ಕ್ರಿಕೇಟ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡುದು ಹಣ್ಣು ಹಣ್ಣು ಮುದುಕರವರೆಗು ಕ್ರಿಕೇಟ್ ಅನ್ನು ಇಷ್ಟಪಡುವವರಿದ್ದಾರೆ. ನಮ್ಮ ದೇಶದ ಗಲ್ಲಿ ಗಲ್ಲಿಗಳಲ್ಲಿ ಇಂದು ನಾವು ಕ್ರಿಕೇಟ್ ಪ್ರೀಯರನ್ನು ಕಾಣುತ್ತೇವೆ. ಅಲ್ಲದೇ ಕ್ರಿಕೇಟ್ ಈಗ ಬರಿಯ ಆಟವಾಗಿ ಉಳಿದಿಲ್ಲ ಅದರಲ್ಲೂ ಭಾರತದ ಅದ್ದೂರಿ ಕ್ರಿಕೇಟ್ ಉತ್ಸವ ಎನ್ನಿಸಿಕೊಂಡಿರು ಐಪಿಎಲ್ ಹಲವಾರು ದೇಸಿ ಪ್ರತಿಭೆಗಳ ಬದುಕನ್ನೆ ಬದಲಿಸಿದೆ. ಇದಕ್ಕೆ ಉದಾಹರಣೆ ಎಂದರೆ ಬಡತನದಿಂದ ಬಂದು ಐಪಿಎಲ್ ಅಂಗಳದಲ್ಲಿ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ (Rajasthan Royals) ವೇಗದ ಬೌಲರ್ ಉಮ್ರಾನ್ ಮಲ್ಲಿಕ್.
ಜಮ್ಮು ಕಾಶ್ಮಿರದ ಹಣ್ಣಿನ ವ್ಯಾಪಾರಿಯ ಮಗನಾಗಿರುವ ಉಮ್ರಾನ್ ಮಲ್ಲಿಕ್ ಬಾಲ್ಯದಿಂದಲೆ ಬಡತನದ ಬೇಗೆಯಲ್ಲಿ ಬೆಂದವರು. ಆದರೂ ಇತನಿಗೆ ಎಳವೆಯಿಂದಲೇ ಕ್ರಿಕೆಟ್‌ನಲ್ಲಿ ಅತೀವ ಉತ್ಸಾಹ. ಗೆಳೆಯರೊಂದಿಗೆ ಟೆನ್ನಿಸ್ ಚೆಂಡಿನಲ್ಲಿ ಕ್ರಿಕೇಟ್ ಆಡಲು ಆರಂಭಿಸಿದ. ಅದಾಗಲೇ ತನ್ನ ವೇಗದ ಬೌಲಿಂಗ್ ನಿಂದಾಗಿ ದೆಹಲಿಯ ಘಜ್ನಿ ಎಂದು ಹೆಸರು ಪಡೆದಿದ್ದ.
ಒಬ್ಬ ಉತ್ತಮ ಕ್ರಿಕೇಟ್ ಆಟಗಾರ ಆಗಬೇಕೆಂಬ ಆಸೆಯೊಂದಿಗೆ ಅತಿ ಹೆಚ್ಚು ಸಮಯವನ್ನು ಮೈದಾನದಲ್ಲೆ ಕಳೆಯುತ್ತಿದ್ದ ಮಲ್ಲಿಕ್. ಈತನ ಬೌಲಿಂಗ್ ವೇಗವನ್ನು ಗಮನಿಸಿದ ಜಮ್ಮು ಕಾಶ್ಮಿರ ಅಂಡರ್ ೧೯ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಜಮ್ಮು ಕಾಶ್ಮೀರ ಕ್ರಿಕೇಟ್ ಅಸೋಸಿಯೇಷನ್‌ಗೆ ಹೆಸರನ್ನು ಸೂಚಿಸಿದರು. ಅಂಡರ್ ೧೯ ಅಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಈತ ಭಾರತ ಕ್ರಿಕೇಟ್ ತಂಡದ ಆಟಗಾರ ಇರ್ಫಾನ್ ಪಠಾನ್ ಅವರ ಗರಡಿಯಲ್ಲಿ ಪಳಗಳಾರಂಭಿಸಿದ. ಅದಾಗಲೇ ಮಲ್ಲಿಕ್ ೧೪೦ ಕಿ.ಮೀ ವೇಗದಲ್ಲಿ ಬೌಲಿಂಗ್ ದಾಳಿಯನ್ನು ಆರಂಭಿಸಿದ್ದರು.
ಮಲಿಕ್ ಆಟದ ಬಗ್ಗೆ ತಿಳಿದಿದ್ದ Sun risers ಹೈದರಬಾದ್ ಆಟಗಾರ ಅಬ್ದುಲ್ ಸಮದ್ ಈತನ ಬೌಲಿಂಗ್ ವೀಡಿಯೊಗಳನ್ನು Sunrisers ತಂಡದ ನಿರ್ವಾಹಕರಿಗೆ ತೊರಿಸಿದ. ಇದರಿಂದ ಪ್ರೇರೆಪಿತರಾದ ಅವರು ೨೦೨೦ರ ಐಪಿಎಲ್ ಹರಾಜು ಪ್ರಕ್ರೀಯೆಯಲ್ಲಿ ಮಲ್ಲಿಕ್‌ನನ್ನು ನೆಟ್ ಬೌಲರ್ ಆಗಿ ಖರೀದಿಸಿತು. ಈ ಮುಖೇನ ಐಪಿಎಲ್ ಅಂಗಳಕ್ಕೆ ಪಾದರ್ಪಣೆ ಮಾಡಿದ ಮಲ್ಲಿಕ್ ತನ್ನ ವೇಗದ ಬೌಲಿಂಗ್ ನಿಂದಲೇ ಕಡಿಮೆ ಅವಧಿಯಲ್ಲಿ ಕ್ರಿಕೇಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಈವರೆಗೆ ೧೯ ಟಿ-೨೦ ಪಂದ್ಯಗಳನ್ನು ಆಡಿರುವ ಮಲ್ಲಿಕ್ ೨೪ ವಿಕೇಟ್‌ಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಶರವೇಗದ ಬೌಲಿಂಗ್ ಮೂಲಕ ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸಿದ್ದಾರೆ. ಕಿರಿಯ ವಯಸ್ಸಿನಲ್ಲೆ ಹಲವಾರು ದಾಖಲೆಗಳನ್ನು ಮುರಿದಿರುವ ರಣವೇಗಿ ಮಲ್ಲಿಕ್ ಭಾರತೀಯ ತಂಡದ ಭವಿಷ್ಯದ ದ್ರುವತಾರೆಯಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ: Tilak Varma : IPL ಮೂಲಕ ಕನಸು ಬೆನ್ನತ್ತಿರುವ ಯುವ ಆಟಗಾರ ತಿಲಕ್ ವರ್ಮ
Umran Mailk The Pace Sensation