಿದ ಕ್ಲೋಯ್ ಕೆಲ್ಲಿ ಮೈದಾನದಲ್ಲೇ ಜೆರ್ಸಿ ಕಳಚಿ ಗಾಳಿಯಲ್ಲಿ ತಿರುಗಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ಗೆ ತೆರಳುವವರೆಗೂ ಕ್ಲೋಯ್ ಜೆರ್ಸಿ ಕಳುಚಿಯೇ ತಿರುಗಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಧೂಳೆಬ್ಬಿಸುತ್ತಿದೆ.
ಇದನ್ನು ಓದಿ : actress meghana raj : ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾದ ನಟಿ ಮೇಘನಾ ರಾಜ್
ಇದನ್ನೂ ಓದಿ : modi will be bjps pm candidate : 2024ರಲ್ಲಿಯೂ ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿಯೆಂದ ಅಮಿತ್ ಶಾ
Uefa womens euro 2022 chloe kelly removed her jersey after winning goal video goes viral on social media