modi will be bjps pm candidate : 2024ರಲ್ಲಿಯೂ ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿಯೆಂದ ಅಮಿತ್​ ಶಾ

ಪಾಟ್ನಾ : modi will be bjps pm candidate : ಬಿಜೆಪಿಯಲ್ಲಿ ವೃದ್ಧರಿಗೆ ಜಾಗವಿಲ್ಲ ಎಂಬ ವಿಚಾರ ಈಗಾಗಲೇ ನಡೆದ ಅನೇಕ ನಿದರ್ಶನಗಳಲ್ಲಿ ಜಗಜ್ಜಾಹೀರವಾಗಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಇರಲಕ್ಕಿಲ್ವಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇದೆ. ಈ ವಿಚಾರವಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಾಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ 2024ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಹಾಗೂ ಜೆಡಿಯು ಮೈತ್ರಿಯು ಮುಂದುವರಿಯಲಿದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂದು ಸ್ಪಷ್ಟನೆ ನೀಡಿದ್ದಾರೆ.


ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಾಶ್ಮೀರದ ಮಹಿಳೆಯರು ತಯಾರಿಸಿದ ತ್ರಿವರ್ಣ ಧ್ಚಜವನ್ನು ವಿತರಣೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಮೀಸಲಾತಿ ರದ್ದು ಮಾಡಿದ ಬಳಿಕ ಆದ ಹಲವು ಬದಲಾವಣೆಗಳನ್ನು ಸಂಭ್ರಮಿಸುವ ಸಲುವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.


ಇದೇ ಸಭೆಯಲ್ಲಿ ಬಿಹಾರದ ಜೆಡಿಯು ಪಕ್ಷದ ಜೊತೆಯಲ್ಲಿ ಬಿಜೆಪಿ ಮೈತ್ರಿ ವಿಚಾರವಾಗಿಯೂ ಚರ್ಚೆ ನಡೆಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ ಈ ಮೈತ್ರಿಯು ಯಾವ ಗೊಂದಲವಿಲ್ಲದೇ ಮುಂದುವರಿಯಲಿದೆ ಎಂದು ಅಮಿತ್​ ಶಾ ಸ್ಪಷ್ಟನೆ ನೀಡಿದ್ದಾರೆ.


ಅಲ್ಲದೇ ಪ್ರಧಾನಿ ಮೋದಿಯ ರಾಜಕೀಯ ನಿವೃತ್ತಿಯ ಎಲ್ಲಾ ಗೊಂದಲಗಳಿಗೆ ಇದೇ ವೇಳೆ ತೆರೆ ಎಳೆದ ಅಮಿತ್​ ಶಾ, 2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರೇ ಮುಂದುವರಿಯಲಿದ್ದಾರೆ . ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.


ಇನ್ನು ಆಜಾದಿ ಕಾ ಅಮೃತ್​​ ಮಹೋತ್ಸವ್​ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅಮಿತ್​ ಶಾ , ಈ ಬಾರಿ ನಾವು ಪ್ರತಿಯೊಂದು ಮನೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಾವು ಕರೆ ನೀಡಿದ್ದೇವೆ. ದೇಶಭಕ್ತಿಗೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರದ ಮೂಲೆ ಮೂಲೆಗಳಲ್ಲಿಯೂ ದೇಶದ ಧ್ವಜವನ್ನು ಹಾರಿಸುವುದು ನಮ್ಮ ಉದ್ದೇಶ ಎಂದು ಹೇಳಿದರು .

ಇದನ್ನು ಓದಿ : Salman Khan : ಸಲ್ಮಾನ್​​ ಖಾನ್​ಗೆ ಲೈಸೆನ್ಸ್​ ಪರವಾನಗಿ ನೀಡಿದ ಮುಂಬೈ ಪೊಲೀಸ್​ ಇಲಾಖೆ

ಇದನ್ನೂ ಓದಿ : actress meghana raj : ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾದ ನಟಿ ಮೇಘನಾ ರಾಜ್​

narendra modi will be bjps pm candidate for 2024 general elections announces amit shah

Comments are closed.